ಬೀಚಿಯವರ ಭಿನ್ನ ಆತ್ಮಕಥನ ನನ್ನ ಭಯಾಗ್ರಫಿ
Team Udayavani, Nov 20, 2020, 1:03 AM IST
ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.
ವೈಶಿಷ್ಟ್ಯಪೂರ್ಣ ಹಾಸ್ಯಬರಹಗಳಿಗೆ ಮತ್ತೂಂದು ಹೆಸರು ಬೀಚಿ. ಗೊಡ್ಡು ಸಂಪ್ರ ದಾಯಕ್ಕೆ ಸಡ್ಡು ಹೊಡೆದು, ವೈಚಾರಿಕತೆಗೆ ಪ್ರಾಶಸ್ತ್ಯ ನೀಡಿ ತಮ್ಮದೇ ಆದ ಅಪರೂಪದ ಶೈಲಿಯನ್ನು ಸಾಧಿಸಿಕೊಂಡು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾದವರು.
ಕಥೆ, ಕಾದಂಬರಿ, ನಗೆಹನಿಗಳು, ನಾಟಕಗಳ ಮೂಲಕ ಹಾಸ್ಯದ ಜತೆಜತೆಗೆ ಸಾಮಾಜಿಕ ಪ್ರಜ್ಞೆ, ವೈಚಾರಿಕತೆಯ ಬೀಜ ವನ್ನು ಓದುಗರಲ್ಲಿ ಬಿತ್ತಿದವರು.
ಆತ್ಮಕಥೆಗೆ ಇಂಗ್ಲಿಷ್‌ನಲ್ಲಿ ಬಯೋಗ್ರಫಿ ( ಆಜಿಟಜr ಚಟಜy) ಎನ್ನುತ್ತಾರೆ. ಆದರೆ ಬೀಚಿಯವರು ಮಾತ್ರ ತಮ್ಮ ಆತ್ಮಕಥೆಗೆ “ನನ್ನ ಭಯಾಗ್ರಫಿ’ ಎಂದು ಹೆಸರಿಟ್ಟು ಗಮನ ಸೆಳೆದಿದ್ದು, ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.
“”ಈ ಆತ್ಮಚರಿತ್ರೆಗೆ ನಾನು “ನನ್ನ ಭಯಾಗ್ರಫಿ’ ಎಂಬ ಹಂಡಬಂಡ ಹೆಸರನ್ನು ಇಟ್ಟುದೇಕೆ? ಇದಕ್ಕೊಂದು ಕಾರಣವಿದೆ. ಬಾಳನ್ನು ತುಂಡು ತುಂಡಾಗಿ ನೋಡಿದಾಗ ಆಗುವುದೇ ಹಾಗೆ. ನನ್ನಿಂದ ನಾನು ಹೊರ ಬಂದು ದೂರ ನಿಂತು ನನ್ನನ್ನು ನೋಡಿದಾಗ ಎದೆ ಝಲ್ ಎನ್ನುತ್ತದೆ. ಅಯ್ಯೋ ಚಾಂಡಾಲಾ ಎಂದನ್ನುತ್ತದೆ ಬಾಯಿ. ಆಗ ನನ್ನದು ನಿಜಕ್ಕೂ ಭಯಾಗ್ರಫಿ ಎಂಬ ಅರಿವಾಗುತ್ತದೆ” ಎಂಬುದು ಅವರ ಮಾತು.
ಬೀಚಿಯವರ ಕೃತಿಗಳಲ್ಲೇ ಈ ಆತ್ಮಕಥೆ ವಿಶೇಷವಾದದ್ದು. ತನ್ನ ಬಾಲ್ಯದ ದಿನಗಳು, ನೋವುನಲಿವು, ಕಲಿಕೆ, ಹೆತ್ತವರ ಬಗ್ಗೆ, ಮದುವೆ, ಕೆಲಸ, ಕನ್ನಡ ಸಾಹಿತ್ಯ ಲೋಕದ ಒಡನಾಟ, ಬರಹ, ನಾಟಕ, ಭಾಷಣ, ಓಡಾಟ, ಪುಸ್ತಕಗಳ ಒಲವು, ಮನೆ ಕಟ್ಟಿಸಿದ ಕಥೆ ಹೀಗೆ ಹಲವಾರು ಘಟನಾವಳಿಗಳನ್ನು ಈ ಕೃತಿಯಲ್ಲಿ ಪಡಿಮೂಡಿಸಿದ್ದಾರೆ.
ಪ್ರತೀ ಅಧ್ಯಾಯದಲ್ಲೂ ಬೀಚಿಯವರ ಮಾತು, ವಿಚಾರಗಳು, ಬದುಕಿನ ಕುರಿತ ಅವರ ದೃಷ್ಟಿಕೋನ, ಜನರ ಜತೆಗಿನ ಒಡನಾಟ, ಹಾಸ್ಯಪ್ರಜ್ಞೆ, ವಿಶಾಲ ಮನೋ ಭಾವ ಮುಂತಾದವುಗಳನ್ನು ಕಾಣಬಹುದು. ಓದುತ್ತಾ ಹೋದಂತೆ ಬೀಚಿಯ ಜೀವನದನುಭವಕ್ಕೆ ನಾವು ಸಾಕ್ಷಿಯಾಗುವಂಥ ಆಪ್ತಭಾವ ಮೂಡುತ್ತದೆ.
ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ದಿನಗಳು, ಭಾಷಣಕ್ಕಾಗಿ ಊರೂರು ತಿರುಗಿದ್ದು, ಸ್ನೇಹಿತರೊಂದಿಗಿನ ಹಾಸ್ಯ ಪ್ರಸಂಗಗಳು, ಸಾಹಿತ್ಯ ಪ್ರೇರಣೆ ನೀಡಿದ ಪುಸ್ತಕಗಳು, ಬಾಲ್ಯದ ಜೀವನ ಪಾಠ, ಆಸರೆಯಾದ ಅಣ್ಣ, ಬಾಲ್ಯದಲ್ಲಿ ಸಲಹಿದ ಅತ್ತೆ, ಪತ್ನಿ ಮಕ್ಕಳೊಂದಿಗಿನ ಜೀವನ, ಹಿರಿಯ ಪುತ್ರನ ಮದುವೆ ನಿಶ್ಚಯವಾದ ಕೆಲವೇ ದಿನಗಳಲ್ಲಿ ಎದುರಾದ ಕಿರಿಯ ಮಗನ ಸಾವು ಮುಂತಾದವು ಗಳಲ್ಲೆಲ್ಲ ಬೀಚಿಯವರನ್ನು ಅರಿಯುತ್ತಾ ಹೋದಂತೆ ನಮಗೆ ಬೆರಗಾಗುತ್ತದೆ. ಹಾಸ್ಯ ಲೇಖಕನ ಬಾಳಿನ ನೋವು ಮನಸ್ಸನ್ನು ಕರಗಿಸುತ್ತದೆ, ನಮ್ಮನ್ನು ಚಿಂತನೆಗೆ ಹಚ್ಚುತ್ತವೆ.
ಸಾಮಾನ್ಯವಾಗಿ ಆತ್ಮಕಥೆಯಲ್ಲಿ ಸ್ವಪ್ರತಿಷ್ಠೆ, ಹಿರಿಮೆ-ಗರಿಮೆ, ಕೀರ್ತಿ, ಸೋಗುತನ ಮುಂತಾದವೇ ರಾರಾಜಿಸುತ್ತಿರುತ್ತವೆ. ಕೆಲವು ಆತ್ಮಕಥನಗಳು ಇವುಗಳಿಂದ ದೂರವಾಗಿ ಭಿನ್ನ ಅನುಭವವನ್ನು ನೀಡುತ್ತವೆ. ಅವುಗಳ ಸಾಲಿಗೆ “ನನ್ನ ಭಯಾಗ್ರಫಿ’ ಸೇರುತ್ತದೆ.
ಬೀಚಿ ಅವರು ಇಲ್ಲಿ ನಿಷ್ಪಕ್ಷಪಾತವಾಗಿ ತಾವೇ ತಮ್ಮ ಜೀವನವನ್ನು ವಿಮರ್ಶಾ ದೃಷ್ಟಿಯಿಂದ ನೋಡಿ ಬರಹದ ಮೂಲಕ ತಮ್ಮ ಬದುಕನ್ನು ಸಾರ್ವತ್ರಿಕಗೊಳಿಸಿ¨ªಾರೆ.
ಯಾವುದೇ ಹಮ್ಮುಬಿಮ್ಮಿನ ಪೇಟ ತೊಡದೆ ಸತ್ಯದ ಕೈಹಿಡಿದು ಜೀವನ ದರ್ಶನ ಮಾಡಿಸಿದ್ದಾರೆ. ಆ ಸತ್ಯದರ್ಶನದ ಭರದಲ್ಲಿ ತನ್ನ ಜೀವನದಲ್ಲಿ ಭಾಗಿಯಾದ ಯಾವುದೇ ವ್ಯಕ್ತಿಗೆ ವೃಥಾ ನೋವುಂಟಾಗಬಾರದೆಂಬ ಎಚ್ಚರವೂ ಅವರಲ್ಲಿದೆ. ಇದು ಸಾಮಾನ್ಯದ ವಿಷಯವಲ್ಲ. ಹಾಗಾಗಿ ಬೀಚಿಯವರ “ನನ್ನ ಭಯಾಗ್ರಫಿ’ ಒಂದು ಅನನ್ಯ ಕೃತಿಯಾಗಿದೆ.
ವಿ. ಪುನೀತ್ ಕುಮಾರ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.