ದೇಶದಲ್ಲಿ ಸೋಂಕು ಇಳಿಮುಖ
ಸತತ 8ನೇ ದಿನವೂ 50 ಸಾವಿರಕ್ಕಿಂತ ಕಡಿಮೆ ಕೊರೊನಾ ಪ್ರಕರಣ
Team Udayavani, Nov 16, 2020, 12:01 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೊರೊನಾ ಕಾಟದಿಂದ ತತ್ತರಿಸಿದ್ದ ಭಾರತಕ್ಕೆ ನಿರಾಳ ಭಾವ ತರುವಂತಹ ಸುದ್ದಿಯಿದು. ಕಳೆದ 8 ದಿನಗಳಿಂದಲೂ ಸತತವಾಗಿ ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆಯಿದ್ದು, ಇದು ಸೋಂಕಿನ ಇಳಿಮುಖದ ಟ್ರೆಂಡ್ ಅನ್ನು ಪ್ರತಿಬಿಂಬಿಸಿದೆ.
ಅಮೆರಿಕ, ಯುರೋಪ್‌ಗ್ಳಲ್ಲಿ ಏಕಾಏಕಿ ಸೋಂಕಿನ ವ್ಯಾಪಿಸುವಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಕೊರೊನಾ ಸ್ಥಿತಿ ಮಹತ್ವ ಪಡೆದಿದೆ. ಶನಿವಾರ ಬೆಳಗ್ಗೆ 8ರಿಂದ ಭಾನುವಾರ ಬೆಳಗ್ಗೆ 8ರವರೆಗೆ ದೇಶಾದ್ಯಂತ 41,100 ಮಂದಿಗೆ ಸೋಂಕು ದೃಢಪಟ್ಟಿದ್ದು, 24 ಗಂಟೆಗಳ ಈ ಅವಧಿಯಲ್ಲಿ 42,156 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿಂದೆ, ದೈನಂದಿನ ಪ್ರಕರಣ 50 ಸಾವಿರ ದಾಟಿದ್ದು ನ.7ರಂದು. ಅಂದರೆ, ಸತತ 8 ದಿನಗಳಿಂದಲೂ ಈ ಸಂಖ್ಯೆ 50 ಸಾವಿರದ ಒಳಗೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಚಿವ ಅಮಿತ್ ಶಾ ತುರ್ತು ಸಭೆ: ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳದ ಜೊತೆಗೆ ಕೊರೊನಾ ಸೋಂಕಿತರ ಸಂಖ್ಯೆಯೂ ದಿನೇ ದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ತುರ್ತು ಸಭೆ ನಡೆಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್, ಸಿಎಂ ಕೇಜ್ರಿವಾಲ್, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಕೊರೊನಾ ಪರಿಸ್ಥಿತಿಯನ್ನು ಪರಿಶೀಲಿಸಿದ ಅಮಿತ್ ಶಾ, ಸೋಂಕಿಗೆ ಕಡಿವಾಣ ಹಾಕುವ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಆದರೆ, ಮತ್ತೂಮ್ಮೆ ದೆಹಲಿಯಲ್ಲಿ ನಿರ್ಬಂಧ ಹೇರುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿಹಾರ ಚುನಾವಣೆ ಸೃಷ್ಟಿಸಿದ 160 ಟನ್ ತ್ಯಾಜ್ಯ!
ಕೊರೊನಾ ಮಾರ್ಗಸೂಚಿಯನ್ವಯ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಬರೋಬ್ಬರಿ 160 ಟನ್‌ಗಳಷ್ಟು ಜೈವಿಕವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಕೈಗವಸುಗಳು, ಮಾಸ್ಕ್ಗಳು, ಸ್ಯಾನಿಟೈಸರ್ ಬಾಟಲಿಗಳ ರೂಪದಲ್ಲಿ ಈ ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗಿವೆ. ಮತದಾರರು, ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಚುನಾವಣಾ ಆಯೋಗವು ಸೂಕ್ತ ಕ್ರಮ ಕೈಗೊಂಡಿತ್ತು. ಇವಿಎಂ ಗುಂಡಿ ಒತ್ತಲು ಮತದಾರರಿಗೂ ಬಳಸಿ ಬಿಸಾಕಬಹುದಾದ ಕೈಗವಸುಗಳನ್ನು ಒದಗಿಸಿತ್ತು. ಜತೆಗೆ, ಸಿಬ್ಬಂದಿಗೆಂದೇ ಫೇಸ್‌ಶೀಲ್ಡ್, ಮಾಸ್ಕ್ಗಳನ್ನೂ ನೀಡಿತ್ತು. ಇದರ ಪರಿಣಾಮವಾಗಿ 160 ಟನ್‌ಗಳಷ್ಟು ಬಯೋಮೆಡಿಕಲ್ ತ್ಯಾಜ್ಯ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.
ಖರೀದಿಸಿದ್ದ ವಸ್ತುಗಳಿವು
ಫೇಸ್‌ಶೀಲ್ಡ್ 18 ಲಕ್ಷ
ಮಾಸ್ಕ್ಗಳು 70ಲಕ್ಷ
ರಬ್ಬರ್ ಗ್ಲೌಸ್ 5.4 ಲಕ್ಷ
ಪಾಲಿಥೀನ್ ಗ್ಲೌಸ್ 7.21 ಕೋಟಿ
ಸ್ಯಾನಿಟೈಸರ್ 29 ಲಕ್ಷ
ಉತ್ಪತ್ತಿಯಾದ ತ್ಯಾಜ್ಯ 160ಟನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
SC: ಬಿಯಾಂತ್ ಹಂತಕ ಬಲ್ವಂತ್ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ
Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.