ಶೀಘ್ರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ Poco M3: ಏನೆಲ್ಲಾ ವಿಶೇಷತೆಗಳಿವೆ ?
Team Udayavani, Nov 18, 2020, 3:43 PM IST
ನವದೆಹಲಿ: ಮುಂಬರುವ ನವೆಂಬರ್ 24ಕ್ಕೆ ತನ್ನ ಹೊಸ ಮಾದರಿಯ ಮೊಬೈಲ್ ಬಿಡುಗಡೆಗೆ ತಯಾರಿ ನಡೆಸಲಾಗುತ್ತಿದೆ ಎಂದು Poco ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ. Poco M2 ಮತ್ತು Poco M2 pro ಆವೃತ್ತಿಯ ಮೊಬೈಲ್ ಫೋನಿನ ನಂತರದ ಹೊಸ ಆವೃತ್ತಿಯ ಸ್ಮಾರ್ಟ್ ಫೋನ್ ಇದಾಗಿದೆ. Poco M3 ಮೊಬೈಲ್‌ನ ಯಾವುದೆ ಹೆಚ್ಚಿನ ಮಾಹಿತಿಗಳನ್ನು ಸಂಸ್ಥೆ ಹಂಚಿಕೊಂಡಿಲ್ಲ. ಆದರೂ ಕೆಲವು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಮೊಬೈಲ್ ಪೋನ್ M2010J19CG ಮೊಡೆಲ್ ನಂಬರಿನಲ್ಲಿ ಬರುವ ನಿರೀಕ್ಷೆಗಳಿದ್ದು, ಈ ಬಗ್ಗೆ ಬೇಂಚ್ ಮಾರ್ಕ್ ಸೈಟ್ ಗೀಕ್ ಬೇಂಚ್‌ನಲ್ಲಿ ಮಾಹಿತಿ ಹರಿದಾಡಿತ್ತು. ಈ ಪೋನ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿರುವ ರೆಡ್‌ಮಿ ನೋಟ್ 10 ಮಾದರಿಯಲ್ಲೇ ಇರಲಿದೆ ಎಂದು ಊಹಿಸಲಾಗಿದೆ.
ಪೋಕೊ ಗ್ಲೋಬಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಮಾಹಿತಿ ಅನ್ವಯ ಮುಂಬರುವ ನವೆಂಬರ್ 24 ರಂದು ಸಂಜೆ 5:30ಕ್ಕೆ ಹಮ್ಮಿಕೊಂಡಿರುವ ವರ್ಚುವಲ್ ಕಾರ್ಯಕ್ರಮದಲ್ಲಿ Poco M3 ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಸಂಸ್ಥೆಯ ಮಾರ್ಕೆಟಿಂಗ್ ಮ್ಯಾನೇಜರ್ ಮತ್ತು ಜಾಗತಿಕ ವಕ್ತಾರರಾಗಿರುವ ಆಂಗಸ್ ಕೈ ಹೋ ಎನ್ಜಿ 2020ರ ಅಂತ್ಯದ ಮೊದಲು ಹೊಸ Poco ಮೊಬೈಲ್ ಬರಲಿದೆ ಎಂದು ಅಂದಾಜಿಸಿದ್ದರು.
ಇದನ್ನೂ ಓದಿ: ಡಿ.1ಕ್ಕೆ ರಾಜ್ಯಸಭಾ ಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಿ ಕೆ.ನಾರಾಯಣ್ ನಾಮಪತ್ರ ಸಲ್ಲಿಕೆ
Poco M3ನಲ್ಲಿ ಏನೆಲ್ಲಾ ವಿಶೇಷತೆಗಳಿವೆ:
Poco ತಾನು ಮಾರುಕಟ್ಟೆಗೆ ಪರಿಚಯಿಸಲಿರುವ ಹೊಸ ಮೊಬೈಲ್ ಕುರಿತಾಗಿ ಯಾವುದೇ ಹೆಚ್ಚಿನ ಮಾಹಿತಿಗಳನ್ನು ಇಲ್ಲಿಯವರೆಗೆ ಹಂಚಿಕೊಂಡಿಲ್ಲ. ಆದರೆ ಟಿಪ್ ಸ್ಟಾರ್ ಮುಖುಲ್ ಶರ್ಮ ತಮ್ಮ ಯೂಟೂಬ್ ವೀಡಿಯೊದಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಈ ಮೊಬೈಲ್ 16.57 ಇಂಚುಗಳ ಫುಲ್ ಹೆಚ್ ಡಿ ಡಿಸ್‌ಪ್ಲೇ ಹೊಂದಿರಲಿದ್ದು, ಜೊತೆಗೆ ಡೋಟ್ ಡ್ರೋಪ್ ವಿನ್ಯಾಸವನ್ನು ಒಳಗೊಂಡಿರುವ ಸಾಧ್ಯತೆಗಳಿವೆ. (company speak for a waterdrop-style notch)
Poco M3 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ ಡ್ರ‍್ಯಾಗನ್ 662 SoC ಅನ್ನು ಒಳಗೊಂಡಿರಲಿದೆ. ಹಾಗೆಯೇ ಈ ಮೊಬೈಲ್ ಪೋನ್ 48 ಮೆಗಾಪಿಕ್ಸೆಲ್ ಒಳಗೊಂಡ ಟ್ರಿಬಲ್ ರಿಯಲ್ ಕ್ಯಾಮರಾ ಹೋದಿರುವ ಸಾಧ್ಯತೆಗಳಿವೆ ಎಂದಿದ್ದಾರೆ. ಈ ಪೋನ್ ಡ್ಯುವೆಲ್ ಸ್ಪೀಕರ್ ಮತ್ತು 6000 ಎಮ್ ಹೆಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ 18 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೋವಿಡ್ ನಿಯಂತ್ರಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ : ಪ್ರಿಯಾಂಕ್ ಖರ್ಗೆ ಟೀಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.