ಕಾಲೇಜು ಶುರು: ಮೊದಲ ದಿನ ಕೋವಿಡ್ ಪರೀಕ್ಷೆ
Team Udayavani, Nov 18, 2020, 1:53 PM IST
ರಾಮನಗರ: ಸರ್ಕಾರದ ಸೂಚನೆಯಂತೆ ಮಂಗಳವಾರ ಪದವಿ ಕಾಲೇಜುಗಳ ಬಾಗಿಲು ತೆರೆದವಾದರೂ, ವಿದ್ಯಾರ್ಥಿಗಳು ಕಾಲೇಜಿನ ಕಡೆ ಮುಖ ಮಾಡಲಿಲ್ಲ. ಉಪನ್ಯಾಸಕರು ಕಾಲೇಜಿಗೆ ಬಂದರಾದರೂ, ಕೋವಿಡ್ ಸೋಂಕು ಪರೀಕ್ಷೆಗೆ ತೆರಳಿದರು. ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಫೋನಾಯಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದೆಲ್ಲಿ ಎಂದು ತಮ್ಮ ಉಪನ್ಯಾಸಕರ ಸಲಹೆ ಪಡೆದುಕೊಂಡಿದ್ದಾರೆ.
ಕೋವಿಡ್- 19 ಸೋಂಕು ಕಾರಣ ಸುದೀರ್ಘ ರಜೆಯ ನಂತರ ಸರ್ಕಾರದ ಸೂಚನೆಯಂತೆ ಮಂಗಳವಾರ ಜಿಲ್ಲಾದ್ಯಂತ ಅಂತಿಮ ಪದವಿ ವಿದ್ಯಾ ರ್ಥಿಗಳಿಗಾಗಿ ಕಾಲೇಜು ಪುನಾರಂಭವಾಗಿವೆ. ದೀಪಾವಳಿ ಹಬ್ಬದ ಮೂಡ್‌ನಲ್ಲಿದ್ದ ಕಾರಣವೋ, ಕೋವಿಡ್ ಸೋಂಕು ಆತಂಕ ಕಾರಣವೋ, ಮಂಗಳವಾರ ಅಂತಲೋ ಮೊದಲ ದಿನವಿದ್ಯಾರ್ಥಿಗಳು ಕಾಲೇಜಿನ ಕಡೆ ಹೆಜ್ಜೆ ಹಾಕಲಿಲ್ಲ.
ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದಲ್ಲಿ 15 ಮಂದಿ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದರಾದರು,ಕೋವಿಡ್ ಸೋಂಕು ಪರೀಕ್ಷೆಯ ವರದಿ ಇಲ್ಲದ ಕಾರಣ ತರಗತಿಗಳನ್ನು ನಡೆಸಲಿಲ್ಲ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಅಗತ್ಯತೆ ಮತ್ತು ಪೋಷಕರಿಂದ ತರಬೇಕಾದ ಅನುಮತಿ ಪತ್ರದ ನಮೂನೆ ಪಡೆದು ವಿದ್ಯಾರ್ಥಿಗಳು ಮನೆಕಡೆಗೆ ಹೆಜ್ಜೆ ಹಾಕಿದರು.
ಉಪನ್ಯಾಸಕರಿಗೆ ಕೋವಿಡ್ ಪರೀಕ್ಷೆ: ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 37 ಉಪನ್ಯಾಸಕರಿಗೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ಕೋವಿಡ್ ಸೋಂಕು ಪತ್ತೆಗಾಗಿ ಗಂಡಲು ಮತ್ತು ಮೂಗಿದ ದ್ರವ ಮಾದರಿಯನ್ನು ಪಡೆದುಕೊಂಡಿದ್ದಾರೆ.ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ ಅಂತಿಮ ತರಗತಿಗಳಲ್ಲಿ ಒಟ್ಟು 500 ಮಂದಿ ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ಕೊಟ್ಟಿರುವುದಾಗಿ ಉಪನ್ಯಾಸಕರು ತಿಳಿಸಿದ್ದಾರೆ.
ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಪರೀಕ್ಷೆ ಎಲ್ಲಿ, ಹೇಗೆ ಮಾಡಿಸಿಕೊಳ್ಳಬೇಕು ಎಂಬ ಮಾಹಿತಿ ಇಲ್ಲ. ಹೀಗಾಗಿ ತಾವು ಆರೋಗ್ಯ ಇಲಾಖೆಗೆ ಪತ್ರ ಬರೆದು ತಕ್ಷಣದಲ್ಲೆ ಒಂದು ದಿನ ನಿಗದಿ ಮಾಡಿ ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗಳಿಗೆ ಸೋಂಕು ಪರೀಕ್ಷೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. –ವೀರೇಶ್, ಪ್ರಾಂಶುಪಾಲ, ಪದವಿ ಕಾಲೇಜು, ಭಾರತೀಯ ಸಂಸ್ಕೃತಿ ವಿದ್ಯಾಪೀಠ.
ಸರ್ಕಾರದ ನಿಯಮಾನ್ವಯಕೋವಿಡ್ ಪರೀಕ್ಷೆ ಮಾಡಿಸಿಕೊಂಡ ವಿದ್ಯಾರ್ಥಿಗಳಿಗೆ ಪ್ರವೇಶಕಲ್ಪಿಸಲಾಗುವುದು. ಪೋಷಕರಿಂದ ಅನುಮತಿಪತ್ರ ತರುವುದುಕಡ್ಡಾಯ. ವಿದ್ಯಾರ್ಥಿಗಳು ಬಂದ ನಂತರ ಪಾಠ ಪ್ರವಚನ ಆರಂಭವಾಗಲಿದೆ. ಆನ್‌ಲೈನ್ ತರಗತಿಗಳು ಚಾಲನೆಯಲ್ಲಿರುತ್ತವೆ. –ಕಿಶೋರ್, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.