ವನ್ಯಪ್ರಾಣಿಗಳ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ
Team Udayavani, Nov 21, 2020, 3:14 PM IST
ಮಂಡ್ಯ: ಪ್ರಸ್ತುತ ದಿನಗಳಲ್ಲಿ ವನ್ಯ ಜೀವಿಗಳುನಾಡಿನತ್ತ ಬರುವಂತಹ ಸನ್ನಿವೇಶಗಳನ್ನು ಮನುಷ್ಯ ಸೃಷ್ಟಿಸಿದ್ದಾನೆ. ಆದ್ದರಿಂದ ವನ್ಯ ಪ್ರಾಣಿಗಳ ಸಂರಕ್ಷಣೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್ ಹೇಳಿದರು.
ನಗರದ ರೈತ ಸಭಾಂಗಣ ಆವರಣದಲ್ಲಿರುವ ನಿತ್ಯ ಸಚಿವ ಕೆ.ವಿ.ಶಂಕರಗೌಡ ಪ್ರತಿಮೆ ಬಳಿ ರೋಟರಿ3190ರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಫೆಲೋಶಿಪ್ ಆಫ್ ಸೈಕಲಿಂಗ್ ರೋಟರಿಯನ್ (ಐಎಪ್‌ಸಿಆರ್) ಸದಸ್ಯರಿಂದ ವನ್ಯಜೀವಿ ಸಂರಕ್ಷಣೆ ಹಾಗೂ ಕೋವಿಡ್-19ರ ಬಗ್ಗೆ ಜಾಗೃತಿ ಮೂಡಿಸಲು ಮಂಡ್ಯ ನಗರದಿಂದ ಬಂಡೀಪುರದವರೆಗೆ ಸೈಕಲ್ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ದುರಾಸೆಗೆ ಕಾಡು ನಾಶ: ಕಾಡಿನ ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ಕಾಡಿನಲ್ಲಿ ಹಸಿರು, ನೀರು, ಆಹಾರ ಸಿಗದಂತೆ ಮನುಷ್ಯರೇ ಸೃಷ್ಟಿಸಿದ್ದಾರೆ. ಅತಿ ದುರಾಸೆಗೆ ಒಳಗಾಗಿರುವ ಮನುಷ್ಯ ಕಾಡುಗಳನ್ನು ಆವರಿಸುತ್ತಿರುವುದರಿಂದ ಪ್ರಾಣಿಗಳು ವಾಸಿಸಲು ಎಲ್ಲಿಗೆ ಹೋಗಲು ಸಾಧ್ಯ. ಆದ್ದರಿಂದ ನಾಡಿನತ್ತ ಬರುತ್ತಿವೆ. ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಅವುಗಳ ನೆಮ್ಮದಿಗೆಭಂಗವನ್ನುಂಟು ಮಾಡಿದರೆ, ಅನಾಹುತಗಳನ್ನು ಎದುರಿಸಬೇಕಾಗುತ್ತದೆ. ಇದು ಮನುಷ್ಯ ಮಾಡಿ ಕೊಂಡಿರುವ ಅವಘಡವಾಗಿದೆ. ಇನ್ನಾದರೂ ಜಾಗೃತಿ ಮೂಡಿಸಿಕೊಂಡು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಜನರಲ್ಲಿ ಜಾಗೃತಿ ಅಗತ್ಯ: ಜನರಲ್ಲಿ ಜಾಗೃತಿ ಮಾಡಿಸುವುದು ಅವಶ್ಯಕವಿದೆ. ಕೋವಿಡ್-19ರ ನಿಯಂತ್ರಣಕ್ಕಾಗಿ ರೋಟರಿ ಸಂಸ್ಥೆಯು ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ಮಾಸ್ಕ್, ವಿವಿ ಪ್ಯಾಟ್‌ಗಳನ್ನು ಮಿಮ್ಸ್‌ಗೆ ನೀಡಿದೆ. ಸಾರ್ವಜನಿಕರಿಗೂ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ : ಬಿ.ಎಲ್. ಸಂತೋಷರನ್ನು ರಮೇಶ್ ಜಾರಕಿಹೊಳಿ ಭೇಟಿ ಆಗಿದ್ದು ಅಪರಾಧವಲ್ಲ: ಸಚಿವ ಸುಧಾಕರ್
ಸರ್ಕಾರಕ್ಕೆ ನೆರವಾಗಿ: ಐಎಫ್ಸಿಆರ್ ಅಧ್ಯಕ್ಷ ಗಣಪತಿ ಮಾತನಾಡಿ, ವನ್ಯ ಪ್ರಾಣಿಗಳ ರಕ್ಷಣೆಗಾಗಿ ಸರ್ಕಾರಕ್ಕೆ ಸಂಘ ಸಂಸ್ಥೆಗಳ ನೆರವು ಅಗತ್ಯವಿದೆ. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ವೈಜ್ಞಾನಿಕ ರೂಪುರೇಷಗಳನ್ನು ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಜಗದೀಶ್, ವಿನ್ಸೆಂಟ್, ಐಎಫ್ಸಿಆರ್ ಅಧ್ಯಕ್ಷ ಗಣಪತಿ, ಪ್ರದೀಪ್, ಶುಭಾ, ಸೋಮಶೇಖರ್, ಅರ್ಚನಾ, ಶ್ರೀಪಾದ್, ಶ್ರೀಕುಮಾರ್ ಅವರು ಬೈಸಿಕಲ್ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಂಡೀಪುರದತ್ತ ತೆರಳಿದರು.
ರೋಟರಿ ಅಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಪ್ರತೀಕ್, ನಿವೃತ್ತ ದೈಹಿಕ ತರಬೇತಿದಾರ ಶಿವಲಿಂಗಯ್ಯ, ರೋಟರಿ ಪದಾಧಿಕಾರಿಗಳಾದ ಮಹೇಂದ್ರಬಾಬು, ಆನಂತ ಕುಮಾರ್, ಶಂಕರನಾರಾಯಣ ಶಾಸ್ತ್ರೀ, ಸೋಮಶೇಖರ್, ಸುರಾಜ್, ಲಕ್ಷ್ಮೀ ನಾರಾಯಣ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!
MUST WATCH
ಹೊಸ ಸೇರ್ಪಡೆ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.