ಎಲ್ಲೆಂದರಲ್ಲಿ ತ್ಯಾಜ್ಯ ಸುರಿದರೆ ವಾಟ್ಸಾಪ್ ಮಾಡಿ
Team Udayavani, Nov 22, 2020, 2:41 PM IST
ಮೈಸೂರು: ನಗರದ ಹೊರವಲಯದ ರಿಂಗ್ ರಸ್ತೆಯ ಆಸುಪಾಸಿನಲ್ಲಿ ಯಥೇಚ್ಚವಾಗಿ ಕಟ್ಟಡ ತ್ಯಾಜ್ಯಗಳು ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸುರಿಯುತ್ತಿದ್ದು, ಇನ್ನು ಮುಂದೆ ತ್ಯಾಜ್ಯ ಸುರಿದರೆ ಕಠಿಣ ಕಾನೂನುಕ್ರಮ ಜರುಗಿಸಲಾಗುವುದು ಎಂದು ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಎಚ್ಚರಿಕೆ ನೀಡಿದರು.
ಮುಡಾ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೈಸೂರು ಪಾರಂಪರಿಕ ನಗರಿಯೊಂದಿಗೆ ಸ್ವಚ್ಛನಗರಿಯೂ ಹೌದು. ರಿಂಗ್ ರಸ್ತೆ ನಗರದ ಕನ್ನಡಿ ಇದ್ದಂತೆ. ಇಂತಹ ಸ್ಥಳದಲ್ಲೇ ತ್ಯಾಜ್ಯ ಸುರಿದರೆ ನಗರದ ಅಂದ ಹಾಳಾಗಲಿದೆ. ಹೀಗಾಗಿ ರಿಂಗ್ ರಸ್ತೆಯ ಆಸುಪಾಸಿನಲ್ಲಿ ಸುರಿದಿರುವ ತ್ಯಾಜ್ಯವನ್ನು ನ.28ರೊಳಗೆ ತೆರವುಗೊಳಿಸಲು ಸೂಚಿಸಲಾಗಿದೆ.
ರಿಂಗ್ ರಸೆಯಲ್ಲಿ ಸುಮಾರು 30 ವಿವಿಧ ಸ್ಥಳಗಳಲ್ಲಿ ಕಟ್ಟಡ ತ್ಯಾಜ್ಯ ಸುರಿಯಲಾಗುತ್ತಿದೆ. ಈ ಪೈಕಿ 13 ಸ್ಥಳಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸ ಲಾಗಿದೆ. ಇನ್ನು ಮುಂದೆ ಈ ಸ್ಥಳಗಳಲ್ಲಿ ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಕಟ್ಟಡ ತ್ಯಾಜ್ಯ ಸುರಿಯು ವವರನ್ನು ಪತ್ತೆಹಚ್ಚಿಕ್ರಿಮಿನಲ್ ಮೊಕದ್ದಮೆ ದಾಖಲಿಸಿ ದಂಡ ವಿಧಿಸಲಾಗುವುದು ಎಂದರು.
ಜಾಗೃತಿದಳ ರಚನೆ: ನಗರದ ಸ್ವಚ್ಛತೆ ಕಾಪಾಡಲು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ನಿರ್ಬಂಧಿಸಿರುವ ಹೊರವರ್ತುಲ ರಸ್ತೆಯ ಮಗ್ಗಲುಗಳ ಪ್ರದೇಶಗಳಲ್ಲಿ ಟ್ರೆಸ್‌ಪಾಸ್ ಮಾಡಿ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿರುವ ಬಗೆಗಿನ ಛಾಯಾಚಿತ್ರಗಳನ್ನು ವಾಟ್ಸಾಪ್ ಸಂಖ್ಯೆ 8884000750ಕ್ಕೆ ಕಳುಹಿಸಿದಲ್ಲಿ ಕಾನೂನು ಕ್ರಮಜರುಗಿಸಲಾಗುವುದು. ಮುಂದಿನ ದಿನಗಳಲ್ಲಿ ಪ್ರಾಧಿಕಾರ ರಚಿಸುವ ಜಾಗೃತದಳ ಈ ಬಗ್ಗೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲಿದೆ. ತ್ಯಾಜ್ಯ ಸುರಿಯುವ ವ್ಯಕ್ತಿಗಳ ವಿರುದ್ಧ ಹಾಗೂ ಅದಕ್ಕೆ ಬಳಸುವ ವಾಹನಗಳನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಸಿದರು.
ನಿರ್ಬಂಧ: ಹೊರವರ್ತುಲ ರಸ್ತೆಯ ಮಗ್ಗಲುಗಳನ್ನು ಸ್ವಚ್ಛಗೊಳಿಸಿದ ನಂತರ ಯಾವುದೇ ರೀತಿಯ ತ್ಯಾಜ್ಯಗಳನ್ನು ರಸ್ತೆಯ ಮಗ್ಗಲುಗಳಲ್ಲಿ ಸುರಿಯದಂತೆ ನಿಷೇಧಿಸಿ ನಿರ್ಬಂಧಿಸಲಾಗಿದೆ. ತ್ಯಾಜ್ಯಗಳನ್ನು ಮೈಸೂರು ನಗರಪಾಲಿಕೆಯು ನಿರ್ದಿಷ್ಟಪಡಿಸಿರುವ ಸೀವೇಜ್ ಫಾರಂ ಸ್ಥಳದಲ್ಲಿಯೇ ವಿಲೇವಾರಿ ಮಾಡಲು ಸೂಚಿಸಲಾಗಿದೆ. ನಗರದ ಅಂದ ಹಾಗೂ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಮುಡಾ, ಪಾಲಿಕೆ, ಜಿಪಂ ಹಾಗೂ ಸ್ಥಳೀಯ ಸಂಸ್ಥೆಗಳು ಒಟ್ಟಾಗಿ ಸೇರಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗು ವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್ ಇದ್ದರು.
ನಕ್ಷೆ ಅನುಮೋದನೆಗೆ ನಿಯಮಾವಳಿ : ನಗರದಲ್ಲಿ ಏಕ ನಿವೇಶನ ವಸತಿ ವಿನ್ಯಾಸ ಬಡಾವಣೆ ನಕ್ಷೆ ಅನುಮೋದನೆಕೋರುವವರು ಸಕ್ಷಮ ಪ್ರಾಧಿಕಾರಗಳಿಂದಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕ, ಒಳಚರಂಡಿ ವ್ಯವಸ್ಥೆ ಹಾಗೂ ಇತ್ಯಾದಿಗಳನ್ನುಕಲ್ಪಿಸಿರುವ ಬಗ್ಗೆ ದೃಢೀಕರಣ ಪತ್ರ ಹಾಜರುಪಡಿಸುವುದು, ಒಳಚರಂಡಿ ಲೈನ್‌ನ್ನು ಮೇನ್ ಲೈನ್‌ಗೆ ಲಿಂಕೇಜ್ ಮಾಡಿರುವ ಬಗ್ಗೆ ಮಹಾನಗರಪಾಲಿಕೆ, ಸ್ಥಳೀಯ ಸಂಸ್ಥೆಯಿಂದ ಪಡೆದ ದೃಢೀಕರಣವನ್ನು ಹಾಜರುಪಡಿಸುವ
ಜೊತೆಗೆ ಸಿವೇಜ್ ಟ್ರೀಟ್‌ಮೆಂಟ್ ಪ್ಲಾಂಟ್‌ನ್ನು ಅಳವಡಿಸಿ ಒಳಚರಂಡಿ ನೀರನ್ನು ಸಂಸ್ಕರಿಸಲು ಕ್ರಮಕೈಗೊಳ್ಳುವುದುಕಡ್ಡಾಯ ಮಾಡಲಾಗಿದೆಎಂದು ಮುಡಾ ಅಧ್ಯಕ್ಷ ರಾಜೀವ್ ತಿಳಿಸಿದರು. ಏಕನಿವೇಶನ ಅನುಮೋದನೆ ಪಡೆದ ನಂತರ ಯಾವುದೇ ಸಂದರ್ಭದಲ್ಲಿಯೂ ಅಂತಹ ನಿವೇಶನದ ವಿಭಜನೆ ನಿಷೇಧಿಸಿದೆ. ಏಕ ನಿವೇಶನ ವಸತಿ ವಿನ್ಯಾಸ ಬಡಾವಣೆ ಅನುಮೋದನೆಗೊಂಡು ನಿವೇಶನ ಬಿಡುಗಡೆ ಮಾಡುವಂತಹ ಸಂದರ್ಭಗಳಲ್ಲಿಕಡ್ಡಾಯವಾಗಿ ಯುಜಿಡಿಕುಡಿಯುವ ನೀರಿನ ಸಂಪರ್ಕ, ವಿದ್ಯುತ್ ದೀಪದ ಲೈನ್‌ಗಳನ್ನುಕೈಗೊಂಡಿರುವ ಬಗ್ಗೆ ಹಾಗೂ ಆ ವ್ಯಾಪ್ತಿಯ ಮುಖ್ಯ ಯುಜಿಡಿ,ಕುಡಿಯುವ ನೀರಿನ ಪೈಪ್‌ಲೈನ್ ಸಂಪರ್ಕ ಕಲ್ಪಿಸಿರುವ ಬಗ್ಗೆ ದೃಢೀಕೃತ ನಕ್ಷೆಯನ್ನು ಹಾಜರುಪಡಿಸಿದಲ್ಲಿ ಮಾತ್ರ ನಿವೇಶನಬಿಡುಗಡೆಗೆಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.