ಕೃತ್ತಿಕಾ ಕೇರಾಫ್ ರಾಜ ನಿವಾಸ

ಹೊಸ ವಿಳಾಸದಲ್ಲಿ ಸಿಕ್ಕ ನಿವಾಸದ ಮೇಲೆ ನಿರೀಕ್ಷೆ

Team Udayavani, Nov 17, 2020, 12:15 PM IST

CINEMA-TDY-1

“ಈಗಾಗಲೇ ಮೂರು ಸಿನಿಮಾ ಮಾಡಿದ್ದೇನೆ. “ರಾಜ ನಿವಾಸ’ ನನ್ನ ನಾಲ್ಕನೇ ಸಿನಿಮಾ. ಹಿಂದಿನ ಮೂರು ಸಿನಿಮಾಗಳಲ್ಲಿ ಒಂದೊಂದು ಥರದ ವಿಭಿನ್ನ ಪಾತ್ರಗಳು ಸಿಕ್ಕಿವೆ. ಈ ಸಿನಿಮಾದಲ್ಲಿ ಮತ್ತೂಂದು ಥರದ ವಿಭಿನ್ನ ಪಾತ್ರ ಸಿಕ್ಕಿದೆ. ಒಬ್ಬ ನಟಿಯಾಗಿ ಈ ಥರದ ಪಾತ್ರಗಳನ್ನು ಖುಷಿಯಿಂದ ಸ್ವೀಕರಿಸಿ ಮಾಡುತ್ತೇನೆ. ಇಂಥ ಪಾತ್ರಗಳು ನನಗೆ ತುಂಬ ಖುಷಿ ಕೊಡುತ್ತವೆ’ ಇದು ನಟಿ ಕೃತ್ತಿಕಾ ರವೀಂದ್ರ ಮಾತು.

ಆರಂಭದಲ್ಲಿಕಿರುತೆರೆಯ ಮೂಲಕ ಗಮನ ಸೆಳೆದು ನಂತರ “ಕೆಂಗುಲಾಬಿ’ ಚಿತ್ರದ ಮೂಲಕ ಹಿರಿತೆರೆಗೆ ಪರಿಚಯವಾದಕೃತ್ತಿಕಾ ಸದ್ಯ ಹಿರಿತೆರೆಯಲ್ಲೇ ಬಿಝಿಯಾಗಿದ್ದಾರೆ. “ಯಾರಿಗೆ ಯಾರುಂಟು’ ಚಿತ್ರದ ಬಳಿಕ ಚಿತ್ರರಂಗದಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಕೃತ್ತಿಕಾ ಸದ್ಯ ತಾವು ಅಭಿನಯಿಸಿರುವ “ಶಾರ್ದೂಲ’ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಇದರ ನಡುವೆಯೇ ಕೃತ್ತಿಕಾ ಅಭಿನಯದ ಮತ್ತೂಂದು ಹೊಸಚಿತ್ರ “ರಾಜ ನಿವಾಸ’ಕೂಡ ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದಿದೆ.

ಇದೇ ವೇಳೆ “ಉದಯವಾಣಿ’ ಜೊತೆಗೆ ಮಾತಿಗೆ ಸಿಕ್ಕ ಕೃತ್ತಿಕಾ, ಮುಂದೆ ಬರಲಿರುವ ತಮ್ಮ ಹೊಸಚಿತ್ರಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. “ಈಗಾಗಲೇ “ಶಾರ್ದೂಲ’ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಕೋವಿಡ್‌ ಇಲ್ಲದಿದ್ದರೆ, ಈ ವರ್ಷದ ಆರಂಭದಲ್ಲಿಯೇ “ಶಾರ್ದೂಲ’ ರಿಲೀಸ್‌ ಆಗುತ್ತಿತ್ತು. ಸದ್ಯದ ಪರಿಸ್ಥಿತಿ ನೋಡಿದ್ರೆ, ಮುಂದಿನ ವರ್ಷದ ಆರಂಭದಲ್ಲಿ ಈ ಸಿನಿಮಾ ರಿಲೀಸ್‌ ಆಗಬಹುದು’ ಎನ್ನುತ್ತಾರೆ. “ಇನ್ನು “ರಾಜ ನಿವಾಸ’ ಸದ್ಯ ನಾನು ಅಭಿನಯಿಸುತ್ತಿರುವ ಹೊಸ ಸಿನಿಮಾ. ಇದರಲ್ಲಿ ರಾಘವ್‌ ನಾಯಕ್‌ಗೆ ಹೀರೋಯಿನ್‌ ಆಗಿದ್ದೇನೆ. “ಶಾರ್ದೂಲ’ದ ನಂತರ ಸಿಕ್ಕ ಸಿನಿಮಾ ಇದು.

ಸುಮಾರು ಒಂದು ವರ್ಷದ ಹಿಂದೆಯೇ “ರಾಜ ನಿವಾಸ’ ಸಿನಿಮಾದ ಮೊದಲ ಹಂತದ ಶೂಟಿಂಗ್‌ ನಡೆದಿತ್ತು. ಎರಡನೇ ಹಂತದ ಶೂಟಿಂಗ್‌ ಆರಂಭಿಸಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್‌ ಅನೌನ್ಸ್‌ ಆಯ್ತು. ಈಗ ಮತ್ತೆ ಶೂಟಿಂಗ್‌ ಶುರುವಾಗಿದ್ದು,ಕೊನೆ ಹಂತಕ್ಕೆ ಬಂದಿದೆ. ಇದರಲ್ಲಿ ನಾನು ಪುರಾತತ್ವ ಇಲಾಖೆಯಲ್ಲಿ ಕೆಲಸ ಮಾಡುವವಳಾಗಿ ಕಾಣಿಸಿಕೊಂಡಿದ್ದೇನೆ. ನಾನು ಮತ್ತು ನನ್ನ ಗಂಡ ಒಂದು ಡಿಪಾರ್ಟ್‌ಮೆಂಟ್‌ನಲ್ಲಿಕೆಲಸ ಮಾಡುತ್ತಿರುತ್ತೇವೆ. ಒಂದು ಕೇಸ್‌ ಹುಡುಕಿಕೊಂಡು ಅಪರಿಚಿತ ಜಾಗಕ್ಕೆ ಹೋಗುತ್ತೇವೆ. ಅಲ್ಲಿ ಏನೇನು ನಡೆಯುತ್ತದೆ ಅನ್ನೋದೆ, “ರಾಜ ನಿವಾಸ’ ಸಿನಿಮಾದಕಥೆಯ ಒಂದು ಎಳೆ. ಇಡೀ ಸಿನಿಮಾ ಸಸ್ಪೆನ್ಸ್‌ – ಥ್ರಿಲ್ಲರ್‌ ಜಾನರ್‌ನಲ್ಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಡುತ್ತಾರೆ ಕೃತ್ತಿಕಾ.

“ರಾಜ ನಿವಾಸ’ ಚಿತ್ರದ ಪಾತ್ರಕ್ಕಾಗಿ ಒಂದಷ್ಟು ತಯಾರಿಯನ್ನೂಕೃತ್ತಿಕಾ ಮಾಡಿ ಕೊಳ್ಳಬೇಕಾಯಿತಂತೆ. “ಮೊದಲ ಬಾರಿಗೆ ಈ ಥರದ ಕ್ಯಾರೆಕ್ಟರ್‌ ಮಾಡುತ್ತಿರುವುದರಿಂದ, ಪುರಾತತ್ವ ಇಲಾಖೆಯಲ್ಲಿ ಇರುವವರು ಹೇಗೆ ಇರುತ್ತಾರೆ ಅನ್ನೋದನ್ನ ಒಂದಷ್ಟು ಗಮನಿಸಿ ಹೋಮ್‌ ವರ್ಕ್‌ ಮಾಡಿಕೊಂಡೆ. ಮಂಗಳೂರು ಭಾಗದಲ್ಲಿ ಚಿತ್ರದಕಥೆ ನಡೆಯುವುದರಿಂದ, ಭಾಷೆಯಲ್ಲಿಕೂಡ ಒಂದಷ್ಟು ಬದಲಾವಣೆ ಮಾಡಿಕೊಳ್ಳಬೇಕಾಗಿತ್ತು. ಒಟ್ಟಿನಲ್ಲಿ ಅಂದುಕೊಂಡಂತೆ ಸಿನಿಮಾ ಚೆನ್ನಾಗಿ ಬರುತ್ತಿದೆ’ ಎನ್ನುವುದು ಕೃತ್ತಿಕಾ ಮಾತು.

ಇದರ ನಡುವೆಯೇ ಕೃತ್ತಿಕಾ, “ನಿಕ್ಕಿ ಲಾಸ್ಟ್‌ಕಾಲ್‌’ ಎಂಬ ವೆಬ್‌ ಸೀರಿಸ್‌ನಲ್ಲಿಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳಾಕೇಂದ್ರಿತಕಥಾಹಂದರ ಹೊಂದಿರುವ ಈ ವೆಬ್‌ ಸೀರಿಸ್‌ನಲ್ಲಿ ಆರ್‌.ಜೆ ಪಾತ್ರ ಮಾಡುತ್ತಿದ್ದಾರಂತೆ ಕೃತ್ತಿಕಾ. ಇದಾದ ಬಳಿಕ, ಈ ಹಿಂದೆ “ಅನಂತು ವರ್ಸಸ್‌ ನುಸ್ರತ್‌’ ಚಿತ್ರವನ್ನು ನಿರ್ದೇಶಿಸಿದ್ದ ಸುಧೀರ್‌ ಶ್ಯಾನುಭೋಗ್‌ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲೂ ಕೃತ್ತಿಕಾ ಹೋರಾಟ ಗಾರ್ತಿ ಪಾತ್ರದಲ್ಲಿಕಾಣಿಸಿ ಕೊಳ್ಳು ತ್ತಿದ್ದು, ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಕೂಡ ನಡೆದಿದೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

tenant kannada movie

Sandalwood: ತೆರೆಗೆ ಬಂತು ʼಟೆನೆಂಟ್ʼ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.