ಆಕ್ಷೇಪಾರ್ಹ ಪೋಸ್ಟ್‌ಗೆ 3 ವರ್ಷ ಜೈಲು, ದಂಡ

ಕೇರಳದ ವಿವಾದಿತ ಪೊಲೀಸ್‌ ಕಾಯ್ದೆ ತಿದ್ದುಪಡಿಗೆ ಅಂಕಿತ

Team Udayavani, Nov 23, 2020, 6:32 AM IST

ಆಕ್ಷೇಪಾರ್ಹ ಪೋಸ್ಟ್‌ಗೆ 3 ವರ್ಷ ಜೈಲು, ದಂಡ

ತಿರುವನಂತಪುರ: ವಾಕ್‌ ಸ್ವಾತಂತ್ರ್ಯ, ನಿಷ್ಪಕ್ಷಪಾತ ಪತ್ರಿಕೋದ್ಯಮದ ಹಕ್ಕಿಗೆ ಚ್ಯುತಿ ತರಲಿದೆ ಎನ್ನಲಾದ ವಿವಾದಿತ ಪೊಲೀಸ್‌ ತಿದ್ದುಪಡಿ ಕಾಯ್ದೆಗೆ ಕೇರಳ ಸರಕಾರ ತೀವ್ರ ವಿರೋಧದ ನಡುವೆಯೇ ಅಂಕಿತ ಒತ್ತಿದೆ.

ಕೇರಳ ಕ್ಯಾಬಿನೆಟ್‌ ಅನುಮೋದಿಸಿದ್ದ 2011ರ “118 ಎ’ ಪೊಲೀಸ್‌ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯ­ಪಾಲ ಆರೀಫ್ ಮೊಹಮ್ಮದ್‌ ಖಾನ್‌ ಸಹಿ ಹಾಕಿದ್ದಾರೆ. ಇದರ ಅನ್ವಯ, ಸಾಮಾಜಿಕ ಜಾಲ­ತಾಣ­ಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್‌ ಬೆದರಿಕೆಯೊಡ್ಡುವವರಿಗೆ ಕನಿಷ್ಠ 3 ವರ್ಷ ಜೈಲು ಅಥವಾ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿ­ಸಲು ಎಲ್‌ಡಿಎಫ್ ಸರಕಾರ ಮುಂದಾಗಿದೆ.

ಜಾರಿ ಆಗಿದ್ದೇಕೆ?: “ಪ್ರಸ್ತುತವಿರುವ ಕಾನೂನಿ­ನಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಸೈಬರ್‌ ಬೆದರಿಕೆಯೊಡ್ಡುವ ಅಪರಾಧಿಗಳಿಗೆ ನಿರ್ದಿಷ್ಟ ಶಿಕ್ಷೆಗಳಿಲ್ಲ. ಐಪಿಸಿ ಸೆಕ್ಷನ್‌ 499, 500ರಲ್ಲಿ ಮಾನಹಾನಿ ಮೊಕದ್ದಮೆ ಹೂಡಲು ಅವಕಾಶ­ವಿ­ದ್ದರೂ, ಇಲ್ಲಿ ಅರ್ಜಿದಾರರೇ ಖುದ್ದಾಗಿ ಕೋರ್ಟ್‌ ಮೆಟ್ಟಿಲೇರಬೇಕು’ ಎನ್ನುವುದು ಕೇರಳ ಸರಕಾರದ ವಾದ. ಆದರೆ, ತಿದ್ದುಪಡಿ ತರಲಾದ ಪೊಲೀಸ್‌ ಕಾಯ್ದೆಯಲ್ಲಿ ಸಂತ್ರಸ್ತರ ಪರ ಯಾವುದೇ ವ್ಯಕ್ತಿ ದೂರು ಸಲ್ಲಿಸಬಹುದು ಅಥವಾ ಪೊಲೀಸ್‌ ಅಧಿಕಾರಿಯೇ ಖುದ್ದಾಗಿ ಆರೋಪಿ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿ­ಸಬಹುದು. ನೋಟಿಸ್‌ ನೀಡದೆ ಪೊಲೀಸರು ಆರೋಪಿಯನ್ನು ಬಂಧಿಸ­ಬಹುದು. ಆದರೆ ಸಿಎಂ ಕಚೇರಿ ಹೊರಡಿಸಿ­ರುವ ಪ್ರಕಟನೆಯಲ್ಲಿ ಈ ತಿದ್ದುಪಡಿ ಕಾಯ್ದೆ ಕೇವಲ ಸಾಮಾಜಿಕ ಜಾಲತಾಣ­ಗಳಿಗಷ್ಟೇ ಸೀಮಿತವಲ್ಲ ಎಂಬುದೂ ಸ್ಪಷ್ಟವಾ­ಗಿದೆ. “ಮುದ್ರಣ, ದೃಶ್ಯ ಮಾಧ್ಯಮ, ಪೋಸ್ಟರ್‌ ಮತ್ತು ಬಿಲ್‌ಬೋರ್ಡ್‌ಗಳ ವಿರುದ್ಧವೂ ಕ್ರಮ ಜರಗಿಸಲು ಅವಕಾಶವಿದೆ’ ಎಂದಿದೆ.

ತೀವ್ರ ಆಕ್ಷೇಪ: ಸರಕಾರ ಜಾರಿಗೆ ತಂದಿರುವ ಪೊಲೀಸ್‌ ತಿದ್ದುಪಡಿ ಕಾಯ್ದೆಗೆ ವಿಪಕ್ಷ ಯುಡಿಎಫ್ ಅಲ್ಲದೆ, ಎಲ್‌ಡಿಎಫ್ನ ಒಬ್ಬ ಸದಸ್ಯ, ಹಲವು ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿರುದ್ಧ ಬೆದರಿಕೆಗೆ ಕಡಿವಾಣ
ಕನಿಷ್ಠ ಮೂರು ವರ್ಷ ಜೈಲು ಅಥವಾ 10 ಸಾವಿರ ರೂ. ದಂಡ ಅಥವಾ ಎರಡೂ ಶಿಕ್ಷೆ

ಯಾರಿಗೆ ಕಾಯ್ದೆ ಬಿಸಿ?
ಸಾಮಾಜಿಕ ಜಾಲತಾಣ, ಸಮೂಹ ಮಾಧ್ಯಮಗಳಲ್ಲಿ ಮಹಿಳೆ- ಮಕ್ಕಳ ವಿರುದ್ಧ ಬೆದರಿಕೆ ಒಡ್ಡುವವರಿಗೆ.
ಸಾರ್ವಜನಿಕ ಪ್ರದೇಶಗಳಲ್ಲಿ ಲೈಂಗಿಕ ಸನ್ನೆ ಮಾಡುವವರಿಗೆ.
ಸ್ತ್ರೀ ಗೌರವಕ್ಕೆ ಚ್ಯುತಿ ತರುವವರಿಗೆ.
ಮಹಿಳೆಯ ಖಾಸಗೀತನಕ್ಕೆ ಧಕ್ಕೆ ತರುವ ಫೋಟೋ, ವೀಡಿಯೋ ಚಿತ್ರೀಕರಿಸುವವರಿಗೆ.

ಬೇರೆ ರಾಜ್ಯಗಳಲ್ಲಿ
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 354, 354 ಎ ಜತೆಗೆ ಐಟಿ ಆ್ಯಕ್ಟ್ ಅನ್ವಯ ಶಿಕ್ಷೆ ವಿಧಿಸಲಾ ಗುತ್ತದೆ. ಅಪರಾಧದ ಗಂಭೀರತೆ ಆಧರಿಸಿ, ಕನಿಷ್ಠ 2 ವರ್ಷ ಜೈಲು ಶಿಕ್ಷೆ ಜಾರಿ ಮಾಡಲಾಗುತ್ತದೆ.
ಪ.ಬಂಗಾಲ ಮಹಿಳೆ ವಿರುದ್ಧದ ಸೈಬರ್‌ ಅಪರಾಧವನ್ನು “ವರ್ಚು ವಲ್‌ ರೇಪ್‌’ ಅಂತಲೇ ಪರಿಗಣಿಸಿದೆ.
ಮಹಾರಾಷ್ಟ್ರದಲ್ಲಿ ಐಟಿ ಆ್ಯಕ್ಟ್ ಅನ್ವಯ 5-7 ವರ್ಷ ಜೈಲು

ಪೊಲೀಸ್‌ ತಿದ್ದುಪಡಿ ಕಾಯ್ದೆ ಪ್ರತಿಯೊಬ್ಬರ ಖಾಸಗಿ ಹಕ್ಕುಗಳನ್ನು ಸಂರಕ್ಷಿಸುತ್ತದೆ. ಇದರಿಂದ ವಾಕ್‌ ಸ್ವಾತಂತ್ರ್ಯ ಅಥವಾ ನಿಷ್ಪಕ್ಷಪಾತ ಪತ್ರಿಕೋದ್ಯಮಕ್ಕೆ ಯಾವುದೇ ಧಕ್ಕೆ ಇಲ್ಲ.
ಪಿಣರಾಯ್‌ ವಿಜಯನ್‌, ಕೇರಳ ಸಿಎಂ

ಟಾಪ್ ನ್ಯೂಸ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ

Tirupathi

TTD Resolution: ಇನ್ನು ಹಿಂದೂಯೇತರರಿಂದ ತಿರುಮಲ ತಿರುಪತಿ ದೇವಸ್ಥಾನ ಮುಕ್ತ!

Naxal-Postmartam

Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ

Naxal-Vikram-Sister

Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ

Himachal-Bhavan

Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ

Russia-Putin

‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುತಿನ್‌ ಅಣ್ವಸ್ತ್ರ ದಾಳಿ ಎಚ್ಚರಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Mangaluru: ಪ್ಲಾಸ್ಟಿಕ್‌ ಉತ್ಪಾದನ ಘಟಕ, ಮಾರಾಟದ ಮೇಲೆ ನಿಗಾ

4

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

3

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

2

Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.

1

Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

5

Mangaluru: ಪ್ಲಾಸ್ಟಿಕ್‌ ಉತ್ಪಾದನ ಘಟಕ, ಮಾರಾಟದ ಮೇಲೆ ನಿಗಾ

4

Mangaluru: ಕಾರಿಗೆ ಬೆಂಕಿ; ನಿರ್ವಹಣ ನಿರ್ಲಕ್ಷ್ಯ ಕಾರಣ?

3

Ullal: ಬಡವರ ಬಿಪಿಎಲ್‌ ಕಿತ್ತುಕೊಳ್ಳಬೇಡಿ

2

Belthangady: ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ 1.18 ಕೋಟಿ ರೂ.

1

Madanthyar: ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಗೆ ತೇಪೆ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.