ಕಾಶ್ಮೀರ ಕಣಿವೆ: ಭಯೋತ್ಪಾದನ ಚಟುವಟಿಕೆಗಳಿಗೆ ಕಡಿವಾಣ

ಉಗ್ರರ ವಿರುದ್ಧ ನೇರ ಕಾರ್ಯಾಚರಣೆಗಿಳಿದ ಭಾರತೀಯ ಭದ್ರತಾ ಪಡೆಗಳು

Team Udayavani, Nov 20, 2020, 6:08 AM IST

ಕಾಶ್ಮೀರ ಕಣಿವೆ: ಭಯೋತ್ಪಾದನ ಚಟುವಟಿಕೆಗಳಿಗೆ ಕಡಿವಾಣ

ಮಣಿಪಾಲ: ಜಮ್ಮುವಿನ ನರ್ಗೋಟದಲ್ಲಿ ಗುರುವಾರ ಬೆಳಗ್ಗೆ ಭದ್ರತಾ ಪಡೆಗಳು 4 ಉಗ್ರರನ್ನು ಸದೆಬಡಿದಿವೆ. ಘಟನ ಸ್ಥಳದಿಂದ ಭದ್ರತಾ ಪಡೆಗಳು ವಶಪಡಿಸಿಕೊಂಡಿರುವ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಉಗ್ರರು ಬಲು ದೊಡ್ಡ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬುದಕ್ಕೆ ಸಾಕ್ಷಿಯನ್ನು ಒದಗಿಸಿವೆ. ಉಗ್ರರು ತಮ್ಮ ಕುಕೃತ್ಯವನ್ನು ಎಸಗುವ ಮುನ್ನವೇ ಸಂಚಿನ ಬಗೆಗೆ ಮಾಹಿತಿ ಕಲೆ ಹಾಕಿದ ಭದ್ರತಾ ಪಡೆಗಳು ಉಗ್ರರನ್ನು ಹೊಡೆದುರುಳಿಸಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಕಣಿವೆ ರಾಜ್ಯದಲ್ಲಿ ಭಯೋತ್ಪಾದನ ಘಟನೆಗಳು ಕಡಿಮೆಯಾಗಿವೆ. ಭಯೋತ್ಪಾದನೆಯನ್ನು ತಡೆಯಲು ಸೇನೆಯು ಈಗ ನೇರ ದಾಳಿ ಮಾದರಿಯನ್ನು ಅಳವಡಿಸಿಕೊಂಡಿರುವುದರ ಫ‌ಲ ಇದೆನ್ನಬಹುದಾಗಿದೆ.

370ನೇ ವಿಧಿ ಹಿಂಪಡೆದ ಬಳಿಕ ಕಡಿಮೆ
2019ರ ಆಗಸ್ಟ್‌ 5ರಿಂದ 2020ರ ಸೆಪ್ಟಂಬರ್‌ 9ರ ವರೆಗಿನ 402 ದಿನಗಳಲ್ಲಿ 211 ಭಯೋತ್ಪಾದಕ ಘಟನೆಗಳು ನಡೆದಿವೆ. ಇದರಲ್ಲಿ 194 ಭಯೋತ್ಪಾದಕರು ಹತರಾಗಿ¨ªಾರೆ. ಈ ಘಟನೆಗಳಲ್ಲಿ 49 ಸೈನಿಕರು ಹುತಾತ್ಮರಾಗಿ¨ªಾರೆ. 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಯೋತ್ಪಾದಕ ಘಟನೆಗಳು ಶೇ. 50ಕ್ಕಿಂತಲೂ ಕಡಿಮೆಯಾಗಿವೆ. 2018ರ ಜೂನ್‌ 29ರಿಂದ 2019ರ ಆಗಸ್ಟ್‌ 4ರ ವರೆಗಿನ 402 ದಿನಗಳಲ್ಲಿ 455 ಭಯೋತ್ಪಾದಕ ಘಟನೆಗಳು ನಡೆದಿದ್ದರೆ ಅನಂತರ 211 ಘಟನೆಗಳು ನಡೆದಿವೆ.

30 ವರ್ಷಗಳಲ್ಲಿ 70,830 ಘಟನೆಗಳು
1990ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ತುಗಳು ಕಾಣಿಸಿತ್ತು. ಈ ವರ್ಷ ಕಾಶ್ಮೀರದಲ್ಲಿ 4,158 ಭಯೋತ್ಪಾದಕ ಘಟನೆಗಳು ನಡೆದಿವೆ. 564 ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. 155 ಸೈನಿಕರು ಹುತಾತ್ಮರಾಗಿದ್ದಾರೆ. 1990 ರಿಂದ 2019ರ ವರೆಗೆ ಕಾಶ್ಮೀರದಲ್ಲಿ 70,830 ಭಯೋತ್ಪಾದನ ಘಟನೆಗಳು ನಡೆದಿದ್ದು, ಇದರಲ್ಲಿ 24,915 ಭಯೋತ್ಪಾದಕರು ಹತರಾಗಿ¨ªಾರೆ. ದೇಶ 5,294 ಸೈನಿಕರನ್ನು ಮತ್ತು 13,779 ಸಾಮಾನ್ಯ ಜನರನ್ನು ಕಳೆದುಕೊಂಡಿದೆ. ಗೃಹ ಸಚಿವಾಲಯದ ಅಂಕಿಅಂಶಗಳ ಪ್ರಕಾರ 1990ರಿಂದ ಡಿಸೆಂಬರ್‌ 2001ರ ವರೆಗೆ ಪ್ರತೀ ವರ್ಷ ಸರಾಸರಿ 4,300 ಭಯೋತ್ಪಾದಕ ಘಟನೆಗಳು ನಡೆಯುತ್ತಿದ್ದರೆ 2001ರ ಅನಂತರ ಕ್ಷೀಣಿಸಲಾರಂಭಿಸಿವೆ.

ಒಳನುಸುಳುವಿಕೆ ಹೆಚ್ಚು !
ಆರ್ಟಿಕಲ್‌ 370 ಅನ್ನು ತೆಗೆದುಹಾಕಿದ ಬಳಿಕ ಭಯೋತ್ಪಾದಕ ಘಟನೆಗಳು ಕಡಿಮೆಯಾಗಿವೆೆ. ಆದರೆ ಪಾಕಿಸ್ಥಾನದಿಂದ ಉಗ್ರರ ಒಳನುಸುಳುವಿಕೆ ಹೆಚ್ಚಾಗಿದೆ. ಗೃಹ ಸಚಿವಾಲಯದ ಪ್ರಕಾರ, ಆಗಸ್ಟ್‌ 5ರಿಂದ 2019ರ ಜುಲೈ 2ರ ವರೆಗೆ ಪಾಕಿಸ್ಥಾನದಿಂದ 176 ಒಳನುಸುಳುವಿಕೆ ಪ್ರಯತ್ನಗಳು ನಡೆದಿದ್ದು, ಈ ಪೈಕಿ 111 ಭಯೋತ್ಪಾದಕರು ಒಳಗೆ ನುಸುಳಿದ್ದಾರೆ. ಆದರೆ ಬಳಿಕ ಅವರನ್ನು ಸೇನೆಯು ಹತ್ಯೆಗೈದಿದೆ. ಈ ವರ್ಷ ಜನವರಿ 1ರಿಂದ ಸೆಪ್ಟಂಬರ್‌ 9ರ ವರೆಗೆ 252 ದಿನಗಳಲ್ಲಿ ಸೇನೆಯು 168 ಭಯೋತ್ಪಾದಕರನ್ನು ಹತ್ಯೆಗೈದಿದೆ. ಕಳೆದ ವರ್ಷ 157 ಭಯೋತ್ಪಾದಕರನ್ನು ಕೊಲ್ಲಲಾಗಿತ್ತು.

ಭಯೋತ್ಪಾದನ ಘಟನೆಗಳು ಕ್ಷೀಣ
2004ರಿಂದ 2013ರ ವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಈ 10 ವರ್ಷಗಳಲ್ಲಿ 9,739 ಭಯೋತ್ಪಾದಕ ಘಟನೆಗಳು ನಡೆದಿವೆ. ಇವುಗಳಲ್ಲಿ 4,005 ಭಯೋತ್ಪಾದಕರು ಹತ್ಯೆಗೀಡಾದರೆ 1,055 ಸೈನಿಕರು ಹುತಾತ್ಮರಾಗಿದ್ದರು ಮತ್ತು 2,081 ಸಾಮಾನ್ಯ ಜನರು ಪ್ರಾಣ ಕಳೆದುಕೊಂಡಿದ್ದರು. ಪ್ರತೀ ದಿನ ಒಬ್ಬ ಭಯೋತ್ಪಾದಕ ಹತ್ಯೆಯಾಗುತ್ತಿದ್ದ. 2014ರಿಂದ 2019ರ ವರೆಗೆ, 2,302 ಭಯೋತ್ಪಾದಕ ಘಟನೆಗಳು ನಡೆದಿದ್ದು, 995 ಭಯೋತ್ಪಾದಕರು ಹತ್ಯೆಗೀಡಾಗಿ¨ªಾರೆ. ಈ ಅವಧಿಯಲ್ಲಿ 419 ಸೈನಿಕರು ಹುತಾತ್ಮರಾಗಿದ್ದು, 177 ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 2014ರ ಬಳಿಕ 2 ದಿನಗಳಿಗೊಮ್ಮೆ ಓರ್ವ ಭಯೋತ್ಪಾದಕ ಹತ್ಯೆಯಾಗುತ್ತಿದ್ದಾನೆ.

ಟಾಪ್ ನ್ಯೂಸ್

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Team India; Bumrah meets Kiwi surgeon: Doubts over Champions Trophy?

Team India; ಕಿವೀಸ್‌ ಸರ್ಜನ್‌ ಭೇಟಿಯಾದ ಬುಮ್ರಾ: ಚಾಂಪಿಯನ್ಸ್‌ ಟ್ರೋಫಿಗೆ ಅನುಮಾನ?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

Bhopal: ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ… ಹೈ ಅಲರ್ಟ್

Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…

18ನೇ ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೆ ಚಾಲನೆ

Odisha: ‘ಪ್ರವಾಸಿ ಭಾರತೀಯ ದಿವಸ್’​ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

Toxic Movie: ʼಟಾಕ್ಸಿಕ್‌ʼನಲ್ಲಿ ನಟಿಸಲು ಯಶ್‌ ಪಡೆದ ಸಂಭಾವನೆ ಎಷ್ಟು?

tirupati

Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್

13-frndshp

Friendship: ಸ್ನೇಹವೇ ಸಂಪತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.