ಕೊಹ್ಲಿ ಕೇವಲ ಮತ್ತೊಬ್ಬ ಕ್ರಿಕೆಟಿಗ: ಆಸೀಸ್ ನಾಯಕ ಟಿಮ್ ಪೇನ್
Team Udayavani, Nov 15, 2020, 12:44 PM IST
ಮೆಲ್ಬರ್ನ್: ಸಚಿನ್ ತೆಂಡುಲ್ಕರ್ ಬಳಿಕ ಭಾರತದ ರನ್ ಯಂತ್ರವಾಗಿ ಮಾರ್ಪಟ್ಟಿರುವ ವಿರಾಟ್ ಕೊಹ್ಲಿ ಎದುರಾಳಿಗೆ ನಡುಕ ಹುಟ್ಟಿಸುವ ಬ್ಯಾಟ್ಸ್ಮನ್ ಎಂಬುದರಲ್ಲಿ ಅನುಮಾನವಿಲ್ಲ. ಅವರೀಗ ಆಸ್ಟ್ರೇಲಿಯದ ಬಹು ದೊಡ್ಡ ಸವಾಲಿಗೆ ಸಜ್ಜಾಗಿದ್ದಾರೆ. ಆಸೀಸ್ ಮಾಧ್ಯಮಗಳಲ್ಲಿ ಕೊಹ್ಲಿ ಜಪ ಆರಂಭವಾಗಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಆಸೀಸ್ ಟೆಸ್ಟ್ ಕಪ್ತಾನ ಟಿಮ್ ಪೇನ್, “ಕೊಹ್ಲಿ ಬಗ್ಗೆ ಅನೇಕರು ಅನೇಕ ರೀತಿಯ ಹೇಳಿಕೆ ನೀಡಬಹುದು. ಎದುರಾಳಿ ಆಟಗಾರರು ಅವರನ್ನು ದ್ವೇಷಿಸುವುದನ್ನೇ ಪ್ರೀತಿಸುತ್ತಾರೆ. ಅಭಿಮಾನಿಗಳು ಅವರ ಬ್ಯಾಟಿಂಗನ್ನು ಬಹಳಷ್ಟು ಮೆಚ್ಚುತ್ತಾರೆ. ಆದರೆ ನನ್ನ ಪಾಲಿಗೆ ಅವರೋರ್ವ ಎದುರಾಳಿ ಹಾಗೂ ಕೇವಲ ಮತ್ತೂಬ್ಬ ಕ್ರಿಕೆಟಿಗ, ಅಷ್ಟೇ…’ ಎಂದಿದ್ದಾರೆ.
“ನಾವು ಕೂಡ ಕ್ರಿಕೆಟ್ ಫ್ಯಾನ್ ಆಗಿ ಅವರ ಬ್ಯಾಟಿಂಗನ್ನು ಆಸ್ವಾದಿಸುತ್ತೇವೆ. ಆದರೆ ನಮ್ಮೆದುರು ಆಡುವಾಗ ಎದುರಾಳಿ ಎಂದೇ ಪರಿಗಣಿಸಬೇಕಾಗುತ್ತದೆ’ ಎಂಬುದಾಗಿ ಟಿಮ್ ಪೇನ್ ಹೇಳಿದರು.
ನಾಯಕತ್ವಕ್ಕೆ ಸ್ಮಿತ್ ಇನ್ನೂ ಕಾಯಬೇಕು
ನಿಷೇಧ ಮುಗಿಸಿ ಬಂದು ಸಾಕಷ್ಟು ಸಮಯವಾದರೂ ಸ್ಟೀವನ್ ಸ್ಮಿತ್ ಅವರನ್ನು ಮರಳಿ ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಪರಿಶೀಲಿಸದಿದ್ದುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಅಧ್ಯಕ್ಷ ಟ್ರೆವರ್ ಹಾನ್ಸ್ ಪ್ರತಿಕ್ರಿಯಿಸಿದ್ದು, ನಾಯಕತ್ವಕ್ಕಾಗಿ ಸ್ಮಿತ್ ಇನ್ನೂ ಸಾಕಷ್ಟು ಸಮಯ ಕಾಯಬೇಕು ಎಂದಿದ್ದಾರೆ. “ಸ್ಮಿತ್ ನಾಯಕತ್ವದ ಅಭ್ಯರ್ಥಿಯೇ ಆಗಿರಬಹುದು, ಆದರೆ ನಾವು ಅವರನ್ನು ಪರಿಗಣಿಸುವುದು, ಬಿಡುವುದು ಮುಂದಿನ ಪರಿಸ್ಥಿತಿಯನ್ನು ಅವಲಂಬಿಸಿದೆ. ಅವರಿನ್ನೂ ಕಾಯಬೇಕು’ ಎಂದು ಹಾನ್ಸ್ ಹೇಳಿದರು.
ಟಿಮ್ ಪೇನ್ ಯಶಸ್ಸು
ಸ್ಮಿತ್ ನಿಷೇಧಕ್ಕೊಳಗಾದಾಗ ಟೆಸ್ಟ್ ತಂಡದ ನಾಯಕತ್ವ ಪಡೆದ ಪೇನ್ ಇದರಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ಕಾರಣ ಅವರನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂಬುದನ್ನು ಹಾನ್ಸ್ ಪರೋಕ್ಷವಾಗಿ ಹೇಳಿದ್ದಾರೆ.
ಪೇನ್ ನಾಯಕತ್ವದಲ್ಲಿ ಆಸ್ಟ್ರೇಲಿಯ ತಂಡ 2019ರಲ್ಲಿ ಆ್ಯಶಸ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಜತೆಗೆ ಶ್ರೀಲಂಕಾ, ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯನ್ನೂ ಜಯಿಸಿತ್ತು. ಸೋತದ್ದು ಪ್ರವಾಸಿ ಭಾರತದೆದುರಿನ ಸರಣಿಯಲ್ಲಿ ಮಾತ್ರ. ಇದಕ್ಕೆ ಸೇಡು ತೀರಿಸಿಕೊಳ್ಳಲು ಯಶಸ್ವಿಯಾದರೆ ಅವರ ನಾಯಕತ್ವ ಇನ್ನಷ್ಟು ಗಟ್ಟಿಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.