ದೀಪಗಳ ಹಬ್ಬ…ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ

ಬಲಿಯನ್ನು ಜಗದ ಜನರು ನೆನಪಿಸುವ ಸಲುವಾಗಿ 'ಬಲಿಪಾಡ್ಯ' ಎಂಬ ಆಚರಣೆ ಬಹಳ ಪ್ರಾಮುಖ್ಯ ಪಡೆದಿದೆ .

Team Udayavani, Nov 14, 2020, 4:04 PM IST

ದೀಪಗಳ ಹಬ್ಬ…ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ

ಹಬ್ಬಗಳ ರಾಜ ದೀಪಾವಳಿ . ನಮ್ಮ ತುಳುನಾಡಿನ ನೆಚ್ಚಿನ ಮಾರ್ನೆಮಿ ( ನವರಾತ್ರಿ ) ಯ ನಂತರ ಜಗಮಗಿಸುತ ಬರುವ ಹಬ್ಬವೇ ದೀಪಗಳ ಸಾಲು ಸಾಲು ಹಬ್ಬ ದೀಪಾವಳಿ . ಈ ಹಬ್ಬದ ಹೆಸರು ಕೇಳಿದಾಕ್ಷಣ ಎಲ್ಲಾ ಮಕ್ಕಳ ಬಾಯಿಯಲ್ಲಿ ನೀರೂರುವುದಂತು ಸಹಜ . ಏಕೆಂದರೆ ಈ ಹಬ್ಬದ ಸಮಯದ ಉದ್ದಿನ ದೋಸೆ ಹಾಗೂ ಮೆಣಸಿನ ಗಟ್ಟಿ ಮರೆಯಲಸದಳ . ಇದು ದೀಪಾವಳಿಯ ವಿಶೇಷವೂ ಹೌದು .

‘ಹಬ್ಬವಿಲ್ಲದ ಮನೆಯಿಲ್ಲ , ಹುಬ್ಬಿಲ್ಲದ ಹಣೆಯಿಲ್ಲ’ ಎಂಬ ನುಡಿ ಹಬ್ಬ ಹರಿದಿನದ ಪ್ರಾಶಸ್ತ್ಯ ಎತ್ತಿ ಹಿಡಿಯುತ್ತದೆ. ನಮ್ಮದು ಹಳ್ಳಿ ಪ್ರದೇಶ . ಕೆಲವೊಮ್ಮೆ ಅಗತ್ಯತೆಯ ವಸ್ತು ತರಲು ಪೇಟೆಯ ಕಡೆಗೆ ತೆರಳಬೇಕಾದುದು ಅನಿವಾರ್ಯ . ಆ ದಿನ ತಂದೆಯೊಂದಿಗೆ ನಾನೂ ಹೋಗಿದ್ದೆ . ಕೆಲವೊಂದು ಹಣತೆ ಇಲಿಗಳ ಉಪಟಳದಿಂದ ಹಾಳಾಗಿದೆ ! ಹೊಸದು ತನ್ನಿ ಎಂದು  ತಾಯಿ ಕರೆಮಾಡಿ ಹೇಳಿದರು . ಅಂತೆಯೇ ಒಂದಷ್ಟು ಹೊಸ ಹಣತೆ ತೆಗೆದುಕೊಂಡು ಬಂದೆವು .

ಅಪ್ಪಾ…ನೀವು ಸಣ್ಣವರಿರುವಾಗ ಇಂತಹ ಹಣತೆ ದೊರಕುತ್ತಿತ್ತಾ ?  ಎಂದು ಆ ಸಣ್ಣ , ಸುಂದರ ಬಳ್ಳಿ ಬಿಡಿಸಿದ ಚಿತ್ತಾರದ , ನಯವಾದ ಹಣತೆಯನ್ನು ಸವರುತ್ತಾ ಕೇಳಿದೆ .

ನಮ್ಮ ಬಾಲ್ಯದ ದಿನಗಳಲ್ಲಿ ಅಡಕೆ ಸಿಪ್ಪೆ ಸುಳಿದ ನಂತರ ಭಾಗವಾಗಿ ಉಳಿದ ಆ ಸಿಪ್ಪೆಗೆ ಎಣ್ಣೆ ಹೊಯ್ದು ಹಣತೆ ಮಾಡುತ್ತಿದ್ದೇವು  ಎಂದರು . ನಿಸರ್ಗದ ಸೊಬಗಿನ್ನು ಅನುಭವಿಸಿದ ಪೂರ್ವಜರು , ಅವರ ಕಟ್ಟುಪಾಡು ಸೋಜಿಗವೆನಿಸಿತು. ನರಕ ಚತುರ್ದಶಿ – ಅಮವಾಸ್ಯೆ –  ಬಲಿಪಾಡ್ಯ ಸಾಮಾನ್ಯವಾಗಿ ಹೀಗೆ ಮೂರುದಿನ ದೀಪಾವಳಿಯನ್ನು ಆಚರಿಸಲಾಗುತ್ತದೆ .

ಇದನ್ನೂ ಓದಿ:ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಯೋಧರ ಜತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ನರಕ ಚತುರ್ದಶಿಯಿಂದ ದೀಪಾವಳಿ ಆರಂಭ . ದೇವಾಲಯ – ಜಿನಾಲಯ ,  ಮನೆ – ಮಠಗಳಲೆಲ್ಲಾ ದೀಪಗಳು ರಾರಾಜಿಸುತ್ತದೆ. ನರಕ ಚತುರ್ದಶಿ ಎಂದಾಗ ನೆನಪಾಗುವುದು ನರಕಾಸುರನ ವಧೆ . ದೇವಾನು ದೇವತೆಗಳಿಗೆ ಕಂಟಕರೂಪಿಯಾಗಿದ್ದವನು ಈ ನರಕಾಸುರ . ದೇವತೆಗಳನ್ನು ಕದ್ದೊಯ್ದಿದ್ದ  , ಬ್ರಹ್ಮನ ಮಗಳಾದ ಚತುರ್ದಶಿಯನ್ನು ಅಪಹರಿಸಿದ್ದ . ಇವಕ್ಕೆಲ್ಲದಕ್ಕೂ ಅಂತ್ಯ ಹಾಡಲು ಧರೆಗೆ ಅವತರಿಸಿದವನೇ ಶ್ರೀ ಕೃಷ್ಣ ಪರಮಾತ್ಮ . ಅಶ್ವೀಜ ಮಾಸದ ಚತುರ್ದಶಿಯಂದು ನರಕಾಸುರನನ್ನು , ಶ್ರೀ ಕೃಷ್ಣ ಸಂಹರಿಸಿದ್ದರಿಂದ , ಆತನನ್ನು ನೆನಪಿಡುವ ಅಥವಾ ಸ್ಮರಿಸುವ ನಿಟ್ಟಿನಲ್ಲಿ ನರಕ ಚತುರ್ದಶಿಯನ್ನು ಆಚರಿಸಲಾಗುತ್ತಿದೆ ಎಂಬ ವಾಡಿಕೆ ರೂಢಿಯಲ್ಲಿದೆ .

ಅಭ್ಯಂಗ ಸ್ನಾನ ( ಎಣ್ಣೆ ಸ್ನಾನ ) ಈ ದಿನದ ವಿಶೇಷ  ಹಾಗೂ ಜಿನ ಚೈತ್ಯಾಲಯಗಳಲ್ಲಿ ಜಿನ ಭಗವಂತನಿಗೆ ಎಣ್ಣೆ ಮಜ್ಜನ ಮಾಡಲಾಗುತ್ತದೆ .

ಅಮವಾಸ್ಯೆಯ ದಿನ. ಇದು ದೀಪಾವಳಿ ಹಬ್ಬದ ಎರಡನೇ ದಿನ . ಜೈನ ಧರ್ಮದ ಪ್ರಕಾರ ವರ್ಧಮಾನ ಕಾಲದ ಇಪ್ಪತ್ತನಾಲ್ಕನೇ ತೀರ್ಥಂಕರನಾದ ಭಗವಾನ್‌ ಶ್ರೀ ಮಹಾವೀರ ಸ್ವಾಮಿ ಮೋಕ್ಷ ಪಡೆದಿದ್ದು ಈ ದೀವಳಿಗೆಯ ಬೆಳಕಿನಲ್ಲಿ ಎಂಬ ಪ್ರತೀತಿ ಇದೆ . ಹಾಗಾಗಿ ಜೈನ ಧರ್ಮೀಯರು ಈ ದಿನ ಶುಚಿಭೂರ್ತ ರಾಗಿ ಜಿನಾಲಯ ( ಬಸದಿ ) ಗೆ ತೆರಳಿ ‘ ಅರ್ಘ್ಯ ಎತ್ತುವ’ ಪದ್ದತಿ ರೂಢಿಯಲ್ಲಿದೆ . ಅಂದರೆ ಹರಿವಾಣದಲ್ಲಿ ಅಕ್ಕಿ , ಮೂವತ್ತು ಅಡಿಕೆ , ಮೂವತ್ತು ವೀಳ್ಯದೆಲೆ , ಮೂವತ್ತು ಗೊಂಡೆ ಹೂವು , ಮಧ್ಯದಲ್ಲಿ ಸೀಯಾಳ ಹಾಗೂ ಅದರ ಮೇಲೊಂದು ದೀಪ ಇಟ್ಟು ಆರತಿ ಬೆಳಗುವುದು . ಈ ವಿಧಿ – ವಿಧಾನ ಬ್ರಾಹ್ಮಿ ಮೂರ್ತದಲ್ಲಿ ಜಿನಭಗವಂತನಿಗೆ ನೆರವೇರುತ್ತದೆ . ಮರುದಿನದ ಪೂಜೆಗಾಗಿ ಮನೆಗಳಲ್ಲಿ ಬಲೀಂದ್ರನಿಗೆ ಮರ ಹಾಕುವ ಕ್ರಮವೂ ತುಳುನಾಡಿನಲ್ಲಿ ಬಹುತೇಕ ಕಡೆ ಈಗಲೂ ಚಾಲ್ತಿಯಲ್ಲಿದೆ .

ಬಲಿಪಾಡ್ಯ , ಇದು ದೀವಳಿಗೆ ಹಬ್ಬದ ಕೊನೆಯ ದಿನ . ಆಟಿ ಅಮವಾಸ್ಯೆಯ ಸಮಯದಲ್ಲಿ ಬಲಿ ಚಕ್ರವರ್ತಿಯ ತಾಯಿ ಮೇದಿನಿಗೆ  ಬರುತ್ತಾಳೆ . ಅದೇ ರೀತಿ ಬಲಿಪಾಡ್ಯದಂದು ತನ್ನ ರಾಜ್ಯ ವನ್ನು ಒಮ್ಮೆ ಬಂದು ನೋಡಿ ಹೋಗಲು ಅವನು ( ಬಲಿ ಚಕ್ರವರ್ತಿ ) ಬರುತ್ತಾನೆ  ಎಂಬ ನಂಬಿಕೆಯಲ್ಲಿ ಹಾಳೆ ಮರದ ಗೂಟ ಹಾಕಿ , ಹೂಮಾಲೆಯಿಂದ ಅಲಂಕಾರ ಮಾಡಿ , ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ,ಸಂಕಲ್ಪ ಮಾಡುತ್ತಾರೆ . ಬಲಿಯ ಕುರಿತಾಗಿ ಬೃಹತ್‌ ಕಥನವೇ ಇದೆ . ಬಲಿ ಚಕ್ರವರ್ತಿ ಏರ್ಪಡಿಸಿದ್ದ ಕೊನೆಯ ಯಾಗದ ವೇಳೆ ವಟುವಿನಂತೆ ಬಂದ ವಾಮನ ಮೂರ್ತಿ  , ಮೂರು ಪಾದಗಳಷ್ಟು ಸ್ಟಳವನ್ನು  ದಾನವನ್ನಾಗಿ ಕೇಳಿ , ಕೊನೆಯ ಹೆಜ್ಜೆಯನ್ನಿಡಲು ಎಲ್ಲೂ ಸ್ಥಳವಿಲ್ಲದೆ , ತನ್ನ ಮೇಲೆ ಹೆಜ್ಜೆಯನ್ನಿಡುವಂತೆ ಬಲಿ ಶಿರಬಾಗಿಸಿ ನಿಂತದ್ದು …ಇದರ ಕಥೆಯೆ ಅಮೋಘ .

ಇದನ್ನೂ ಓದಿ:ಗಂಡು ಮಗುವಿಗಾಗಿ ಮಗಳನ್ನೇ ಬಲಿಕೊಟ್ಟ ತಂದೆ! ಮಾಂತ್ರಿಕನ ಬಂಧನಕ್ಕೆ ಶೋಧ

ಬಲಿಯನ್ನು ಜಗದ ಜನರು ನೆನಪಿಸುವ ಸಲುವಾಗಿ ‘ಬಲಿಪಾಡ್ಯ’ ಎಂಬ ಆಚರಣೆ ಬಹಳ ಪ್ರಾಮುಖ್ಯ ಪಡೆದಿದೆ . ಹಾಗೂ ಈ ದಿನ ಮನೆ – ಮಂದಿರಗಳಲ್ಲಿ ಧನ – ಧಾನ್ಯ ಲಕ್ಷ್ಮಿಯನ್ನು ಶ್ರದ್ಧೆಯಿಂದ ಆರಾಧಿಸುತ್ತಾರೆ . ಗೋವಿನ ಕೊರಳಿಗೆ ಹೂಮಾಲೆ ತೊಡಿಸಿ , ಸಹಸ್ರ ದೇವಾನು ದೇವತೆಗಳ ನೆಲೆಯಾಗಿರುವ ಗೋಮಾತೆಯನ್ನು  ಸಹ ಪೂಜಿಸುತ್ತಾ ಸಂಭ್ರಮ ಪಡುತ್ತಾರೆ . ಅದರೊಂದಿಗೆ ಸ್ನಾನಗೃಹದ ಹಂಡೆ ಗಳನ್ನು ಶುಚಿಗೊಳಿಸಿ ಅರಶಿನ – ಕುಂಕುಮ ಹಚ್ಚಿ ಹೂಮಾಲೆಯಿಂದ ಸಿಂಗರಿಸುತ್ತಾರೆ . ಒಂದು ರೀತಿಯಲ್ಲಿ ರೈತಾಪಿ ಜನರ ಅಥವಾ ಕೃಷಿ ಬಂಧುಗಳ ಹಬ್ಬವೆಂದೂ ಹೇಳಬಹುದೇನೋ ; ಏಕೆಂದರೆ ಕೃಷಿಯ ಸಂದರ್ಭದಲ್ಲಿ ಬಳಸುವ ಪರಿಕರಗಳಾದ ಹಾರೆ , ನೊಗ – ನೇಗಿಲು  , ಪಿಕಾಸು ಮುಂತಾದವುಗಳನ್ನು ಪ್ರೀತಿಯಿಂದ ಪೂಜಿಸುವ ಪದ್ದತಿಯೂ ರೂಢಿಯಲ್ಲಿದ್ದು , ವ್ಯಾಪಾರ – ವಹಿವಾಟು ನಡೆಸುವವರು  ಅಂಗಡಿ – ಮುಂಗಟ್ಟುಗಳಲ್ಲಿ ಪೂಜೆ ನೆರವೇರಿಸುತ್ತಾರೆ. .ಕೆಲವರು ವಾಹನ ಪೂಜೆ ಈ ಸಮಯದಲ್ಲಿ ನೆರವೇರಿಸುತ್ತಾರೆ.

ಒಟ್ಟಿನಲ್ಲಿ ಈ ದೀಪಗಳ ಹಬ್ಬ ದೀಪಾವಳಿ . ಸಾಲು ದೀಪಗಳ ಈ ಹಬ್ಬ ನಮ್ಮ ನಾಡಿಗಷ್ಟೇ ಸೀಮಿತವಾಗಿಲ್ಲ. ದೇಶ – ವಿದೇಶಗಳಲ್ಲೂ ಇದರ ಪ್ರಭೆ ಕಂಗೊಳಿಸುತ್ತಿದ್ದು, ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ .

ಬರಹ – ಸಮ್ಯಕ್ತ್  ಜೈನ್ ಕಡಬ

ಟಾಪ್ ನ್ಯೂಸ್

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.