ಡೇಟಿಂಗ್ ಆ್ಯಪ್‌ನಲ್ಲಿ ಅಮಾಯಕರ ಸುಲಿಗೆ : ಯುವಕ-ಯುವತಿಯರ ಚಿತ್ರಗಳೇ ಗಾಳದ ವಸ್ತು
ವೈಯಕ್ತಿಕ ಮಾಹಿತಿ ನೀಡಿ ಮೋಸ ಹೋಗದಿರಿ
Team Udayavani, Nov 17, 2020, 7:00 AM IST
ಬೆಂಗಳೂರು: ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಸೇರಿ ಎಲ್ಲ ಸಾಮಾಜಿ ಕಜಾಲತಾಣಗಳಲ್ಲಿ ಫೋಟೋಗಳು, ಮೊಬೈಲ್ ನಂಬರ್ ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಿ. ಕೆಲ ಕಿಡಿಗೇಡಿಗಳು ಈ ಫೋಟೋಗಳನ್ನು ಕದ್ದು ಡೇಟಿಂಗ್ ಆ್ಯಪ್ ಅಥವಾ ಮ್ಯಾಟ್ರಿಮೊನಿಯಲ್‌ನಲ್ಲಿ ಹಾಕಿ ಅಮಾಯಕರನ್ನು ಬಲೆಗೆ ಬೀಳಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿರುವ ಜಾಲವೊಂದು ಸಕ್ರಿಯವಾಗಿದೆ.
ಅಪರಿಚಿತಯುವತಿಯರ ಮತ್ತುಮಹಿಳೆಯರ ಫೋಟೋಗಳಿರುವ ಆನ್‌ಲೈನ್ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಯುವತಿಯರ ಮೊಬೈಲ್ ನಂಬರ್ ಪಡೆಯಲು ನಿರ್ದಿಷ್ಟ “ಡೇಟಿಂಗ್ ಆ್ಯಪ್’ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರಚೋದಿಸುತ್ತಾರೆ. ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಯುವಕರಿಗೆ ಯುವತಿಯರನ್ನು ಸಂಪರ್ಕಿಸುತ್ತಿದ್ದಕಿಡಿಗೇಡಿಗಳು, ಮೊದಲಿಗೆ ಚ್ಯಾಟಿಂಗ್ ಮೂಲದ ಆಮಿಷವೊಡುತ್ತಾರೆ. ಯುವತಿ ಎಂದು ಭಾವಿಸಿಸುವ ಯುವಕರು, ವೈಯಕ್ತಿಕ ವಿವರ,ಖಾಸಗಿ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸುತ್ತಾರೆ. ಒಂದು ವೇಳೆ ಯುವತಿಯ ಮೊಬೈಲ್ ಸಿಕ್ಕರೂ ಆಕೆಗೂ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿದ್ದಾರೆ. ಲಾಕ್‌ಡೌನ್ ವೇಳೆಯಲ್ಲಿ ಇಂಥ 12 ಕ್ಕೂ ಅಧಿಕ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ಸಿಮ್ ಕಾರ್ಡ್: ಬಹುತೇಕ ಯುವತಿ, ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಖಾತೆಗಳಲ್ಲಿ ವೈಯಕ್ತಿಕ ವಿವರ, ಮೊಬೈಲ್ ನಂಬರ್, ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಅದನ್ನೇ ಸೈಬರ್ ವಂಚಕರು ಕಳವು ಮಾಡಿ, ಈ ಡೇಟಾವನ್ನು ಬಳಸಿ ನಕಲಿ ಸಿಮ್‌ಕಾರ್ಡ್‌ಗಳನ್ನುಪಡೆದುಕೊಳ್ಳುತ್ತಿದ್ದಾರೆ. ಬಳಿಕ ಮ್ಯಾಟ್ರಿಮೋನಿಯಲ್, ಡೇಟಿಂಗ್ ಆ್ಯಪ್ ಗಳಲ್ಲಿ ಅವರ ಹೆಸರಿನಲ್ಲಿಯೇ ಖಾತೆ ತೆರೆದು, ಯುವಕರಿಗೆ ಪ್ರಚೋದಿಸಿ ಪರಿಚಯಿಸಿಕೊಂಡು ಬ್ಲ್ಯಾಕ್‌ಮೇಲ್ ತಂತ್ರದ ಮೂಲಕ ಹಣ ಸುಲಿಗೆ ಮಾಡುತ್ತಿದ್ದಾರೆ. ಹೀಗಾಗಿ ಮಹಿಳೆಯರು, ಯುವತಿಯರು ತಮ್ಮ ವೈಯಕ್ತಿಕ ವಿವರಗಳು, ಮೊಬೈಲ್ ನಂಬರ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮುನ್ನ ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಸೈಬರ್ ಪೊಲೀಸರು.
ವೇಶ್ಯಾವಾಟಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್: ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಸಿಗುವ ಯುವತಿಯರು, ಮಹಿಳೆಯರ ಮೊಬೈಲ್ ನಂಬರ್‌ಗಳನ್ನು ಸೈಬರ್ ವಂಚಕರು, ಅವುಗಳನ್ನು ವೇಶ್ಯಾವಾಟಿಕೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುತ್ತಾರೆ. ಬಳಿಕ ಆ ನಂಬರ್‌ಗೆ ಬರುವ ಕರೆಗಳನ್ನು ತಮ್ಮ ಮೊಬೈಲ್ ನಂಬರ್‌ಗೆವರ್ಗಾಯಿಸಿಕೊಂಡು ಚ್ಯಾಟಿಂಗ್ ಮೂಲಕ ಯುವಕರಿಗೆ ಪ್ರಚೋದಿಸುತ್ತಾರೆ. ಅನಂತರ ವೈಯಕ್ತಿಕ ಫೋಟೋಗಳನ್ನು ಪಡೆದುಕೊಂಡು ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಾರೆ.
ವಂಚನೆಗೊಳಗಾದ ಯುವಕರು, ಯುವತಿಯರ ಮೊಬೈಲ್ ನಂಬರ್‌ಗೆ ದೂರು ನೀಡುತ್ತಾರೆ. ಆದರೆ, ಅಸಲಿಗೆ ಮೊಬೈಲ್ ನಂಬರ್ ಬಳಸುವ ಯುವತಿ ಅಥವಾ ಮಹಿಳೆ ಪ್ರಕರಣಕ್ಕೂ ಸಂಬಂಧ ಇರುವುದಿಲ್ಲ. ಇಂತಹ ಸಾಕಷ್ಟು ಪ್ರಕರಣಗಳಲ್ಲಿ ಅಮಾಯಕ ಯುವತಿಯರು ಸಂಕಷ್ಟಕೀಡಾಗುತ್ತಾರೆ ಎಂದು ಸೈಬರ್ ವಿಭಾಗದ ಅಧಿಕಾರಿಗಳು ಹೇಳಿದರು.
ಲಾಕ್‌ಡೌನ್ ಸಂದರ್ಭದಲ್ಲೇ ವಂಚನೆ: ಲಾಕ್ ಡೌನ್ ಸಂದರ್ಭದಲ್ಲಿ ವಾಣಿಜ್ಯ ಚಟುವಟಿಕೆಗಳುಸ್ಥಗಿತವಾಗಿತ್ತು. ಹೀಗಾಗಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಯುವತಿಯರ ಚಿತ್ರಗಳು, ಮೊ. ನಂಬರ್ ಬಳಸಿಕೊಂಡು ಹಣ ಸಂಪಾದಿಸಿದ್ದಾರೆ. ಡೇಟಿಂಗ್ ಆ್ಯಪ್, ವೇಶ್ಯಾವಾಟಿಕೆ ವೆಬ್‌ಸೈಟ್, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಯುವತಿಯರ ಫೋಟೋ ಹಾಕಿ, ಯುವಕರನ್ನು ಪ್ರಚೋದಿಸುತ್ತಿದ್ದರು. ನಿರ್ದಿಷ್ಟ ಮೊಬೈಲ್ ನಂಬರ್ ಗೆ ಕರೆ ಮಾಡುತ್ತಿದ್ದ ಯುವಕನಿಗೆ, ಲಾಕ್‌ಡೌನ್ ಇರುವುದರಿಂದ ನಾನಾ ಮಾರ್ಗಗಳ ಮೂಲಕ ನೀವು ಇರುವಲ್ಲಿಯೇ ಬಂದು ಸೇವೆ ಒದಗಿಸುತ್ತೇವೆ. ಅದಕ್ಕಾಗಿ ಮುಂಗಡ ಹಣ ನೀಡಿ ಎಂದು ವಸೂಲಿ ಮಾಡುತ್ತಿದ್ದರು ಎಂದು ಅಧಿಕಾರಿ ವಿವರಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ನಡೆವ ಅಪರಾಧ ಕೃತ್ಯಗಳ ಕೆಲವು ನಿದರ್ಶನಗಳು :
ಕ್ಯೂಆರ್ ಕೋಡ್‌ನಿಂದ ಹಣ : ಯುವತಿಯರ ಸಲುಗೆ ಬೆಳೆಸಲು ಬೆಳ್ಳಂದೂರು ನಿವಾಸಿ 21 ವರ್ಷದ ಯುವಕ ಡೇಟಿಂಗ್ ಆ್ಯಪ್ ಮೊರೆ ಹೋಗಿದ್ದ. ಅದರಲ್ಲಿ ಯುವತಿಯ ಚೆಂದದ ಫೋಟೋ ಗಮನಿಸಿ ಆಕೆಯನ್ನು ಸಂಪರ್ಕಿಸಿದ್ದು, ಆಕೆ ನಂಬರ್ ಕೊಟ್ಟಿದ್ದಳು. ಅಲ್ಲದೆ, ಇನ್‌ಸ್ಟ್ರಾಗ್ರಾಂ ಮೂಲಕ ಸ್ನೇಹಕ್ಕಾಗಿ ಕೋರಿಕೆ ಕಳುಹಿಸಿದ್ದಳು. ಬಳಿಕ ಇಬ್ಬರು ವಾಟ್ಸ್‌ಆ್ಯಪ್ ಚಾಟಿಂಗ್ ಮಾಡಿಕೊಂಡಿದ್ದಾರೆ. ಮೊದಲಿಗೆ ಯುವತಿ ತನ್ನ ನಗ್ನ ಫೋಟೋ ಕಳುಹಿಸಿದ್ದಳು. ತದನಂತರ ಯುವಕನಿಗೆ ಕಳುಹಿಸುವಂತೆ ಒತ್ತಾಯಿಸಿದ್ದಳು. ಅದನ್ನು ನಂಬಿ ಖಾಸಗಿ ಫೋಟೋ
ಮತ್ತು ವಿಡಿಯೋಗಳನ್ನು ರವಾನಿಸಿದ್ದ. ಬಳಿಕ ಅನಾಮಿಕ ನಂಬರ್‌ನಿಂದ ಕರೆ ಮಾಡಿದ್ದ ವ್ಯಕ್ತಿಯೊಬ್ಬ,ಖಾಸಗಿ ದೃಶ್ಯಗಳಿರುವ ವಿಚಾರವನ್ನು ತಿಳಿಸಿ, ಹಣಕಳುಹಿಸುವಂತೆ ಒತ್ತಾಯಿಸಿದ್ದ. ಪರಿಚಯಸ್ಥರು ಹಾಸ್ಯ ಮಾಡುತ್ತಿದ್ದಾರೆ ಎಂದು ಸುಮ್ಮನಾಗಿದ್ದ. ವಾಟ್ಸ್‌ಆ್ಯಪ್ ಸಂದೇಶ ನೋಡಿದಾಗ, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಯುವತಿಗೆ ಕಳುಹಿಸಿದ್ದ ತನ್ನದೇ ಫೋಟೋಗಳು ಎಂಬುದು ಗೊತ್ತಾಗಿದೆ. ಬಳಿಕ ಹೆದರಿ ಹಣ ನೀಡಲು ಒಪ್ಪಿದ. ವಂಚಕ ಕ್ಯೂ ಆರ್‌ಕೋಡ್ ಕಳುಹಿಸಿ ಮೂರು ಸಾವಿರ ರೂ. ಪಡೆದುಕೊಂಡಿದ್ದಾನೆ. ಮತ್ತೆ ಬ್ಲ್ಯಾಕ್‌ಮೇಲ್ ಮುಂದುವರಿಸಿದ್ದಾನೆ.
ಚಾಟಿಂಗ್ ವಿಡಿಯೋ ರೆಕಾರ್ಡ್ : ಕೋರಮಂಗಲ ನಿವಾಸಿ ಯುವಕನಿಗೆ(24) ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯ ಪರಿಚಯವಾಗಿತ್ತು. ಇಬ್ಬರು ಪರಸ್ಪರ ನಂಬರ್ ವಿನಿಮಯ ಮಾಡಿಕೊಂಡಿದ್ದು, ಪ್ರತಿದಿನ ಚ್ಯಾಟಿಂಗ್ ಮಾಡುತ್ತಿದ್ದರು.ಈವೇಳೆ ಏಕಾಂತವಾಗಿ ಕಾಲಕಳೆಯುವುದಾಗಿ ಯುವಕನಿಗೆ ನಂಬಿಸಿದ್ದಳು. ಆಕೆಯ ಮಾತಿಗೆ ಮರುಳಾಗಿ ವಾಟ್ಸ್‌ಆ್ಯಪ್‌ನಲ್ಲಿ ನಗ್ನವಾಗಿ ವಿಡಿಯೋ ಚ್ಯಾಟಿಂಗ್ ಮಾಡಿದ್ದ. ಈ ವೇಳೆ ಆತನ ಅರಿವಿಗೆ ಬಾರದಂತೆ ವಿಡಿಯೋ ಚ್ಯಾಂಟಿಗ್ ದೃಶ್ಯವನ್ನು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾಳೆ.ಕೆಲ ದಿನಗಳ ಬಳಿಕ ಆ ವಿಡಿಯೋ ಗಳನ್ನು ಯುವಕನಿಗೆ ರವಾನಿಸಿ, ಹಣಕೊಡದಿ ದ್ದರೆ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ.ಮಾನಕ್ಕೆಹೆದರಿದ 30 ಸಾವಿರ ರೂ. ವರ್ಗಾಯಿಸಿದ್ದಾನೆ. ಠಾಣೆ ಮೆಟ್ಟಿಲೇರಿದ್ದಾನೆ.
ಯುವತಿಯರಿಗೆ ದುಷ್ಕರ್ಮಿಗಳ ಗಾಳ : ಶ್ರೀಮಂತ ಯುವಕರ ಜತೆ ಜೀವನ ಸಾಗಿಸಬೇಕು ಎಂಬ ಆಸೆಗೆ ಬಿದ್ದ ಯುವತಿಯರೂ ಮೋಸ ಹೋಗುತ್ತಿದ್ದಾರೆ. ವಂಚಕರು ವಿದೇಶಿಗಳಲ್ಲಿ ಕೆಲಸ ಹಾಗೂ ಐಷಾರಾಮಿ ಜೀವನ ನಡೆಸುತ್ತಿರುವಂತೆ ಬಿಂಬಿಸುವ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಪರಿಚಿತರಾದ ಬಳಿಕ ಆರಂಭದಲ್ಲಿ ಪಮ್, ಹೋಟೆಲ್, ಪಾರ್ಟಿಗಳಿಗೆ ಸುತ್ತಾಡಿಸುತ್ತಾರೆ. ಬಳಿಕ ವಿವಿಧ ನೆಪ ಹೇಳಿ, ಹಣಹಿಂತಿರುಗಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದಾರೆ. ಮತ್ತೂಂದೆಡೆ ಯುವಕರ ಜತೆಕಾಲ ಕಳೆಯಲು ಹೋಟೆಲ್, ರೂಮ್ ಎಲ್ಲ ಖರ್ಚುಗಳನ್ನು ಯುವತಿಯರೇ ತುಂಬುತ್ತಾರೆ.ಕೊನೆಗೆಕಿಡಿಗೇಡಿಗಳು ಯುವತಿಯರ ಲೈಂಗಿಕ ಸಂಪರ್ಕ ಬೆಳೆಸಿ ತಲೆಮರೆಸಿಕೊಳ್ಳುತ್ತಾರೆ.
ಯುವತಿಯರು, ಮಹಿಳೆಯರು ಸಾಮಾಜಿ ಕಜಾಲತಾಣಗಳ ಖಾತೆಗಳಲ್ಲಿ ಮೊಬೈಲ್ ನಂಬರ್, ಫೋಟೋ ಗಳನ್ನು ಪ್ರಕಟಿಸುವ ಮೊದಲು ಬಹಳ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ಪ್ರಕಟಿಸಿದರೂ ಅದನ್ನು ಬೇರೆಯವರು ಕಳವು ಮಾಡದಂತೆ ಕ್ರಮ ಕೈಗೊಳ್ಳಬೇಕು. –ರೋಹಿಣಿ ಕಟೋಚ್ ಸೆಪಟ್, ಎಸ್ಪಿ, ಸಿಐಡಿ ಸೈಬರ್
–ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.