ಸಮಾಜಮುಖೀ ಕಾರ್ಯ ಮುಂದುವರಿಯಲಿ
Team Udayavani, Nov 22, 2020, 5:46 PM IST
ನಾರಾಯಣಪುರ: ಕನ್ನಡಪರ ಸಂಘಟನೆಗಳು ಉಚಿತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಮುಖೀ ಕಾರ್ಯದಲ್ಲಿ ತೊಡಗಿದ್ದು, ಕನ್ನಡ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಜೊಗುಂಡಭಾವಿ ಗ್ರಾಮದಲ್ಲಿ ರಾಜ್ಯೋತ್ಸವ ನಿಮಿತ್ತ ನಡೆದ ಉಚಿತ ನೇತ್ರ ತಪಾಸಣೆ, ಊರುಗೋಲು ವಿತರಣಾ ಶಿಬಿರ ಉದ್ಘಾಟಿಸಿಮಾತನಾಡಿದ ಅವರು, ಗ್ರಾಮೀಣಭಾಗದ ಜನತೆಗೆ ಇಂತಹ ಶಿಬಿರಗಳಿಂದ ತುಂಬಾ ಅನುಕೂಲವಾಗಲಿದೆ.ಸಂಘಟಕರು ಸಾಮಾಜಿಕ ಕಳಿಕಳಿ ಇರುವ ಕಾರ್ಯಕ್ರಮಗಳನ್ನು ನಿರಂತರ ಆಯೋಜಿಸುವಂತಾಗಲಿ ಎಂದು ಶುಭ ಹಾರೈಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಬಸವರಾಜ ಮಹಾಮನಿ ಮಾತನಾಡಿ, 550 ಜನರುಕಣ್ಣಿನ ತಪಾಸಣೆ ಮಾಡಿಸಿಕೊಂಡರೆ, 140 ಜನರಿಗೆ ಸಂಘಟನೆ ವತಿಯಿಂದ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು. 110 ಜನ ವೃದ್ಧ ಹಾಗೂ ಅಂಗವಿಕಲರಿಗಊರುಗೋಲು ವಿತರಿಸಲಾಗಿದಎಂದರು. ಗಿರಿಮಲ್ಲಪ್ಪ ಪೂಜಾರಿ, ಗದ್ದೆಪ್ಪ ಪೂಜಾರಿ, ಅಮರಣ್ಣ ಹುಡೇದ, ಬಿಜೆಪಿ ತಾಲೂಕು ಅಧ್ಯಕ್ಷ ಮೇಲಪ್ಪ ಗುಳಿಗಿ, ವಿ.ಎಂ ಹಿರೇಮಠ, ನಾಗಯ್ಯಸ್ವಾಮಿ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ| ಪ್ರಭುಗೌಡ, ಡಾ| ಸಿ.ಜಿ ವಡವಡಗಿ, ಡಾ| ಬಸವರಾಜ ಕುಂಬಾರ, ಹಣಮಂತ ಗುರಿಕಾರ, ಡಾ| ಮಹಮ್ಮದ ಕಾಶೀಮ್,ಪರಶುರಾಮ, ಬಸವರಾಜ ಗೌಡರ ವೇದಿಕೆ ಸದಸ್ಯರು, ಆಶಾ, ಆರೋಗ್ಯ ಕಾರ್ಯಕರ್ತೆಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.