ವರಿಷ್ಠರು ನೀಡುವ ಸೂಚನೆ ಪಾಲಿಸಿ: ಹರತಾಳು ಹಾಲಪ್ಪ

Team Udayavani, Nov 23, 2020, 9:01 PM IST

ವರಿಷ್ಠರು ನೀಡುವ ಸೂಚನೆ ಪಾಲಿಸಿ: ಹರತಾಳು ಹಾಲಪ್ಪ

ಸಾಗರ: ಪಕ್ಷದ ವರಿಷ್ಠರು ನೀಡುವ ಸೂಚನೆಗಳನ್ನು ಪಾಲಿಸಬೇಕು. ಸೂಚನೆ ಪಾಲಿಸುವುದರಲ್ಲಿಯೇ ಪಕ್ಷ, ಸಮೂಹ ಹಾಗೂ ವೈಯಕ್ತಿಕ ಯಶಸ್ಸು ಅಡಗಿರುತ್ತದೆ ಎಂದು ಎಂಎಸ್‌ಐಎಲ್‌ ಅಧ್ಯಕ್ಷ ಹಾಗೂ ಶಾಸಕ ಎಚ್‌. ಹಾಲಪ್ಪ ಹರತಾಳು ತಿಳಿಸಿದರು.

ತಾಲೂಕಿನ ವರದಾಮೂಲದಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿಸಮಾರೋಪ ಭಾಷಣ ಮಾಡಿದ ಅವರು, ಯಾರು ಪಕ್ಷದ ಸೂಚನೆಗಳನ್ನಪರಿಪಾಲಿಸುತ್ತಾರೋ ಅವರ ರಾಜಕೀಯ ಭವಿಷ್ಯ ಸಹ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಬಿಜೆಪಿ ಅತ್ಯಂತ ಸದೃಢವಾಗಿ ದೇಶಾದ್ಯಂತಬೆಳೆಯಲು ಇಂತಹ ಪ್ರವರ್ಗಗಳ ಮೂಲಕ ಪಡೆಯುವ ಬೌದ್ಧಿಕ ಶಿಕ್ಷಣ ಪ್ರಮುಖ ಪಾತ್ರವಹಿಸಿದೆ. ಅನೇಕ ಹಿರಿಯರು ರಾಷ್ಟ್ರ ನಿರ್ಮಾಣಉದ್ದೇಶದಿಂದ ಬಿಜೆಪಿಯನ್ನು ಕಟ್ಟಿದ್ದಾರೆ. ಅವರದ್ದು ಕೆಲವು ಕನಸುಗಳು ಇರುತ್ತವೆ. ಆ ಕನಸು ಸಾಕಾರಗೊಳಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ರಾಷ್ಟ್ರ ನಿರ್ಮಾಣ ಉದ್ದೇಶವಿದ್ದರೂಕೆಲವೊಂದಿಷ್ಟು ಯೋಜನೆಗಳನ್ನು ಮಾಡುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಬಿಜೆಪಿ ಎರಡು ಸ್ಥಾನದಿಂದ ಇದೀಗ ಅತಿ ದೊಡ್ಡ ಪಕ್ಷವಾಗಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ. ಜೊತೆಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯತ್ವ ಹೊಂದಿದೆ ಎಂದರು.

ಪ್ರವರ್ಗದ ಮೂಲ ಉದ್ದೇಶ ಕಾರ್ಯಕರ್ತರಿಗೆ ಸಾಮಾನ್ಯ ರಾಜಕೀಯ ಜ್ಞಾನ ಕಲ್ಪಿಸುವುದು ಹಾಗೂ ಬಿಜೆಪಿ ಬೆಳೆದು ಬಂದ ರೀತಿಯನ್ನು ತಿಳಿಸಿಕೊಡುವುದಾಗಿರುತ್ತದೆ. ಮುಂದೆ ಗ್ರಾಪಂ ಸೇರಿದಂತೆ ಬೇರೆ ಬೇರೆ ಚುನಾವಣೆಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವು ಯಾವ ರೀತಿ ಪ್ರಯತ್ನ ಮಾಡಬೇಕು. ಸೂಚನೆಯನ್ನು ಪಾಲಿಸುವುದರಲ್ಲಿಯೇ ನಮ್ಮ ಗೆಲುವು ಅಡಗಿರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಲೋಕನಾಥ್‌ ಬಿಳಿಸಿರಿ, ಅಭ್ಯಾಸ ವರ್ಗದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು ರಾಜಕೀಯ ಪ್ರವೇಶ, ಸಾಮಾಜಿಕ ಜೀವನಹಾಗೂ ಪಾರದರ್ಶಕ ನಡೆನುಡಿ, ರಾಷ್ಟ್ರೀಯತೆ ಕುರಿತು ಅರಿತುಕೊಳ್ಳಲು ಸಾಧ್ಯವಿದೆ. ಬಿಜೆಪಿ ಕೇವಲ ಅಧಿಕಾರ ಪಡೆಯಲು ಇರುವ ಪಕ್ಷವಲ್ಲ. ಬಿಜೆಪಿಯ ಪ್ರಮುಖ ಉದ್ದೇಶ ಸಾಮಾಜಿಕ ಹಿತಚಿಂತನೆ ಹಾಗೂ ಸಮೂಹ ಜಾಗೃತಿಯಾಗಿದೆ. ಎರಡು ದಿನಗಳ ಅಭ್ಯಾಸ ವರ್ಗವು ಅಭೂತಪೂರ್ವ ಯಶಸ್ಸು ಗಳಿಸಲು ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ. ಅಭ್ಯಾಸ ವರ್ಗದಲ್ಲಿ ಪಡೆದಿರುವ ಮಾಹಿತಿಯನ್ನು ಉಪಯೋಗಿಸಿಕೊಂಡು ಬೂತ್‌ಮಟ್ಟದಲ್ಲಿ ತಮ್ಮ ಅನುಭವವನ್ನು ಹಂಚುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಕುಪೇಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್‌. ಗಣೇಶ್‌ ಪ್ರಸಾದ್‌, ಭೀಮನಕೋಣೆ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್‌, ಎಪಿಎಂಸಿ ಅಧ್ಯಕ್ಷ ಚೇತನರಾಜ್‌ ಕಣ್ಣೂರು ಇದ್ದರು.ದೇವೇಂದ್ರಪ್ಪ ಸ್ವಾಗತಿಸಿದರು. ಗೌತಮ್‌ ಕೆ.ಎಸ್‌. ವಂದಿಸಿದರು. ಹು.ಭಾ. ಅಶೋಕ್‌ ನಿರೂಪಿಸಿದರು.

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shikaripur: ಊಟ ಮಾಡುತ್ತಿದ್ದ ತಂದೆಯ ಕೊಂದ ಮಗ

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Shiralakoppa: ಹೋರಿ ತಿವಿದು ಬೈಕ್‌ ಸವಾರ ಸಾವು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.