ಡಿ.10ರಿಂದ ಮೈಸೂರು – ಮಂಗಳೂರು ನಡುವೆ ವಿಮಾನ ಸೇವೆ ಆರಂಭ
Team Udayavani, Nov 21, 2020, 10:28 PM IST
ಮೈಸೂರು/ ಮಂಗಳೂರು: ಮೈಸೂರು – ಮಂಗಳೂರು ನಡುವೆ ಡಿ. 10ರಿಂದ ಮೊದಲ ಬಾರಿಗೆ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಲಿದ್ದು, ಕರಾವಳಿ ಭಾಗದ ಜನರ ಬಹುದಿನಗಳ ಕನಸು ನನಸಾಗಿದೆ.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣ ಸ್ಥಾಪನೆಯಾಗಿ 10 ವರ್ಷಗಳ ಬಳಿಕ ಮೈಸೂರಿನಿಂದ ಮಂಗಳೂರಿಗೆ ವಿಮಾನಯಾನ ಸೇವೆ ಆರಂಭವಾಗಲಿದೆ.
ಮೊದಲ ವಿಮಾನ ಡಿ. 10ರ ಬೆಳಗ್ಗೆ 11.15ಕ್ಕೆ ಮೈಸೂರಿನಿಂದ ಹೊರಟು ಮಂಗಳೂರಿಗೆ 12.15ಕ್ಕೆ ತಲುಪಲಿದೆ. ಇನ್ನೊಂದು ವಿಮಾನವು ಮಂಗಳೂರಿನಿಂದ 12.40ಕ್ಕೆ ಹೊರಟು ಮೈಸೂರಿಗೆ 01.40ಕ್ಕೆ ಆಗಮಿಸಲಿದೆ. ಈ ವಿಮಾನಗಳು ಬುಧವಾರ, ಶುಕ್ರವಾರ, ಶನಿವಾರ ಮತ್ತು ರವಿವಾರ ಹಾರಾಟ ನಡೆಸಲಿವೆ.
ಇದನ್ನೂ ಓದಿ:ಕೋವಿಡ್ ಸೋಂಕಿತರ ಸಮಸ್ಯೆಗೆ ಔಷಧಿ ಸಂಶೋಧನೆ: ಭಾರತೀಯ ಮೂಲದ ವೈದ್ಯೆಯ ಸಾಧನೆ !
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.