ಅಪರೂಪದ ರೋಮಾಂಚಕ ಕಾದಂಬರಿ “ಜುಗಾರಿ ಕ್ರಾಸ್’
Team Udayavani, Nov 19, 2020, 5:49 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಪೂರ್ಣಚಂದ್ರ ತೇಜಸ್ವಿ ಅವರ “ಜುಗಾರಿ ಕ್ರಾಸ್’ ಒಂದು ಅಪರೂಪದ ರೋಮಾಂಚಕ ಕಾದಂಬರಿಯಾಗಿದೆ. ಮಲೆ ನಾಡಿನ ದಟ್ಟ ಅರಣ್ಯಗಳಲ್ಲಿ ನಡೆಯುವ ದಂಧೆಗಳ ಕುರಿತಾದ ಸಮಗ್ರ ಚಿತ್ರಣಗಳು ಇದರಲ್ಲಿವೆ.
ಕಾಡಿನ ಒಡನಾಡಿ ತೇಜಸ್ವಿ ಅವರು ಪಶ್ಚಿಮ ಘಟ್ಟದ ಏಕತಾನತೆಯ ಅರಣ್ಯದ ಇನ್ನೊಂದು ಮಗ್ಗು ಲನ್ನು ರಸವತ್ತಾಗಿ ಈ ಕೃತಿಯಲ್ಲಿ ವಿಶ್ಲೇಷಿಸಿ¨ªಾರೆ. ಕೆಂಪು ವಜ್ರದ ಹಿಂದೆ ನಡೆ ಯುವ ಕಳ್ಳಾಟಗಳು ಹಾಗೂ ವಿಚಿತ್ರ ಗೋಜಲುಗಳ ನಡುವೆ ಸಿಲುಕಿರುವ ಈ ದಂಧೆಯ ಕರಾಳತೆಯನ್ನು ಓದುಗರ ಮನಮುಟ್ಟುವಂತೆ ನಿರೂಪಿಸಲಾಗಿದೆ.
ಜತೆಗೆ ಈ ಕಾದಂಬರಿ ಭ್ರಷ್ಟತೆಗೆ ಪರೋಕ್ಷ ಬೆಂಬಲ ನೀಡುವ ನಮ್ಮ ಆಡಳಿತ ವ್ಯವಸ್ಥೆಯ ಮತ್ತೂಂದು ಮುಖವನ್ನೂ ಓದುಗರಿಗೆ ಪರಿಚ ಯಿಸುತ್ತದೆ. ಕರಾಳ ದಂಧೆಗಳು ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಅದಕ್ಕೆ ಸಾಥ್ ನೀಡುವ ನಮ್ಮ ರಾಜಕಾರಣ ಹಾಗೂ ಕಾನೂನು ವ್ಯವಸ್ಥೆ ಹೇಗಿದೆ ಎಂಬುದನ್ನು ಮನ ಮುಟ್ಟುವಂತೆ ವಿವರಿಸಲಾಗಿದೆ. ಅರಣ್ಯ ಸಂಪ ತ್ತನ್ನು ಯಥೇತ್ಛವಾಗಿ ದುರ್ಬಳಕೆ ಮಾಡುವ ಕಾಡುಗಳ್ಳರ ಒಂದು ಬೃಹತ್ ಜಾಲದ ದರ್ಶನವು ನಮಗೆ ಈ ಕೃತಿಯಿಂದ ಆಗುತ್ತದೆ.
ಸುರೇಶ ಹಾಗೂ ಗೌರಿ ಎಂಬ ದಂಪತಿ ತಮಗರಿವಿಲ್ಲದಂತೆಯೇ ಒಂದು ವ್ಯೂಹ ದೊಳಗೆ ಸಿಲುಕುವ ಪರಿ ನಿರೀಕ್ಷೆಗೂ ಮೀರಿದ್ದು! ಏಲಕ್ಕಿ ಚೀಲದೊಳಗೆ ಅಕಸ್ಮಾತ್ ಆಗಿ ಸೇರಿಕೊಳ್ಳುವ ಒಂದು ಪ್ಯಾಕೆಟ್‌ನಿಂದ ಶುರು ವಾಗುವ ಅವಾಂತರಗಳು ಈ ದಂಪತಿಯನ್ನು ಬೆಂಬಿಡದೆ ಕಾಡುತ್ತವೆ. ಹದ್ದುಗಣ್ಣಿಟ್ಟು ಅವರನ್ನು ಹಿಂಬಾಲಿಸುವ ದಂಧೆಕೋರರು ಕುತೂಹಲಕ್ಕೆ ಕಾರಣರಾಗುತ್ತಾರೆ. ಈ ವಿಚಿತ್ರ ಸನ್ನಿವೇಶದಲ್ಲಿ ಸಿಲುಕುವ ದಂಪತಿಯು ದಂಧೆ ಕೋರರಿಂದ ತಪ್ಪಿಸಿಕೊಳ್ಳಲು ರೈಲು ಹತ್ತಿ ಪಾರಾಗುವ ಪ್ರಯತ್ನವು ಕಾದಂಬರಿಯನ್ನು ರೋಚಕ ಮಜಲಿಗೆ ಎಳೆದೊಯ್ಯುತ್ತದೆ.
ಈ ಹಂತದಲ್ಲಿ ದಂಪತಿಗೆ ಸಿಗುವ ಒಂದು ಕಡತವು ನಿಗೂಢ ಅರ್ಥಗಳ ಖಜಾನೆಯಾ ಗಿದ್ದು, ಕೆಂಪು ವಜ್ರದ ನಿಕ್ಷೇಪದ ಜಾಡನ್ನು ಒಳಗೊಂಡಿರುತ್ತದೆ. ಅದನ್ನು ಅರ್ಥೈಸಿಕೊಂಡ ಸುರೇಶನು ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲಾಗದೆ ಇಕ್ಕಟ್ಟಿನಲ್ಲಿ ಸಿಲುಕುವ ಪರಿಯನ್ನು ತೇಜಸ್ವಿಯವರು ಓದುಗರ ಮನ ಮುಟ್ಟುವಂತೆ ವಿವರಿಸಿದ್ದಾರೆ.
ತೇಜಸ್ವಿ ಅವರಿಗೆ ಕಾಡಿನ ಮೇಲಿರುವ ಅತಿಯಾದ ಪ್ರೇಮವು ಕಾದಂಬರಿ ಯುದ್ದಕ್ಕೂ ಪ್ರತಿಬಿಂಬಿತವಾಗಿದೆ. ಆರಂಭದಲ್ಲಿ ಪಶ್ಚಿಮ ಘಟ್ಟದ ದಟ್ಟ ಕಾಡುಗಳು, ಘಾಟಿ ರಸ್ತೆಯ ತರಹೇ ವಾರಿ ದಂಧೆಗಳು, ಸಹ್ಯಾದ್ರಿ ಪರ್ವತಗಳ ವರ್ಣನೆಯಿದೆ. ಕಾದಂಬರಿಯ ಮಧ್ಯ ಭಾಗದಲ್ಲಿ ರೈಲು ಪ್ರಯಾಣದ ರುದ್ರ ಅನುಭವಗಳ ಸರಮಾಲೆಯನ್ನೇ ಕಟ್ಟಿ ಕೊಡಲಾಗಿದೆ. ಕೊನೆಯ ಹಂತದಲ್ಲಿ ಸುರಂಗ ಮಾರ್ಗದಲ್ಲಿ ಸಿಲುಕುವ ದಂಪತಿಯ ಪೀಕಲಾಟವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಲಾಗಿದೆ.
ಕೊನೆಯಲ್ಲಿ ಕಾದಂಬರಿಗೆ ತಾರ್ಕಿಕ ಅಂತ್ಯ ಸಿಗುತ್ತದೆ. ಎಲ್ಲ ಮಾಹಿತಿಗಳು ಕೈಯಲ್ಲಿದ್ದರೂ ಏನೂ ಸಾಧಿಸಲಾಗದ ಸುರೇಶನ ಪರಿಸ್ಥಿತಿಯು ವಜ್ರದ ಬೆನ್ನೇರಿ ಹೊರಡುವ ಶೋಧಕರ ಪ್ರತಿರೂಪವೆಂಬಂತೆ ಭಾಸವಾಗುತ್ತದೆ. ಜತೆಗೆ ಕುಂಟರಾಮ, ಶೇಷಪ್ಪ ಹಾಗೂ ರಾಜಪ್ಪನ ಪಾತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಒಟ್ಟಾರೆಯಾಗಿ “ಜುಗಾರಿ ಕ್ರಾಸ್’ ಕಾದಂಬ ರಿಯು ಓದುಗರನ್ನು ಒಂದು ಕೌತುಕದ ಲೋಕಕ್ಕೆ ಕರೆದೊಯ್ಯುತ್ತದೆ. ಹಲವು ರೀತಿಯ ಮಾನಸಿಕ ಸಂಘರ್ಷವನ್ನು ಸೃಷ್ಟಿಸುವ ಈ ಕೃತಿಯು ಆ ಕೌತುಕಗಳಿಗೆ ಉತ್ತರ ಕೊಡುತ್ತಾ ಓದುಗರಿಗೆ ಅವ್ಯಕ್ತ ಸಾಹಿತ್ಯ ರುಚಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.