ಅಕ್ಷಯ್, 500 ಕೋಟಿ ಮಾನನಷ್ಟ ಮೊಕದ್ದಮೆ ಪ್ರಕರಣ: ನನಗೂ ಮಾತನಾಡುವ ಹಕ್ಕಿದೆ ಎಂದ ಯೂಟ್ಯೂಬರ್
Team Udayavani, Nov 21, 2020, 6:42 PM IST
ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನೀಡಿರುವ ಮಾನಹಾನಿ ನೋಟಿಸ್ ಅನ್ನು ಯೂಟ್ಯೂಬರ್ ರಶೀದ್ ಸಿದ್ದಿಕಿ ವಿರೋಧಿಸಿದ್ದಾರೆ. ಮಾತ್ರವಲ್ಲದೆ ಅಕ್ಷಯ್ ಕೇಳಿದ 500 ಕೋಟಿ ರೂ.ಗಳ ನಷ್ಟವನ್ನು ನೀಡಲು ನಿರಾಕರಿಸಿದ್ದಾರೆ.
ನೋಟಿಸ್ ಹಿಂತೆಗೆದುಕೊಳ್ಳುವಂತೆ ಸಿದ್ದಿಕಿ, ಅಕ್ಷಯ್ ಕುಮಾರ್ ಅವರನ್ನು ಒತ್ತಾಯಿಸಿದ್ದು, ಅದು ವಿಫಲವಾದರೆ ಅವರು ನಟನ ವಿರುದ್ಧ “ಸೂಕ್ತ ಕಾನೂನು ಕ್ರಮಗಳನ್ನು” ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ನವೆಂಬರ್ 17 ರಂದು ಬಾಲಿವುಡ್ ನಟ ಅಕ್ಷಯ್ ಕುಮಾರ್, ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ತನ್ನ ಹೆಸರನ್ನು ಸುಖಾಸುಮ್ಮನೆ ಎಳೆದು ತಂದಿರುವುದಕ್ಕಾಗಿ ಮತ್ತು ನಕಲಿ ಸುದ್ದಿ ಹರಡಿರುವ ಕಾರಣಕ್ಕೆ, ಬಿಹಾರದ ಜನಪ್ರಿಯ ಯೂಟ್ಯೂಬರ್ ರಶೀದ್ ಸಿದ್ದಿಕಿ ವಿರುದ್ದ 500 ಕೋಟಿ ರೂ, ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮಾತ್ರವಲ್ಲದೆ ಮಾನಹಾನಿಕರ ಮತ್ತು ಅವಹೇಳನಕಾರಿ ವೀಡಿಯೊಗಳ ವಿರುದ್ಧ ಕಿಡಿಕಾರಿದ್ದರು.
ಈ ಕುರಿತು ತನ್ನ ವಕೀಲ ಜೆ.ಪಿ ಜೈಸ್ವಾಲ್ ಮೂಲಕ ಹೇಳಿಕೆ ನೀಡಿದ ಸಿದ್ದಿಕಿ, ಅಕ್ಷಯ್ ಮಾಡಿರುವ ಆರೋಪ ನಿರಾಧಾರ, ಕಿರುಕುಳ ನೀಡುವುದಕ್ಕಾಗಿಯೇ ಈ ತೆರನಾದ ಆರೋಪ ಹೊರಿಸಲಾಗಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವು ಜನಪ್ರಿಯ ವ್ಯಕ್ತಿಗಳ ವಿರುದ್ಧ ಸಿದ್ದಿಕಿಯನ್ನು ಒಳಗೊಂಡಂತೆ ಹಲವಾರು ಸ್ವತಂತ್ರ ವರದಿಗಾರರು ಸುದ್ದಿ ಬಿತ್ತರಿಸಿದ್ದಾರೆ. ಆದರೇ ಇತರ ಮಾಧ್ಯಮಗಳು ನಿಷ್ಪಕ್ಷಪಾತ ವರದಿ ನೀಡಿರಲಿಲ್ಲ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಹಾಸ್ಯ ನಟಿ ಭಾರ್ತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ದಾಳಿ
ಭಾರತದ ಪ್ರತಿಯೊಬ್ಬ ವ್ಯಕ್ತಿಗೂ ಮಾತನಾಡುವ ಮೂಲಭೂತ ಹಕ್ಕಿದೆ. ಸಿದ್ದಿಕಿ ಪ್ರಕಟಿಸಿದ ವಿಡಿಯೋವನ್ನು ಮಾನಹಾನಿಕರ ದೃಷ್ಟಿಯಲ್ಲಿ ನೋಡದೇ ವಸ್ತುನಿಷ್ಠವಾಗಿ ವೀಕ್ಷಿಸಬೇಕು. ಆದರೇ ಸಿದ್ದಿಕಿ ಅವರನ್ನು ಒತ್ತಡಕ್ಕೊಳಪಡಿಸುವ ಸಲುವಾಗಿಯೇ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಆ ಮೂಲಕ ಬಿಹಾರದ ಯೂಟ್ಯೂಬರ್ ಅನ್ನು ಬಾಲಿವುಡ್ ನಟ ಗುರಿಯಾಗಿರಿಸಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರನ್ನು ಹಲವಾರು ಭಾರೀ ರಾಜಕೀಯ ವ್ಯಕ್ತಿಗಳು, ಯೂಟ್ಯೂಬರ್ ಗಳು, ಇತರರು ಗುರಿಯಾಗಿರಿಸಿ ಮಾತನಾಡಿದ್ದಾರೆ. ಆಶ್ಚರ್ಯವೆಂದರೇ ಇವರಾರ ವಿರುದ್ದವೂ ಅಕ್ಷಯ್ ಕಾನೂನು ಕ್ರಮ ಕೈಗೊಳ್ಳದೇ ಕೇವಲ ಸಿದ್ದಿಕಿಯ ವಿರುದ್ದ ಆರೋಪ ಹೊರಿಸಿರುವುದು ಪೂರ್ವನಿಯೋಜಿತ ಎಂದು ಜೈಸ್ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಸಂಪತ್ತು ಗಳಿಕೆ ಕೇಸ್; ನವೆಂಬರ್ 23ರಂದು ವಿಚಾರಣೆಗೆ ಹಾಜರಾಗಿ-ಡಿಕೆಶಿಗೆ CBI ನೋಟಿಸ್
ಇದೀಗ ಮಾನನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಿದ್ದಿಕಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸುಶಾಂತ್ ಪ್ರಕರಣದಲ್ಲೇ ನಕಲಿ ಸುದ್ದಿ ಹರಡಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಸಚಿವ ಆದಿತ್ಯ ಠಾಕ್ರೆ ಅವರ ಹೆಸರನ್ನು ಎಳೆದಿದ್ದಕ್ಕಾಗಿ ರಶೀದ್ ಸಿದ್ದಿಕಿರನ್ನು ಈ ಹಿಂದೆ ಬಂಧಿಸಲಾಗಿತ್ತು. ನವೆಂಬರ್ 3ರಂದು ಸ್ಥಳೀಯ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ದೊರಕಿತ್ತು.
ಇದನ್ನೂ ಓದಿ: ಕನ್ನಡ ಪರ ಹೋರಾಟಗಾರರು ಡೋಂಗಿಗಳು ಎಂದ ಯತ್ನಾಳ ಹೇಳಿಕೆ ಖಂಡಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.