ಪ್ರಸಿದ್ಧ ದ್ವಾರಸಮುದ್ರ ಕೆರೆ ಏರಿ ಮಧ್ಯದಲ್ಲೇ ಬಿರುಕು
Team Udayavani, Nov 23, 2020, 6:50 PM IST
ಹಳೇಬೀಡು: ಹೋಬಳಿ ಕೇಂದ್ರದಲ್ಲಿನ ಪ್ರಸಿದ್ಧ ದ್ವಾರಸಮುದ್ರ ಕೆರೆ ಏರಿ ದುರಸ್ತಿ ಕಾರ್ಯ ನಡೆಯುತ್ತಿರುವಾಗಲೇ ಹಲವು ಕಡೆ ಬಿರುಕು ಕಾಣಿಸಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿರುವ ದ್ವಾರಸಮುದ್ರ ಕೆರೆ 12 ವರ್ಷಗಳ ನಂತರಭರ್ತಿಯಾಗಿದ್ದು, ಹಳೇಬೀಡು, ಮಾದಿಹಳ್ಳಿ, ಜಾವಗಲ್ ಹೋಬಳಿಗಳ ರೈತರ ಸಂತೋಷಕ್ಕೆ ಕಾರಣವಾಗಿತ್ತು. ಇದೇ ಸಮಯದಲ್ಲಿ ನೀರಿನ ಶೇಖರಣಾ ಸಾಮರ್ಥ್ಯಹೆಚ್ಚಾಗಿ ಕೆರೆಏರಿ ಕುಸಿದಿದ್ದು ಆತಂಕ ತರಿಸಿದೆ.
ಕೆರೆ ಏರಿ ಒಡೆಯುವ ಭೀತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತಜ್ಞರ ಅಭಿಪ್ರಾಯದಂತೆ ಕೆರೆ ನೀರನ್ನು ಎರಡರಿಂದಮೂರು ಅಡಿ ಹೊರಬಿಡಲು ಸೂಚಿಸಿದ್ದರು. ಅದರಂತೆ, ಏರಿ ಮೇಲೆ ಹಾದು ಹೋಗಿರುವ ಹಾಸನ -ಹಳೇಬೀಡು ರಸ್ತೆ ಬಂದ್ ಮಾಡಿ, ಕೆರೆ ಕೋಡಿ ಸ್ವಲ್ಪ ಹೊಡೆದು, ಪಕ್ಕದ ಬೆಳವಾಡಿ ಕೆರೆಗೆ ನೀರು ಹರಿದು ಬಿಡಲಾಗಿತ್ತು. ಇದೀಗ ಏರಿ ತಾತ್ಕಾಲಿಕ ದುರಸ್ತಿ ಕಾರ್ಯ ಮುಗಿರುವ ಹಂತಕ್ಕೆ ಬಂದಿದ್ದು, ಇದೇ ಸಂದರ್ಭದಲ್ಲಿ ಏರಿ ಮಧ್ಯದಲ್ಲಿಯೇ ಬಿರುಕು ಕಾಣಿಸಿಕೊಂಡಿರುವುದು ಅಧಿಕಾರಗಳಿಗೆ ತಲೆನೋವು ತರಿಸಿದೆ.
5 ಮೀಟರ್ ಉದ್ದದ ಬಿರುಕು: ಒಂದು ಕಡೆ 20 ಮೀಟರ್‌ವರೆಗೆ ಏರಿ ಕುಸಿಯುತ್ತಿದ್ದರೆ ಮತ್ತೆ ಎರಡು ಕಡೆ ಏರಿ ಮಧ್ಯದಲ್ಲಿಯೇ ಬಿರುಕು ಕಾಣಿಸಿಕೊಂಡಿದೆ. ಇದುವರೆಗೂ ರಸ್ತೆ ಒಂದು ಮಗ್ಗುಲಿನಲ್ಲಿ ಮಾತ್ರ ಕೆರೆ ಏರಿ ಕುಸಿದಿತ್ತು. ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ದುರಸ್ತಿ ಕಾರ್ಯ ಮಾಡಿ ಕುಸಿಯುತ್ತಿರುವುದನ್ನು ತಡೆಯುವ ಕಾರ್ಯ ಮಾಡಿದ್ದರು. ಆದರೆ, ಈಗ ಕೆರೆ ಏರಿ ರಸ್ತೆ ಅಡ್ಡವಾಗಿ ಬಿರುಕು ಕಾಣಿಸಿಕೊಂಡಿರುವುದು ಹೋಬಳಿಯ ಜನರ ನಿದ್ದೆಗೆಡಿಸಿದೆ.
ಶಾಶ್ವತ ಕಾಮಗಾರಿ ಅಸಾಧ್ಯ: ಸಣ್ಣ ನೀರಾವರಿಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ 1 ಟಿಎಂಸಿ ನೀರು ಶೇಖರಣೆ ಮಾಡುವ ಸಾಮರ್ಥ್ಯ ದ್ವಾರಸಮುದ್ರ ಕೆರೆ ಹೊಂದಿದೆ. ಕೆರೆ ಏರಿ ದುರಸ್ತಿ ಮಾಡುವ ಸಂಬಂಧ ಸ್ಥಳಕ್ಕೆ ನೀರಾವರಿ ಇಲಾಖೆಯ ಕಾರ್ಯಪಾಲಕ ಮುಖ್ಯ ಎಂಜಿನಿಯರ್ ಸತೀಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣ, ಬೆಂಗಳೂರು ಡಿಸೈನ್ ಎಂಜಿನಿಯರ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೆರೆಏರಿಯಲ್ಲಿ ಮತ್ತೆ ಎರಡು ಕಡೆ ಬಿರುಕು ಕಾಣಿಸಿಕೊಂಡಿರುವುದನ್ನು ಖುದ್ದು ವೀಕ್ಷಣೆ ಮಾಡಿ,ಮತ್ತೆ ಎರಡು ಅಡಿಗಳಷ್ಟು ನೀರು ಕಡಿಮೆಮಾಡಲು ಸೂಚನೆ ನೀಡಿದೆ. ಅದರಂತೆ ನೀರುಹೊರಬಿಟ್ಟಿದ್ದು, ಶಾಶ್ವತ ಕಾಮಗಾರಿ ಮಾಡಲು ಕೆರೆ ನೀರು ಖಾಲಿ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.
ಕೆರೆ ಏರಿಯಲ್ಲಿ ಮತ್ತೆ ಬಿರುಕುಕಾಣಿಸಿಕೊಳ್ಳತ್ತಿರುವುದು ನೋವಿನ ಸಂಗತಿ.ಕೋಡಿ ಸ್ವಲ್ಪ ಹೊಡೆದಿರುವುದೇಸಹಿಸಲಾಗುತ್ತಿಲ್ಲ. ಹೀಗಿರುವಾಗ ಮತ್ತೆರಡುಕಡೆ ಬಿರುಕುಕಾಣಿಸಿ ಕೊಂಡಿದೆ. ಮುಖ್ಯ ಎಂಜಿನಿಯರ್‌ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆನಡೆಸಿದೆ. ಅವರಿಂದ ಮಾಹಿತಿ ಕೂಡಪಡೆದಿದ್ದೇನೆ.ಕೆರೆ ನೀರು ಉಳಿಸಿಕೊಂಡು ಸಾಧ್ಯವಾದಷ್ಟುಕಾಮಗಾರಿ ಮಾಡಲು ತಿಳಿಸಿದ್ದೇನೆ. – ಕೆ.ಎಸ್.ಲಿಂಗೇಶ್, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.