ಬಾರದ ವರದಿ; ಕಾಲೇಜಿಗೆ ಬರ್ತಿಲ್ಲ ವಿದ್ಯಾರ್ಥಿಗಳು

ಆರೋಗ್ಯ ಇಲಾಖೆ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಆಕ್ರೋಶ,ಕಾಲೇಜು ಆರಂಭಗೊಂಡರೂ ಇನ್ನೂ ನಡೆಯದ ತರಗತಿ

Team Udayavani, Nov 21, 2020, 5:06 PM IST

ಬಾರದ ವರದಿ; ಕಾಲೇಜಿಗೆ ಬರ್ತಿಲ್ಲ ವಿದ್ಯಾರ್ಥಿಗಳು

ಬಾಗಲಕೋಟೆ: ಪದವಿ ವಿದ್ಯಾರ್ಥಿಗಳ ಕೋವಿಡ್‌-19 ತಪಾಸಣೆಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತರು ಹೊರಡಿಸಿರುವ ಆದೇಶ ಪ್ರತಿ.

ಬಾಗಲಕೋಟೆ: ದೇವರು ವರ ಕೊಟ್ರೂ ಪೂಜಾರಿ ಕೊಡಲಿಲ್ಲ ಎಂಬಂತಹ ಪರಿಸ್ಥಿತಿ ಜಿಲ್ಲೆಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳ ವಿಷಯದಲ್ಲಾಗಿದೆ.

ಹೌದು, ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳ ಬಳಿಕ ಕಾಲೇಜು ಆರಂಭಿಸಲಾಗಿದೆ. ಅದರಲ್ಲೂ ಪದವಿ ಕಾಲೇಜುಗಳ ಅಂತಿಮ ವರ್ಷದವಿದ್ಯಾರ್ಥಿಗಳಿಗೆ ಮೊದಲ ಅವಕಾಶ ನೀಡಿದ್ದು,ಹಲವು ಮಾರ್ಗಸೂಚಿ ಪಾಲನೆಯೊಂದಿಗೆ ಕಾಲೇಜು ಆರಂಭಿಸಲಾಗಿದೆ. ಆರೋಗ್ಯ ಇಲಾಖೆಯ ಬೇಜವಾಬ್ದಾರಿ ಹಾಗೂ ನಿರ್ಲಕ್ಷéದಿಂದ ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ಮನಸ್ಸಿದ್ದರೂ ಹೋಗದಂತಹ ಪರಿಸ್ಥಿತಿ ಉಂಟಾಗಿದೆ.

45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 18 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿ ಒಟ್ಟು 63 ಡಿಗ್ರಿ ಕಾಲೇಜುಗಳಿವೆ. ಅದರಲ್ಲಿ ಬಿಎಸ್ಸಿ, ಬಿಕಾಂ, ಬಿಎ, ಪಿಜಿ ಸಹಿತ ಅಂತಿಮ ವರ್ಷದ ವಿದ್ಯಾರ್ಥಿಗಳಸಂಖ್ಯೆ 13,500ರಿಂದ 14 ಸಾವಿರದಷ್ಟಿದೆ. ಡಿಗ್ರಿಕಾಲೇಜಿನ ಅಷ್ಟೂ ಸೆಮಿಸ್ಟರಿ ವಿದ್ಯಾರ್ಥಿಗಳು ಸೇರಿದರೆ ಬರೋಬ್ಬರಿ 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯವಾಗಿ ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವ ವಿದ್ಯಾಲಯ, ಒಂದು ಎಂಜಿನಿಯರಿಂಗ್‌ ಕಾಲೇಜ್‌, ಒಂದು ವೈದ್ಯಕೀಯ ಕಾಲೇಜು, ಇನ್ನೊಂದು ದಂತ ವೈದ್ಯಕೀಯ ಕಾಲೇಜು ಸೇರಿದಂತೆ ಹಲವು ನರ್ಸಿಂಗ್‌, ಐಟಿಐ, ಡಿಪ್ಲೋಮಾ ಕಾಲೇಜುಗಳೂ ಇವೆ. ಈ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು,ಪ್ರಾಧ್ಯಾಪಕರು, ಸಿಬ್ಬಂದಿ ಸೇರಿದಂತೆ ಸುಮಾರು 65 ಸಾವಿರ ಜನರಿದ್ದಾರೆ.

ಆರೋಗ್ಯ ಇಲಾಖೆಯ ನಿರ್ಲಕ್ಷ್ಯ: ನ. 17ರಿಂದ ಕಾಲೇಜು ಆರಂಭಿಸುವ ಮುನ್ನವೇ ನ.13ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಆಯುಕ್ತರು, ರಾಜ್ಯದ ಎಲ್ಲ ಡಿಎಚ್‌ಒಗಳಿಗೆ ಆದೇಶ ಹೊರಡಿಸಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕೋವಿಡ್‌-19 ತಪಾಸಣೆಗೆ ಮೊದಲ ಆದ್ಯತೆನೀಡುವಂತೆ ಹೇಳಿದ್ದಾರೆ. ಆದರೆ, ಈ ಆದೇಶ ಜಿಲ್ಲೆಯಲ್ಲಿ ಕಡ್ಡಾಯವಾಗಿ ಪಾಲನೆಯಾಗುತ್ತಿಲ್ಲ. ಜತೆಗೆ ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿ ತಪಾಸಣೆ ಪ್ರತ್ಯೇಕವಾಗಿ ಮಾಡುತ್ತಿಲ್ಲ. ಜಿಲ್ಲೆಯ ಸಾಮಾನ್ಯ ಜನರ ತಪಾಸಣೆ ಜತೆಗೆ ಕೋವಿಡ್‌ತಪಾಸಣೆ ನಡೆಸುತ್ತಿದ್ದು, 4ರಿಂದ 5 ದಿನವಾದರೂತಪಾಸಣೆಯ ವರದಿ ಬರುತ್ತಿಲ್ಲ. ಹೀಗಾಗಿ ಗಂಟಲು ದ್ರವ ಮಾದರಿ ತಪಾಸಣೆಗೆ ಕೊಟ್ಟ ವಿದ್ಯಾರ್ಥಿಗಳು,ವರದಿ ಬಾರದೇ ಕಾಲೇಜಿಗೆ ಹೋಗುವಂತಿಲ್ಲ.  ಹೀಗಾಗಿ ನ. 17ಕ್ಕೆ ಜಿಲ್ಲೆಯ ಕಾಲೇಜುಗಳು ಆರಂಭಗೊಂಡರೂ ಈ ವರೆಗೆ ವಿದ್ಯಾರ್ಥಿಗಳು ಬರುತ್ತಿಲ್ಲ.

ಸಿಬ್ಬಂದಿ ಕೊರತೆಯ ನೆಪ: ಸರ್ಕಾರಿ ಪ್ರಥಮದರ್ಜೆ ಕಾಲೇಜು ಸೇರಿದಂತೆ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಸರಿಸುಮಾರು 1 ಸಾವಿರದಿಂದ 2500 ವರೆಗೂ ವಿದ್ಯಾರ್ಥಿಗಳಿದ್ದಾರೆ. ಆ ವಿದ್ಯಾರ್ಥಿಗಳೆಲ್ಲ ಸರ್ಕಾರಿ ಆಸ್ಪತ್ರೆಗೆ ಹೋಗಿ ಕೋವಿಡ್‌-19 ತಪಾಸಣೆ ಮಾಡಿಕೊಳ್ಳುವ ಬದಲು, ಆಯಾ ಕಾಲೇಜಿನಲ್ಲಿ ಕೋವಿಡ್‌-19 ತಪಾಸಣೆ ಕ್ಯಾಂಪ್‌ ನಡೆಸಬೇಕು. ಇದರಿಂದ ವಿದ್ಯಾರ್ಥಿಗಳ ತಪಾಸಣೆ ಬೇಗ ಪೂರ್ಣಗೊಳ್ಳುತ್ತದೆ. ಈ ಕುರಿತುಕೂಡಲೇ ವ್ಯವಸ್ಥೆ ಮಾಡಿ ಎಂದು ಆರೋಗ್ಯ ಇಲಾಖೆಗೆ ಹಲವು ಕಾಲೇಜುಗಳ ಪ್ರಾಚಾರ್ಯರು ಮನವಿ ಮಾಡಿದ್ದಾರೆ. ಇದಕ್ಕೆ ನಮ್ಮಲ್ಲಿ ಸಿಬ್ಬಂದಿಕೊರತೆ ಇದೆ. ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಎಂಬ ಉಡಾಫೆಯ ಉತ್ತರ ಇಲಾಖೆಯಿಂದ ಬಂದಿದೆ ಎನ್ನಲಾಗಿದೆ.

ನಮ್ಮ ಕಾಲೇಜಿನಲ್ಲಿ ಅಂತಿಮ ವರ್ಷದ 385 ವಿದ್ಯಾರ್ಥಿಗಳಿದ್ದು, ಅಷ್ಟೂ ಸೆಮಿಸ್ಟರಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 1200 ಸಂಖ್ಯೆ ಇದೆ. ಕೋವಿಡ್‌-19 ತಪಾಸಣೆ ವರದಿ ವಿಳಂಬವಾಗುತ್ತಿದ್ದು, ಇನ್ನೂ ಹಲವು ವಿದ್ಯಾರ್ಥಿಗಳು ತಪಾಸಣೆ ಮಾಡಿಕೊಳ್ಳಲು ಆಗಿಲ್ಲ. ಹೀಗಾಗಿ ಕಾಲೇಜುಗಳಲ್ಲೇ ಅಗತ್ಯ ಮಾರ್ಗಸೂಚಿ ಅನ್ವಯ ತಪಾಸಣೆ ಶಿಬಿರ ನಡೆಸಲು ಡಿಎಚ್‌ಒ ಅವರಿಗೆ ಮನವಿ ಮಾಡಿದ್ದೇವೆ. ಡಾ|ಅರುಣಕುಮಾರ ಗಾಳಿ, ಪದವಿ ಕಾಲೇಜುಗಳ ಜಿಲ್ಲಾ ನೋಡಲ್‌ ಅಧಿಕಾರಿ

ಜಿಲ್ಲೆಯ ಆಯಾ ಕಾಲೇಜು ವಿದ್ಯಾರ್ಥಿಗಳ ಕೋವಿಡ್‌ ತಪಾಸಣೆ ನಡೆಸಲಾಗುತ್ತಿದೆ. ಅವರು ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬಹುದು. ಇಲ್ಲವೇ ಕಾಲೇಜುಗಳಲ್ಲಿ ಅತಿಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಇದ್ದಲ್ಲಿ ಆಯಾ ಕಾಲೇಜಿಗೆ ಸಿಬ್ಬಂದಿ ಕಳುಹಿಸುವ ವ್ಯವಸ್ಥೆಯೂ ಮಾಡುತ್ತೇವೆ.  –ಡಾ|ಅನಂತ ದೇಸಾಯಿ, ಡಿಎಚ್‌

 

ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ

4-mudhol

Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.