ಯುಎಇಯಲ್ಲಿ ಕಲರ್‌ಫುಲ್ ಸ್ಯಾಲರಿಯ ಉದ್ಯೋಗ
Team Udayavani, Nov 19, 2020, 4:41 PM IST
ದುಬಾೖ: ಕೋವಿಡ್ ಬಳಿಕ ಜಗತ್ತಿನಾದ್ಯಂತ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಉದ್ಯೋಗ ಕಳೆದುಕೊಂಡವರು ಒಂದು ಕಡೆಯಾದರೆ, ಹೊಸದಾಗಿ ಪದವಿ ಪಡೆದು ಹೊರಬಂದವರು ಉದ್ಯೋಗ ಇಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಸಲು ಸರಕಾರಗಳು ವಿಫಲವಾಗಿವೆ. ಇಂತಹ ಸಂದರ್ಭ ಸಾಂಕ್ರಾಮಿಕ ಕಾಯಿಲೆ ಈ ಬಿಕ್ಕಟ್ಟನ್ನು ಮತ್ತಷ್ಟು ತೀವ್ರ ಸ್ವರೂಪಕ್ಕೆ ದೂಡಿದೆ.
ಕೋವಿಡ್ 19 ಬಳಿಕ ಎದುರಾಗಿರುವ ಅನಿಶ್ಚಿತತೆಯ ಸಮಯದಲ್ಲಿ ಉದ್ಯೋಗ ಕ್ಷೇತ್ರವು ನಿಧಾನವಾಗಿ ಚೇತರಿಕೆಯಾಗುತ್ತಿದೆ. ಇಲ್ಲಿ ಅಪಾಯ ನಿರ್ವಹಣೆ (ರಿಸ್ಕ್ ಮ್ಯಾನೆಜ್ಮೆಂಟ್) ಹೆಚ್ಚು ಬೇಡಿಕೆಯ ಕ್ಷೇತ್ರವಾಗಿದೆ. ಜಾಗತಿಕ ನೇಮಕಾತಿ ಸಂಸ್ಥೆ ರಾಬರ್ಟ್ ಹಾಫ್ ಪ್ರಕಟಿಸಿದ ಇತ್ತೀಚಿನ ಅಧ್ಯಯನವೊಂದರಲ್ಲಿ ಯುಎಇಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯೋಗವೆಂದರೆ ಚೀಫ್ ರಿಸ್ಕ್ ಆಫೀಸರ್ ಎಂದು ಹೇಳಿದೆ.
2021ರ ತನ್ನ ವೇತನ ಸಂಬಳ ಮಾರ್ಗದರ್ಶಿಯಲ್ಲಿ, ನೇಮಕಾತಿ ಸಂಸ್ಥೆ ಯುಎಇಯಲ್ಲಿ ಬೇಡಿಕೆಯಿರುವ ಉನ್ನತ ಉದ್ಯೋಗಗಳು ಮತ್ತು ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಥಿತಿಸ್ಥಾಪಕತ್ವವನ್ನು ತೋರಿಸಿದ ಕ್ಷೇತ್ರಗಳನ್ನು ಎತ್ತಿ ತೋರಿಸಿದೆ. ಅಧ್ಯಯನದ ಪ್ರಕಾರ ಯುಎಇಯಲ್ಲಿ ಹೆಚ್ಚು ಚೇತರಿಸಿಕೊಳ್ಳುವ ಕೈಗಾರಿಕೆಗಳ ಸಾಲಿನಲ್ಲಿ ಔಷಧೀಯ ವಸ್ತುಗಳು, ದೈನಂದಿನ ಬಳಕೆಯ ವಸತುಗಳು, ಗ್ರಾಹಕ ವಸ್ತುಗಳು (ಎಫ್ಎಂಸಿಜಿ) ಸೇರಿವೆ. ಪ್ರಮುಖವಾಗಿ ಹಣಕಾಸು ವ್ಯವಸ್ಥಾಪಕ, ಕಾರ್ಯನಿರ್ವಾಹಕ ಸಹಾಯಕರು (ಅಸಿಸ್ಟೆಂಟ್ ಮ್ಯಾನೇಜರ್), ಮುಖ್ಯ ತಂತ್ರಜ್ಞಾನ ಅಧಿಕಾರಿ, ಎಚ್.ಆರ್. ಅಥವಾ ಮಾನವ ಸಂಪನ್ಮೂಲ ವಿಭಾಗಗಳ ಹುದ್ದೆಗಳಿಗೆ ಬೇಡಿಕೆ ಇದೆ ಎಂದು “ಗಲ್ಫ್ ನ್ಯೂಸ್ʼ ವರದಿ ಮಾಡಿದೆ.
ಯುಎಇನಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ಉದ್ಯೋಗದಲ್ಲಿ ಅಕೌಂಟ್ ಮತ್ತು ಫಿನಾನ್ಸ್ ಒಳ್ಳೆಯ ವೇತನವನ್ನು ನೀಡುತ್ತದೆ. ಅದರ ಜತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ವಿಫುಲವಾದ ಉದ್ಯೋಗ ಅವಕಾಶಗಳಿವೆ. ಸಾಫ್ಟ್‌ವೇರ್ ಎಂಜಿನಿಯರ್, ಡಾಟಾ ಅನಾಲಿಸ್ಟ್ ಮತ್ತು ಸೈಂಟಿಸ್ಟ್, ಸೈಬರ್ ಸೆಕ್ಯುರಿಟಿ ಸ್ಪೆಷಲಿಸ್ಟ್ ಮೊದಲಾದ ಉದ್ಯೋಗಗಳಿಗೆ ಬೇಡಿಕೆ ಇದ್ದು, ಅತ್ಯುತ್ತಮ ವೇತನಗಳನ್ನು ನೀಡಲಾಗುತ್ತಿದೆ.
ಮಾನವ ಸಂಪನ್ಮೂಲ ಇಲಾಖೆಗಳೂ ಬೇಡಿಕೆಯ ಕ್ಷೇತ್ರ ಎಂಬ ಕಿರೀಟವನ್ನು ಧರಿಸಿದೆ. ಅದರಲ್ಲಿ ಮುಖ್ಯವಾಗಿ ಎಚ್‌ಆರ್ ಜನರಲಿಸ್ಟ್. ಎಚ್‌ಆರ್ ಕನ್ಸ್‌ಲ್ಟೆಂಟ್ ಮತ್ತು ಎಕ್ಸೆಕ್ಯುಟಿವ್ ಅಸಿಸ್ಟೆಂಟ್ ಹುದ್ದೆಗಳು ಸೇರಿವೆ. ಕಾನೂನು ಸಲಹೆಗಾರರಿಗೂ ಗಲ್ಫ್ ರಾಷ್ಟ್ರಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಕಾನೂನು ಮುಖ್ಯಸ್ಥರ ಹುದ್ದೆ, ಸೀನಿಯರ್ ಲೀಗಲ್ ಕೌನ್ಸೆಲ್, ಸೀನಿಯರ್ ಅಸೋಸಿಯೇಟ್, ಲೀಗಲ್ ಕೌನ್ಸೆಲ್ ಹುದ್ದೆಗಳಿಗೆ ಒಳ್ಳೆಯ ಬೇಡಿಕೆ ಇದೆ. ಇವೆಲ್ಲವೂ ಅತ್ಯಧಿಕ ವೇತನ ಪಡೆಯುವ ಕ್ಷೇತ್ರಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Arrested: ಬಿಹಾರದ ಬೆಡ್‌ಶೀಟ್ ಗ್ಯಾಂಗ್‌ನ 8 ಮಂದಿ ಸೆರೆ
Crime Follow Up: ಅಸ್ಸಾಂ ಯುವತಿ ಹತ್ಯೆ ಕೇಸ್; ಆರೋಪಿ ಸೆರೆಗೆ 3 ತಂಡ ರಚನೆ
Bomb Threat: ಹೋಟೆಲ್, ಶಾಲೆ ಆಯ್ತು, ಈಗ ಬ್ಯಾಂಕ್‌ಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.