ಉದಯ ಕಲಾವಿದರ ಅಟ್ಟ ಇನ್ನು ಮುಂದೆ ಬರೀ ನೆನಪು!
ವಾಣಿಜ್ಯ ಸಂಕೀರ್ಣಕ್ಕಾಗಿ ನೆಲಸಮವಾಗುತ್ತಿದೆ ರಂಗ ಚಟುವಟಿಕೆ ತಾಣವಾಗಿದ್ದ ಕಟ್ಟಡ
Team Udayavani, Nov 15, 2020, 7:00 PM IST
ಸಾಗರ: ನಗರದ ಜೆಸಿ ರಸ್ತೆಯಲ್ಲಿನ ಉದಯಕಲಾವಿದರು ನಾಟಕ ಸಂಸ್ಥೆಯ ರಿಹರ್ಸಲ್ ಜಾಗವಾಗಿ, ಚಿಂತನ ಮಂಥನಗಳ ತಾಣವಾಗಿ “ಅಟ್ಟ’ಎಂದೇ ಜನಪ್ರಿಯವಾಗಿದ್ದ ಸಂಸ್ಥೆಯ ಕಟ್ಟಡ ನೆಲಸಮವಾಗುತ್ತಿದೆ. ಖಾಸಗಿ ಕಟ್ಟಡವಾದುದರಿಂದ ಕಟ್ಟಡ ಮಾಲೀಕರು ಹಳೆಯ ಕಟ್ಟಡ ಕೆಡವಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಸಾಗರದ ಸಾಂಸ್ಕೃತಿಕ ಮೆರಗಿಗೆ ಕಾರಣವಾಗಿದ್ದ ಹವ್ಯಾಸಿ ತಂಡದ ಕಟ್ಟಡ ಮರೆಯಾಗಲಿದ್ದು, ಸಾಂಸ್ಕೃತಿಕ ಜಗತ್ತಿನ ಇನ್ನೊಂದು ಕೊಂಡಿ ಇತಿಹಾಸದ ಪುಟ ಸೇರುವಂತಾಗಿದೆ.
ರಾಜ್ಯದ ನಾಟಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಉದಯ ಕಲಾವಿದರು ಸಂಸ್ಥೆ ಕೂಡಹೊಸ ಉತ್ಸಾಹಿಗಳ ಸೇರ್ಪಡೆಯ ಕೊರತೆ ಅನುಭವಿಸುತ್ತಿದೆ. ಸಂಸ್ಥೆಯ ಹಿರಿಯ ಜೀವಗಳು ವಯೋಸಹಜ ಜೀವನ ಸಂಜೆಯ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಬದುಕಿನ ಇನ್ನಿಂಗ್ಸ್ ಮುಗಿಸಿದ್ದಾರೆ. ಪುನರುಜ್ಜೀವನದ ಕನಸು ಕೆಲವರಲ್ಲಾದರೂ ಇದ್ದರೂ, “ಅಟ್ಟ’ ಮಾಯವಾಗುವುದು ಉತ್ಸಾಹವನ್ನು ಮತ್ತಷ್ಟು ಕೆಳಗೆ ತಳ್ಳುವ ಸಾಧ್ಯತೆಗಳಿವೆ.
ಎನ್.ಆರ್. ಮಾಸೂರ್ ಮತ್ತವರ ಗೆಳೆಯರು 1948ರಲ್ಲಿ ಉದಯ ಕಲಾವಿದರುಸಂಸ್ಥೆ ಸ್ಥಾಪಿಸಿದರು. ಶ್ರೀರಂಗರ ನಾಟಕಗಳ ಪ್ರದರ್ಶನದಿಂದ ಈ ಸಂಸ್ಥೆ ರಾಜ್ಯದಲ್ಲಿ ಹೆಸರುವಾಸಿಯಾಯಿತು. ಶ್ರೀರಂಗ, ದ.ರಾ. ಬೇಂದ್ರೆ, ಎಂ. ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಬಿ.ವಿ. ಕಾರಂತಮುಂತಾದವರು ಅಟ್ಟಕ್ಕೆ ಬಂದು ಹೋಗಿದ್ದಾರೆ.ಕನ್ನಡದ ಪ್ರಮುಖ ನಾಟಕಗಳಲ್ಲದೇ ಆಂಗ್ಲ, ಫ್ರೆಂಚ್, ಹಿಂದಿ ಸೇರಿದಂತೆ ಸಾವಿರಕ್ಕೂ ಮಿಕ್ಕಿ ನಾಟಕಗಳ ಪ್ರದರ್ಶನಕ್ಕೆ ಈ ಅಟ್ಟದಲ್ಲಿಯೇ ಸಿದ್ಧತೆಯಾಗಿದೆ. ಎನ್.ಆರ್. ಮಾಸೂರ್, ಗುರುರಾವ್ ಬಾಪಟ್ ಇನ್ನಿತರ ನಿರ್ದೇಶಕರ ನಾಟಕ ಪ್ರಸಿದ್ಧಿ ಗಳಿಸಿದೆ. ವಿಜಯವಾಮನ, ರವಿಶಂಕರ ಕೋಳಿವಾಡ, ಮಂಜುನಾಥಜೇಡಿಕುಣಿ, ಸಿ.ಟಿ. ಬ್ರಹ್ಮಾಚಾರ್ ಇನ್ನೂ ಮುಂತಾದವರು ನಾಟಕ ನಿರ್ದೇಶಿಸಿದ್ದಾರೆ. ಅನೇಕರು ಅಟ್ಟದ ಕಾರಣದಿಂದ ಕಲಾವಿದರಾಗಿದ್ದಾರೆ. ಸಾಗರಕ್ಕೆ ಖ್ಯಾತಿ ತಂದುಕೊಟ್ಟ, ಹವ್ಯಾಸಿ ರಂಗಭೂಮಿಯಲ್ಲಿ ಮಹತ್ವದ ಸ್ಥಾನ ಗಳಿಸಿದ್ದ ಸಾಗರದ ಉದಯ ಕಲಾವಿದರು ಸಂಸ್ಥೆಯ “ಅಟ್ಟ’ವೆಂಬ ಕಟ್ಟಡ ಇನ್ನು ಕೇವಲ ನೆನಪು ಮಾತ್ರ. ಅದು ಸಂಸ್ಥೆಯ ಅಸ್ತಿತ್ವಕ್ಕೂ ಅನ್ವಯವಾಗದಿರಲಿ ಎಂಬ ಆಶಯವನ್ನು ರಂಗಾಸಕ್ತರಲ್ಲಿ ದಟ್ಟವಾಗಿದೆ.
ರಿಹರ್ಸಲ್ನ ಅಟ್ಟ ವಾಣಿಜ್ಯಿಕ ಕಾರಣಗಳಿಂದ ಮಾಯವಾಗುವುದು ಅನಿವಾರ್ಯವಾಗಿದೆ. ಆದರೆ ಉದಯ ಕಲಾವಿದರು ಸಂಸ್ಥೆಯ ಅಭಿರುಚಿಯನ್ನು ಬೇರೊಂದು ರಿಹರ್ಸಲ್ತಾಣದಲ್ಲಿ ಮುಂದುವರಿಸಲಾಗುತ್ತದೆ. ಸವಾಲುಗಳ ನಡುವೆಯೂ ಸಂಸ್ಥೆ ತನ್ನ ಸೇವೆಯನ್ನು ಒದಗಿಸಲು ಕಟಿಬದ್ಧವಾಗಿದೆ. ತಾತ್ಕಾಲಿಕವಾಗಿ ಸಂಸ್ಥೆಯ ಎಲ್ಲಾ ವಸ್ತುಗಳನ್ನು ಮಾಲೀಕರೇ ಸ್ವತಃ ಸಾಗಣೆ ಮಾಡಿ ತಮ್ಮ ಸ್ವಂತ ಕಟ್ಟಡದಲ್ಲಿ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಸ್ಥಳದ ಬಗ್ಗೆ ಚಿಂತನೆ ನಡೆಸಲಾಗುವುದು. –ಟಿ.ಎಸ್. ರಾಘವೇಂದ್ರ, ಅಧ್ಯಕ್ಷರು, ಉದಯ ಕಲಾವಿದರು, ಸಾಗರ
ನಾಟಕ ತಂಡವಾದುದರಿಂದ ಬಾಡಿಗೆ, ಇನ್ನಿತರ ವಿಷಯದಲ್ಲಿ ಯಾವ ನಿರೀಕ್ಷೆ ಇರಲಿಲ್ಲ. ಆದರೂ ವಾರ್ಷಿಕವಾಗಿ ತಪ್ಪದೇ ಬಾಡಿಗೆ ನೀಡಲಾಗುತ್ತಿತ್ತು. ಅನಿವಾರ್ಯ ಕಾರಣಗಳಿಂದಾಗಿ ಕಟ್ಟಡ ನೆಲಸಮ ಮಾಡಲಾಗುತ್ತಿದೆ. ಸದ್ಯಕ್ಕೆ ನಮ್ಮ ಮನೆಯಲ್ಲಿ ನಾಟಕದ ಪರಿಕರಗಳನ್ನು ಇಡಲು ಸಂಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಪದಾಧಿಕಾರಿಗಳ ಜತೆ ಚರ್ಚಿಸಿ ಅವಕಾಶ ಕಲ್ಪಿಸಲಾಗುವುದು. –ಎಸ್. ಶಶಿಧರ ಯಾಗೈನ್, ಕಟ್ಟಡ ಮಾಲೀಕರು, ಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Sagara: ವಿದ್ಯುತ್ ಟ್ರಾನ್ಸ್ ಫಾರ್ಮರ್ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.