ಮಾಜಿ ಸಚಿವ ರೋಶನ್ ಬೇಗ್ ಮನೆ ಮೇಲೆ ಸಿಬಿಐ ದಾಳಿ
Team Udayavani, Nov 23, 2020, 8:00 AM IST
ಬೆಂಗಳೂರು: ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ರೋಶನ್ ಬೇಗ್ ನಿವಾಸ ಮೇಲೆ ಇಂದು ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣದ ಸಂಬಂಧ ರೋಶನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ರವಿವಾರ ಬಂಧಿಸಿದ್ದರು. ಇಂದು ಬೆಳಿಗ್ಗೆ ಸಿಬಿಐ ಅಧಿಕಾರಿಗಳ ತಂಡ ಬೆಂಗಳೂರಿನ ಪುಲಕೇಶಿ ನಗರದ ಕೋಲ್ಸ್ ಪಾರ್ಕ್ ನಲ್ಲಿರುವ ರೋಶನ್ ಬೇಗ್ ಮನೆಗೆ ದಾಳಿ ನಡೆಸಿದ್ದು ದಾಖಲೆ ಪತ್ರ ಪರಿಶೀಲನೆಯಲ್ಲಿ ತೊಡಗಿದೆ.
ನಿನ್ನೆ ಬಂಧನ
ಐಎಂಎ ಬಹುಕೋಟಿ ರೂ. ವಂಚನೆ ಪ್ರಕರಣದ ಸಂಬಂಧ ರೋಶನ್ ಬೇಗ್ ಅವರನ್ನು ರವಿವಾರ ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಬೇಗ್ ಅವರನ್ನು ರವಿವಾರ ಹಲವು ತಾಸು ಸಿಬಿಐ ವಿಚಾರಣೆ ನಡೆಸಿದ್ದು, ಹಗರಣದಲ್ಲಿ ಭಾಗಿಯಾಗಿರುವುದು ಕಂಡು ಬಂದದ್ದರಿಂದ ಬಂಧಿಸಲಾಗಿದೆ. ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರವಿವಾರ ಸಂಜೆ ಸಿಬಿಐ ಅಧಿಕಾರಿಗಳು ರೋಶನ್ ಬೇಗ್ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಒಪ್ಪಿಸಿದರು.
ಇದನ್ನೂ ಓದಿ:ಐಎಂಎ ವಂಚನೆ ಕೇಸ್ : ಮಾಚಿ ಸಚಿವ ರೋಶನ್ ಬೇಗ್ಗೆ 14 ದಿನ ನ್ಯಾಯಾಂಗ ಬಂಧನ
400 ಕೋಟಿ ರೂ. ಆರೋಪ
ಐಎಂಎ ಮುಖ್ಯಸ್ಥ ಮನ್ಸೂರ್ ಅಲಿ ಖಾನ್, ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಬಳಿಕ ಅಜ್ಞಾತ ಸ್ಥಳದಿಂದ ಆಡಿಯೋ ಮಾಡಿ ಹರಿಯಬಿಟ್ಟು, ತನ್ನ ಬಳಿಯಿಂದ ರೋಶನ್ ಬೇಗ್ 400 ಕೋಟಿ ರೂ. ಪಡೆದು ಹಿಂದಿರುಗಿಸದೆ ವಂಚಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಆರೋಪವನ್ನು ಬೇಗ್ ತಳ್ಳಿ ಹಾಕಿದ್ದರು. ಮನ್ಸೂರ್ ಖಾನ್ ತನ್ನ ಆಡಿಯೋದಲ್ಲಿ ಬೇಗ್ ಮಾತ್ರವಲ್ಲದೆ ಹಲವು ರಾಜಕೀಯ ನಾಯಕರು ಮತ್ತು ಅಧಿಕಾರಿಗಳಿಗೂ ಹಣ ನೀಡಿದ್ದಾಗಿ ಉಲ್ಲೇಖೀಸಿದ್ದರು.
ಎಸ್ಐಟಿ ವಿಚಾರಣೆ ಎದುರಿಸಿದ್ದ ಬೇಗ್!
ಐಎಂಎ ವಂಚನೆ ಕೇಸ್ ಬಗ್ಗೆ ಮೊದಲು ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ), ವಿಚಾರಣೆಗೆ ಹಾಜರಾಗುವಂತೆ ಬೇಗ್ಗೆ ನೋಟಿಸ್ ನೀಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಕಳೆದ ವರ್ಷ ಜು. 19ರಂದು ಎಸ್ಐಟಿಯು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಕಳುಹಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.