ಕರೆ ಬಂದರೆ ಜಮೀನಿಗೆ ಬರುವರು ಕೃಷಿ ಅಧಿಕಾರಿ!

ರೈತ ಸ್ನೇಹಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಡಾ.ವೆಂಕಟೇಶ್‌ , ಹೊಲಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಕಾರ್ಯ

Team Udayavani, Nov 16, 2020, 4:18 PM IST

mysuru-tdy-2

ಎಚ್‌.ಡಿ.ಕೋಟೆ-ಸರಗೂರು ತಾಲೂಕಿನ ರೈತರ ಜಮೀನುಗಳಿಗೆಕೃಷಿ ಅಧಿಕಾರಿ ಡಾ.ವೆಂಕಟೇಶ್‌ ಭೇಟಿ ನೀಡಿ ಪರಿಶೀಲಿಸುತ್ತಿರುವುದು.

ಎಚ್‌.ಡಿ.ಕೋಟೆ: ತಮ್ಮ ಕೆಲಸ ಕಾರ್ಯಗಳಿಗೆ ಅಧಿಕಾರಿಗಳ ಬಳಿಗೆ ಜನಸಾಮಾನ್ಯರುಅಲೆದಾಡುವುದು ಸಾಮಾನ್ಯವಾಗಿದೆ. ಇದಕ್ಕೆ ಅಪವಾದ ಎಂಬಂತೆ ಇಲ್ಲೋರ್ವ ಕೃಷಿ ಅಧಿಕಾರಿಯೊಬ್ಬರು ರೈತರು ಕರೆದ ತಕ್ಷಣವೇಜಮೀನಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನಸ್ನೇಹಿ ಅಧಿಕಾರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಕೃಷಿಸಂಬಂಧಿಸಿದ ಸಮಸ್ಯೆಗಳಿದ್ದರೆವಿಚಾರಮುಟ್ಟಿಸಿದರೆ ಸಾಕು, ಆ ತಕ್ಷಣದಲ್ಲೇ ರೈತರ ಜಮೀನಿನಲ್ಲಿಹಾಜರಿರುತ್ತಾರೆ. ಬೆಳೆಗಳಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ ಅನ್ನದಾತರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಎಚ್‌.ಡಿ.ಕೋಟೆಯಲ್ಲಿ ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ಅಧಿಕಾರಿಯಾಗಿರುವ ಡಾ| ವೆಂಕಟೇಶ್‌ ರೈತ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರೈತರ ಕೈಗೆ ಅಧಿಕಾರಿಗಳು ಸಿಗುವುದಿಲ್ಲ. ಅವರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂಬ ದೂರುಗಳು ಸಾಮಾನ್ಯವಾಗಿ ಕೇಳಿ ಬರುತ್ತವೆ. ಡಾ| ವೆಂಕಟೇಶ್‌ ಇದಕ್ಕೆ ಹೊರತಾಗಿ ರೈತಪರ ಕಾಳಜಿ ತೋರುತ್ತಾ ಜನರೊಂದಿಗೆ ಬೆರೆತು, ಹೊಲಗಳಿಗೆ ಭೇಟಿ ನೀಡುತ್ತಾ, ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರತರಾಗಿರುತ್ತಾರೆ. ಈ ಭಾಗದಲ್ಲಿ ಇವರ ಕಾರ್ಯ ವೈಖರಿಗೆ ರೈತರು ಸಂತಸವ್ಯಕ್ತಪಡಿಸಿ, ಇಂತಹ ಅಧಿಕಾರಿ ನಮ್ಮ ತಾಲೂಕಿಗೆ ಬಂದಿರುವುದು ಹೆಮ್ಮೆಯಾಗಿದೆ ಎನ್ನುತ್ತಾರೆ.

ತಾಲೂಕಿನಲ್ಲಿ ಕಬಿನಿ, ತಾರಕ, ನುಗು, ಹೆಬ್ಬಳ್ಳ ಎಂಬ 4 ಜಲಾಶಯಗಳಿವೆ. ಫಲವತ್ತಾದ ಭೂಪ್ರದೇಶದ ಜೊತೆಗೆ ವಿಶಾಲವಾದ ಅರಣ್ಯ ಸಂಪತ್ತಿದೆ. ಆದರೂ ನಂಜುಂಡಪ್ಪ ವರದಿಯಂತೆ ಎಚ್‌.ಡಿ.ಕೋಟೆ ತಾಲೂಕು ತೀರ ಹಿಂದುಳಿದ ತಾಲೂಕು ಅನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ. ರೈತರ ಬಳಿ ಫ‌ಲವತ್ತಾದ ಜಮೀನುಗಳಿದ್ದರೂ ಕೃಷಿ ಬಿಕ್ಕಟ್ಟು, ಬೆಲೆ ಏರಿಳಿತ ಮತ್ತಿತರ ಕಾರಣ ಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಪ್ರಾದಾಯಿಕ ಕೃಷಿ ಪದ್ಧತಿಯನ್ನೇ ಅಳವಡಿಸಿಕೊಂಡಿದ್ದಾರೆ. ಅಧುನಿಕತೆಗೆ ತಕ್ಕಂತೆ ಯಾವಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು, ಅದರ ನಿರ್ವಹಣೆ ಹೇಗೆ ಎಂಬುದರ ಮಾಹಿತಿ ಬಹು ತೇಕ ರೈತರಿಗೆಇರುವುದಿಲ್ಲ.ಇವುಗಳಬಗ್ಗೆಡಾ|ವೆಂಕಟೇಶ್‌ ಅರಿವು ಮೂಡಿಸುತ್ತಾ ರೈತರಿಗೆ ಹತ್ತಿರವಾಗಿದ್ದಾರೆ.

ಬೆಳೆಗಳಿಗೆ ರೋಗ ತಗುಲಿದ್ದರೆ, ಇಳುವರಿ ಕುಂಠಿತವಾಗಿರುವುದು, ಗೊಬ್ಬರ, ಬೀಜೋಪಚಾರ, ಕಳೆ, ಬೇಸಾಯ,ಕೊಯ್ಲು ನಿರ್ವಹಣೆ ಸೇರಿದಂತೆ ಮತ್ತಿತರ ಯಾವುದೇ ಕೃಷಿ ಸಂಬಂಧಿತ ಸಮಸ್ಯೆಗಳಿದ್ದರೆ ಜಮೀನಿಗಳಿಗೆ ಭೇಟಿ ನೀಡುತ್ತಾರೆ. ಬೆಳೆಗಳಲ್ಲಿನಸಮಸ್ಯೆಗಳನ್ನು ಅರಿತು, ಪರಿಹಾರೋಪಾಯ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುತ್ತಾರೆ. ಸಾಕಷ್ಟು ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ

ಕೆಲಸ ಮಾಡಿ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಜನರ ಸಂಪರ್ಕವಿಲ್ಲದಂತೆ ಕಾರ್ಯನಿರ್ವಹಿಸುತ್ತಿರುತ್ತಾರೆ. ತಳಮಟ್ಟದಲ್ಲಿ ಸಮಸ್ಯೆಗಳನ್ನು ಆಲಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ಡಾ| ವೆಂಕಟೇಶ್‌ ಅವರು ಇದಕ್ಕೆ ಅಪವಾದ ಎಂಬಂತೆ ತಮ್ಮ ಕರ್ತವ್ಯದ ಅವಧಿಯಲ್ಲಿ ಬಹುತೇಕ ಸಮಯವನ್ನು ಕ್ಷೇತ್ರ ಸುತ್ತಾಟಕ್ಕಾಗಿ ಮೀಸಲಿಟ್ಟಿದ್ದಾರೆ.

ತಾಲೂಕಿನ ಯಾವ ಮೂಲೆಯಲ್ಲಿ ಸಮಸ್ಯೆ ಬಂದರೂ ಸ್ಪಂದಿಸುವೆ :  ರೈತರು ದೇಶದ ಬೆನ್ನೆಲುಬು. ಅವರು ಬೆಳೆಯುವ ಬೆಳೆಗಳಿಗೆ ಪೂರಕವಾಗಿ ಕೃಷಿ ಇಲಾಖೆ ಸಹಕಾರ ನೀಡಬೇಕು. ಸರ್ಕಾರ ನಮಗೆ ಪ್ರತಿ ತಿಂಗಳು ವೇತನ ನೀಡುವುದು ಐಷಾರಾಮಿಕೊಠಡಿಯಲ್ಲಿಕೂತು ಸಮಯ ವ್ಯಯ ಮಾಡುವುದಕ್ಕಲ್ಲ. ರೈತರ ಸಮಸ್ಯೆ ಆಲಿಸಬೇಕು, ಪರಿಹಾರಿಸುವ ನಿಟ್ಟಿನಲ್ಲಿಕಾರ್ಯನಿರ್ವಹಿಸಿದಾಗ ಮಾತ್ರಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಕ್ಕೆ ಸಾರ್ಥಕವಾಗುತ್ತದೆ ಅನ್ನುವುದು ನನ್ನ ಭಾವನೆ. ಹೀಗಾಗಿ ತಾಲೂಕಿನ ಯಾವುದೇ ಮೂಲೆಯಲ್ಲಿ ರೈತರ ಸಮಸ್ಯೆಕೇಳಿ ಬಂದರೂ ಸಮಸ್ಯೆ ಅದಕ್ಕೆ ಪರಿಹರಿಸುವ ನಿಟ್ಟಿನಲ್ಲಿ ನಾನುಕಾರ್ಯನಿರ್ವಹಿಸುತ್ತೇನೆ ಎಂದು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಡಾ| ವೆಂಕಟೇಶ್‌ ತಿಳಿಸಿದ್ದಾರೆ.

ಹೊಲದಲ್ಲಿ ಬೆಳೆ ಸಮಸ್ಯೆ ಇದೆಯಾ? ಕರೆ ಮಾಡಿ : ಕೃಷಿ ಸಹಾಯಕ ಅಧಿಕಾರಿ ಡಾ| ವೆಂಕಟೇಶ್‌ ತಾಲೂಕಿಗೆ ಆಗಮಿಸಿರುವುದು ರೈತರಿಗೆ ಒಂದುರೀತಿಯಲ್ಲಿ ವರದಾನವಾಗಿದೆ. ಜಮೀನುಗಳಿಗೆಭೇಟಿ ನೀಡುವಂತಹ ಅಧಿಕಾರಿಗಳು ಎಂದರೆ ಈ ಭಾಗದ ರೈತರಿಗೆ ಅಚ್ಚುಮೆಚ್ಚು. ಸಮಸ್ಯೆಯಲ್ಲಿ ಸಿಲುಕಿರುವ ರೈತರ ಬೆಳೆಗೆ ಸಂಬಂಧಿಸಿದ ಪರಿಹಾರಕ್ಕೆ ತಾವೇ ಖುದ್ದು ರೈತರ ಜಮೀನುಗಳಿಗೆ ಭೇಟಿ ನೀಡಿ ಕೃಷಿಗೆ ಅಗತ್ಯವಾಗಿ ಬೇಕಾದ ಸಲಹೆಗಳನ್ನು ನೀಡುತ್ತಿದ್ದಾರೆ. ಅಗತ್ಯವಿದ್ದಾಗ ತಿಂಗಳಲ್ಲಿ ಒಂದೆರಡು ದಿನಮಾತ್ರಕಚೇರಿಯಲ್ಲಿಕರ್ತವ್ಯ ನಿರ್ವಹಿಸುವ ಇವರ ತಮ್ಮ ಬಹುತೇಕ ಸಮಯವನ್ನುಕ್ಷೇತ್ರ ಸುತ್ತಾಟಕ್ಕಾಗಿ ಮೀಸಲಿಟ್ಟಿದ್ದಾರೆ. ತಾಲೂಕಿನಕಲ್ಲಿ ಬೆಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಡಾ| ವೆಂಕಟೇಶ್‌ ಮೊಬೈಲ್‌ ಸಂಖ್ಯೆ 8277933117 ಸಂಪರ್ಕಿಸಬಹುದು.

ಇಂತಹ ಅಧಿಕಾರಿ ಹಿಂದೆಂದೂ ಸಿಕ್ಕಿರಲಿಲ್ಲ :  ನಮ್ಮ ತಾಲೂಕಿನಲ್ಲಿ ಡಾ. ವೆಂಕಟೇಶ್‌ಕೃಷಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಖುಷಿ ತಂದಿದೆ. ಇಲ್ಲಿಯ ತನಕ ಎಷ್ಟೋ ಅಧಿಕಾರಿಗಳುಕೃಷಿ ಇಲಾಖೆಗೆ ಬಂದು ಹೋದರೂ ಡಾ.ವೆಂಕಟೇಶ್‌ ಅವರಂತೆ ಕರ್ತವ್ಯ ನಿರ್ವಹಿಸಿಲ್ಲ. ಸಮಸ್ಯೆ ಹೇಳಿಕೊಂಡ ರೈತರ ಜಮೀನನಲ್ಲಿಕ್ಷಣ ಮಾತ್ರದಲ್ಲಿ ಭೇಟಿ ನೀಡಿ ಅಹವಾಲು ಆಲಿಸಿ ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡುವ ಇಂತಹ ಅಧಿಕಾರಿಗಳು ಸಿಗುವುದು ಅಪರೂಪ. ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆಕೃಷಿ ಸಂಕಷ್ಟಗಳಿಗೆ ಸ್ವಂದಿಸುವ ಗುಣ ಇದೆ ಎಂದು ಸಾವಯವ ಕೃಷಿ ಪ್ರಶಸ್ತಿ ಪರಸ್ಕೃತರಾದ ಮೈಲಾರ ಪುಟ್ಟಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಎಚ್‌.ಬಿ.ಬಸವರಾಜು

ಟಾಪ್ ನ್ಯೂಸ್

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.