ನ.18-19ಕ್ಕೆ ಸಿಆರ್‌ಎಸ್‌ನಿಂದ ಮೆಟ್ರೋ ಮಾರ್ಗ ಪರಿಶೀಲನೆ

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಸೇವೆ , ಶೀಘ್ರ ಪ್ರಮಾಣ ಪತ್ರ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್‌

Team Udayavani, Nov 14, 2020, 1:53 PM IST

bng-tdy-2

ಬೆಂಗಳೂರು: ದೀಪಾವಳಿ ಮುಗಿಯುತ್ತಿದ್ದಂತೆ “ನಮ್ಮ ಮೆಟ್ರೋ’ 2ನೇ ಹಂತದ ಯೋಜನೆಯ ಯಲಚೇನಹಳ್ಳಿ – ಅಂಜನಾ ಪುರ ನಡುವಿನ ಮಾರ್ಗ ಪರಿಶೀಲನೆಗೆ ರೈಲ್ವೆ ಸುರಕ್ಷಿತ ಆಯುಕ್ತರ ತಂಡ ಭೇಟಿ ನೀಡಲಿದೆ. ಈ ಮೂಲಕ ಉದ್ದೇಶಿತ ಮಾರ್ಗದ ಸೇವೆಗೆಕಾಲ ಸನ್ನಿಹಿತವಾಗಿದೆ.

ಯಲಚೇನಹಳ್ಳಿ- ಅಂಜನಾಪುರ ನಡುವೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆದಿದ್ದು, ಇದರ ಭಾಗವಾಗಿ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌)ರಿಗೆ ಆಹ್ವಾನ ಕೂಡನೀಡಲಾಗಿದೆ. ನ.18-19ರಂದು ಸಿಆರ್‌ಎಸ್‌ ತಂಡ ಭೇಟಿ ನೀಡಲಿದೆ. ಪರಿಶೀಲನೆ ವೇಳೆ ಯಾವುದೇ ಲೋಪಗಳಿಲ್ಲದಿದ್ದರೆ ಶೀಘ್ರ ಪ್ರಮಾಣಪತ್ರ ದೊರೆಯಲಿದೆ. ತಿಂಗಳಾಂತ್ಯಕ್ಕೆ ಚಾಲನೆ ದೊರೆಯಲಿದೆ.

“ಈ ತಿಂಗಳ ಮೊದಲ ವಾರದಲ್ಲಿ ಸಿಆರ್‌ ಎಸ್‌ ತಂಡ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಭೇಟಿ ನೀಡಿತ್ತು. ಈ ವೇಳೆ 6.29 ಕಿ.ಮೀ.ಉದ್ದದ ರೀಚ್‌-4 ಬಿ (ಯಲಚೇನ ಹಳ್ಳಿ -ಅಂಜನಾಪುರ) ಮಾರ್ಗಕ್ಕೆ ಸಂಬಂಧಿಸಿದ ಅಂದಾಜು 300 ಪುಟಗಳುಳ್ಳ ಪವರ್‌ ಪಾಯಿಂಟ್‌ಗಳೊಂದಿಗೆ ಸುದೀರ್ಘ‌ ಮಾಹಿತಿಯನ್ನು ನಿಗಮದ ಎಂಜಿನಿಯರ್‌ಗಳು ನೀಡಿದ್ದರು. ತದನಂತರ ಪರಿಶೀಲನೆಗೆ ದಿನಾಂಕ ನಿಗದಿಪಡಿಸಿ, ಸೂಚಿಸುವುದಾಗಿ ಸಿಆರ್‌ಎಸ್‌ ತಂಡಹೇಳಿತ್ತು’ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ “ಉದಯವಾಣಿ’ಗೆಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್, “ಸಿಆರ್‌ಎಸ್‌ ತಂಡ ಪರಿಶೀಲನೆಗೆ ಆಗಮಿಸಲಿದೆ. ಆದಷ್ಟು ಬೇಗ ಭೇಟಿ ನೀಡುವಂತೆ ದೀಪಾವಳಿ ನಂತರ ಮತ್ತೂಮ್ಮೆ ಫೋನ್‌ ಮೂಲಕ ಮನವಿ ಮಾಡ ಲಾಗುವುದು’ ಎಂದು ಸ್ಪಷ್ಟಪಡಿಸಿದರು. ನ.1ಕ್ಕೆ ಮಾರ್ಗವನ್ನು ವಾಣಿಜ್ಯ ಸೇವೆಗೆ ಮುಕ್ತಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿತ್ತು. ತಾಂತ್ರಿಕ ಕಾರಣ ಸಣ್ಣ ಪುಟ್ಟ ಕಾಮಗಾರಿ ಇನ್ನೂ ಬಾಕಿ ಇದ್ದರಿಂದ ಸಿಆರ್‌ ಎಸ್‌ಗೆ ಆಹ್ವಾನ ನೀಡುವಲ್ಲಿ ತಡವಾಯಿತು.

20ಕ್ಕೆ ಎಂದಿನಂತೆ ಸೇವೆ :  ಈ ಮಧ್ಯೆ ಯಲಚೇನಹಳ್ಳಿ- ಅಂಜನಾಪುರ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ಪೂರ್ವಸಿದ್ಧತೆಕಾರ್ಯ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ ಹಸಿರು ಮಾರ್ಗದ ಆರ್‌.ವಿ.ರಸ್ತೆ-ಯಲಚೇನ ಹಳ್ಳಿ ನಡುವೆ ನ.17ರಿಂದ19ರವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ.17ರ ಬೆಳಗ್ಗೆ 7ರಿಂದ ರಾತ್ರಿ9ರವರೆಗೆ ನಾಗಸಂದ್ರ ನಿಲ್ದಾಣದಿಂದ ಆರ್‌.ವಿ.ರಸ್ತೆ ನಿಲ್ದಾಣದವರೆಗೆ ಮಾತ್ರ ಸೇವೆ ಇರಲಿದೆ. ನ.20 ರಂದು ಎಂದಿನಂತೆ ನಾಗಸಂದ್ರ- ಯಲಚೇನಹಳ್ಳಿ ನಡುವೆ ಸೇವೆ ಪುನಾ ರಂಭಗೊಳ್ಳಲಿದೆ ಎಂದು ಬಿಎಂಆರ್‌ ಸಿಎಲ್‌ ಪ್ರಕಟಣೆ ತಿಳಿಸಿದೆ.

ಮಾರ್ಗದಲ್ಲಿನ ಮೆಟ್ರೋ ನಿಲ್ದಾಣಗಳು : ಅಂಜನಾಪುರ ರೋಡ್‌ಕ್ರಾಸ್‌,ಕೃಷ್ಣಲೀಲಾ ಪಾರ್ಕ್‌, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್‌

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

High Court: ಗುರು ರಾಘವೇಂದ್ರ ಬ್ಯಾಂಕ್‌ ಅಧ್ಯಕಗೆ ಜಾಮೀನು ನಿರಾಕರಣೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Arrested: ಬಿಹಾರದ ಬೆಡ್‌ಶೀಟ್‌ ಗ್ಯಾಂಗ್‌ನ 8 ಮಂದಿ ಸೆರೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್‌; ಆರೋಪಿ ಸೆರೆಗೆ 3 ತಂಡ ರಚನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.