ಸರ್ಕಾರಿ ಶಾಲೆ ಎಂದರೇಕೆ ನಿರ್ಲಕ್ಷ್ಯ?
ಶಿಕ್ಷಕರಿದ್ದಾರೆ-ಸರಿಯಾದ ಕೋಣೆಗಳಿಲ್ಲ,ಇದ್ದೂ ಇಲ್ಲದಂತಾದ ಶೌಚಾಲಯ
Team Udayavani, Nov 21, 2020, 6:48 PM IST
ಅಫಜಲಪುರ: ತಾಲೂಕಿನ ಸುಕ್ಷೇತ್ರ ಘತ್ತರಗಿ ಗ್ರಾಮದಲ್ಲೊಂದು ಸರ್ಕಾರಿ ಶಾಲೆಯಿದ್ದು,ದಾಖಲಾತಿ ಚೆನ್ನಾಗಿದೆ, ಶಿಕ್ಷಕರು ಇದ್ದಾರೆ. ಆದರೆ ಸರಿಯಾದ ಕೋಣೆ, ಶೌಚಾಲಯ, ಆವರಣವಿಲ್ಲದೇ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ.
ತಾಲೂಕಿನ ಸುಕ್ಷೇತ್ರ ಘತ್ತರಗಿಗ್ರಾಮದಲ್ಲಿರುವ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಸಮಸ್ಯೆಗಳುತಾಂಡವವಾಡುತ್ತಿವೆ. ಶಾಲೆ ಕಟ್ಟಡಹಳೆಯದಾಗಿದ್ದು, ಮೇಲ್ಛಾವಣಿ ಸೋರುತ್ತಿದೆ. 1958ರಲ್ಲಿ ನಿರ್ಮಾಣವಾದ ಶಾಲೆಗೆ ಕಾಯಕಲ್ಪ ಬೇಕಾಗಿದೆ. ಗೋಡೆ ಗಟ್ಟಿ ಮುಟ್ಟಾಗಿದೆ, ಮೇಲ್ಛಾವಣಿ ಮಳೆಗಾಲದಲ್ಲಿ ತೊಟ್ಟಿಕ್ಕುತ್ತಿದೆ. 1ರಿಂದ 8 ನೇ ತರಗತಿ ವರೆಗೆ ಈ ಶಾಲೆಯಲ್ಲಿ 10 ಶಿಕ್ಷಕರಿದ್ದು, 240 ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. 10 ಕೊಣೆಗಳಿದ್ದು, ಎರಡು ಕೋಣೆಗಳು ಉಪಯೋಗಕ್ಕೆ ಬಾರದಂತಾಗಿವೆ. ಉಳಿದ ಎಂಟು ಕೋಣೆಗಳು ಮಳೆಗಾಲದಲ್ಲಿ ಸೋರುತ್ತಿವೆ.
ಶೌಚಾಲಯ ಸಮಸ್ಯೆ: 240 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುವ ಶಾಲೆಯಲ್ಲಿ ಶೌಚಾಲಯ ಇದ್ದೂ ಇಲ್ಲದಂತಿದೆ. ಇದರಿಂದ ವಿದ್ಯಾರ್ಥಿನಿಯರು, ಮಹಿಳಾ ಶಿಕ್ಷಕಿಯರು ಪರದಾಡುವಂತಾಗಿದೆ.
ಇದನ್ನೂ ಓದಿ : ಡ್ರಗ್ಸ್ ಪ್ರಕರಣ: ಹಾಸ್ಯ ನಟಿ ಭಾರ್ತಿ ಸಿಂಗ್ ನಿವಾಸದ ಮೇಲೆ ಎನ್ ಸಿಬಿ ದಾಳಿ
ಶಿಕ್ಷಕರ ಸ್ವಂತ ಹಣದಿಂದ ಮೇಲ್ಛಾವಣಿ: ಶಾಲೆಯ ಶಿಕ್ಷಕರ ಸ್ವಂತ 80 ಸಾವಿರ ರೂ., ಸರ್ಕಾರದ 15 ಸಾವಿರ ರೂ. ಅನುದಾನ, 11 ಸಾವಿರ ರೂ. ನಿರ್ವಹಣೆ ವೆಚ್ಚ, ಶಿಕ್ಷಣ ಇಲಾಖೆಯಿಂದ 9615 ರೂ. ಸೇರಿಸಿ ಕಚೇರಿಯ ಮೇಲ್ಛಾವಣಿ ಹಾಕಿಸಿ, ಇನ್ನಿತರ ಕೆಲಸಗಳನ್ನು ಮಾಡಿಸಲಾಗಿದೆ.
ಶಾಲೆಯ ಮೇಲ್ಛಾವಣಿ ಇನ್ನೂ ದುರಸ್ತಿಯಾಗಬೇಕು. ಕಾಂಪೌಂಡ್ ಗೋಡೆ ನಿರ್ಮಾಣವಾಗಬೇಕು, ಶೌಚಾಲಯ ಕಟ್ಟಡವಾಗಬೇಕು, ಸ್ಮಾರ್ಟ್ ಕ್ಲಾಸ್ ಆಗಬೇಕು. ಸ್ಮಾರ್ಟ್ ಕ್ಲಾಸ್‌ಗೆ ಇದ್ದ ಹಣ ಕಚೇರಿ ದುರಸ್ತಿಗೆ ಬಳಸಿದ್ದೇವೆ. ಇದಕ್ಕೆ ಶಿಕ್ಷಕರು ಕೈ ಜೋಡಿಸಿದ್ದಾರೆ. ಬರುವ ದಿನಗಳಲ್ಲಿ ಸ್ಮಾರ್ಟ್ ಕ್ಲಾಸ್ ಬೇಕೆಂದು ಸಮನ್ವಯಾಧಿಕಾರಿ ಸುಧಾಕರ ನಾಯಕ್ ಗಮನಕ್ಕೆ ತಂದಿದ್ದೇವೆ. –ಎಂ.ಡಿ ನೂರುದ್ದಿನ್, ಮುಖ್ಯಶಿಕ್ಷಕ
ಘತ್ತರಗಿ ಶಾಲೆ ಶೌಚಾಲಯ ಸಮಸ್ಯೆ ಗಮನಕ್ಕೆ ಬಂದಿದೆ. ಮುಖ್ಯಶಿಕ್ಷಕ, ಬಿಇಒ ಜತೆ ಚರ್ಚಿಸಿ ಶೀಘ್ರ ಶೌಚಾಲಯ ಕಟ್ಟಿಸುವ ವ್ಯವಸ್ಥೆ ಮಾಡಲಾಗುವುದು. –ಡಾ| ಆಕಾಶ, ಐಎಎಸ್ ಅಧಿಕಾರಿ, ತಾ.ಪಂ
ಶಾಲೆ ಮೇಲ್ಛಾವಣಿ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ಕೂಡಲೇ ದುರಸ್ತಿ ಮಾಡಲಾಗುತ್ತದೆ. ಶೌಚಾಲಯನಿರ್ಮಿಸಲಾಗುತ್ತದೆ. ಘತ್ತರಗಿ ಶಾಲೆ ಮಾದರಿಯಾಗಲಿದೆ. –ಚಿತ್ರಶೇಖರ ದೇಗಲಮಡಿ, ಬಿಇಒ
–ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ಶಾಲೆ ಮುಖ್ಯಸ್ಥನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ
Bengaluru: ಬೈಕ್ ಡಿಕ್ಕಿ: ರಾತ್ರಿಯಿಡೀ ರಸೇಲಿ ನರಳಿ ವ್ಯಕ್ತಿ ಸಾವು
Bengaluru: ಪಾದಚಾರಿ ಮಾರ್ಗದಲ್ಲಿ ಕಾರು ಚಾಲನೆ: ಕೇಸ್ ದಾಖಲು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
Renukaswamy case: ದರ್ಶನ್ ವಿರುದ್ಧ ಸಾಕ್ಷ್ಯ “ಸೃಷಿ’: ವಕೀಲ ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.