ಶರಾವತಿ ಹೊಳೆಸಾಲಿನಲ್ಲಿ ಹೊನ್ನೆ ಕಾಂತಿಘಮ!

Team Udayavani, Nov 23, 2020, 9:31 PM IST

ಶರಾವತಿ ಹೊಳೆಸಾಲಿನಲ್ಲಿ ಹೊನ್ನೆ ಕಾಂತಿಘಮ!

ಅಲ್ಲಲ್ಲಿ ಭೋರ್ಗರೆವ ಝರಿಗಳು. ಸುತ್ತಲೂ ಅಡಕೆ, ತೆಂಗಿನ ತೋಟ. ಮಧ್ಯೆ ಅಲ್ಲಲ್ಲಿ ಮನೆಗಳು. ತಂತ್ರಜ್ಞಾನ ಮುಂದುವರಿದರೂ ಇಲ್ಲಿಮೊಬೈಲ್‌ಗ‌ಳಿಗೆ ನೆಟ್ವರ್ಕ್‌ನ ಹಂಗಿಲ್ಲ… ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಶರಾವತಿಯ ಎಡದಂಡೆಯಲ್ಲಿರುವ ಮಾಗೋಡು ಗ್ರಾಮವನ್ನು ಹೀಗೆ ವರ್ಣಿಸಬಹುದು.

ಕೃಷಿ ಹಿನ್ನೆಲೆಯಿಂದ ಬಂದ ಇಲ್ಲಿನಎಂ.ಪಿ.ಹೆಗಡೆ ಮತ್ತು ವಿನಯ್‌  ಹೆಗಡೆ ಸಹೋದರರು “ರಚನಾ ಹೋಮ್‌ ಇಂಡಸ್ಟ್ರಿ’ ಸ್ಥಾಪಿಸಿ,ಕಳೆದಎರಡು ವರ್ಷಗಳಿಂದ ಹೊನ್ನೆಎಣ್ಣೆಯಿಂದ ಸೋಪ್‌ ತಯಾರಿಸುವಉದ್ಯಮವನ್ನು ಆರಂಭಿಸಿದ್ದಾರೆ. ಆಮೂಲಕ ಸ್ವದೇಶಿ ಉತ್ಪನ್ನ ತಯಾರಿಗೆ ನಾಂದಿ ಹಾಡಿದ್ದಾರೆ.

ಸ್ವಾವಲಂಬನೆಯೇ ಮಂತ್ರ :  ಮಾಗೋಡಿನ ತಿಮ್ಮಣ್ಣ ಹೆಗಡೆ ಅವರ ಹೊನ್ನೆ ಎಣ್ಣೆ ಘಟಕದಲ್ಲಿಪ್ರತಿವರ್ಷ 8-10 ಸಾವಿರ ಲೀ.ಹೊನ್ನೆಎಣ್ಣೆ ಉತ್ಪಾದನೆಯಾಗುತ್ತಿತ್ತು.ಅದರಲ್ಲಿ ವರ್ಷಕ್ಕೆ3000 ಲೀ. ಎಣ್ಣೆದೂರದ ಬೆಲ್ಜಿಯಂಗೆ ರಫ್ತಾಗುತ್ತಿತ್ತು. ಅದುಕೂಡಾಕೇವಲ ಮಸಾಜ್‌ಗಳಿಗಾಗಿ!ವಿದೇಶಗಳಲ್ಲಿ ಚರ್ಮದ ರಕ್ಷಣೆಯ ಉದ್ದೇಶದಿಂದ ಹೊನ್ನೆ ಎಣ್ಣೆಯನ್ನು ಬಳಸುತ್ತಾರೆ ಎಂದ ಮೇಲೆ ನಮ್ಮಲ್ಲೂ ಯಾಕೆ ಇದರ ಉಪಯೋಗ ಪಡೆಯಬಾರದು ಎಂದು ಎಂ.ಪಿ.ಹೆಗಡೆ ಯೋಚಿಸಿದರು.

2016ರಲ್ಲಿ ಶಿವಮೊಗ್ಗದ ಜೆಎನ್‌ಯು ಜೈವಿಕಘಟಕದಲ್ಲಿ ಸೋಪ್‌ ತಯಾರಿಕಾ ತರಬೇತಿಪಡೆದ ಬಳಿಕ ಆವಿಷ್ಕಾರವನ್ನು ಪ್ರಾರಂಭಿಸಿದರು.ಎರಡು ವರ್ಷ ಸತತ ಪ್ರಯೋಗ ನಡೆಸಿಸೋಪ್‌ ತಯಾರಿಕೆಯಲ್ಲಿ ಯಶಸ್ವಿಯೂ ಆದರು. ಪ್ರಯೋಗಾಲಯದ ವರದಿಗಳೂಉತ್ತಮ ಫಲಿತಾಂಶ ನೀಡಿದವು. ಪರಿಣಾಮ, 2018ರ ಆಗಸ್ಟ್ ನಲ್ಲಿ “ಹೊನ್ನೆಕಾಂತಿ’ ಹೆಸರಿನ ಐದು ಬಗೆಯ ಸೋಪ್‌ ಮಾರುಕಟ್ಟೆಗೆ ಪ್ರವೇಶಿಸಿತು.

“ಹೊನ್ನೆ ಬೆಳೆ ಮೊದಲುಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರದ ಅಂಚಿನಲ್ಲಿ ಹೇರಳವಾಗಿ ಸಿಗುತ್ತಿತ್ತು. ಆದರೆ ಇತ್ತೀಚಿನದಿನಗಳಲ್ಲಿ ಸಮುದ್ರಕೊರೆತ, ಪರಿಸರನಾಶದಿಂದಾಗಿ ಅಲ್ಪಾವಧಿ ಬೆಳೆಯಾಗಿಮಾರ್ಪಟ್ಟಿದೆ. ಈಗ ಭಟ್ಕಳದಿಂದಅಂಕೋಲಾವರೆಗೆ ಮಾತ್ರ ಸಿಗುತ್ತಿದ್ದು,ವರ್ಷಕ್ಕೆ8-10 ಸಾವಿರ ಲೀ. ಎಣ್ಣೆತೆಗೆಯುವಷ್ಟು ಮಾತ್ರ ಲಭ್ಯವಿದೆ. ಹಾಗಾಗಿ ಹೊನ್ನೆ ಬೆಳೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳುವ ಸವಾಲುಕೂಡಾ ನಮ್ಮ ಮುಂದಿದೆ’ ಎನ್ನುತ್ತಾರೆ ಎಂ.ಪಿ. ಹೆಗಡೆ.

ಹೊರರಾಜ್ಯಗಳಿಗೂ ರಫ್ತು ಸದ್ಯ ಮಾಗೋಡಿನಲ್ಲಿರುವ ಇವರ ಘಟಕದಲ್ಲಿ ವರ್ಷಕ್ಕೆ ಸರಾಸರಿ 25-30 ಸಾವಿರ ಸೋಪ್‌ಗಳು ಉತ್ಪಾದನೆ ಆಗುತ್ತಿವೆ.ಹೊನ್ನೆಎಣ್ಣೆಯನ್ನು ತುಳಸಿ, ಲಿಂಬು,ದಾಸವಾಳ, ಬೇವು, ಅರಿಶಿಣದೊಂದಿಗೆಮೌಲ್ಯವರ್ಧನೆ ಮಾಡಿ ಐದು ವಿಧಧಸೋಪ್‌ ತಯಾರಿಸುತ್ತಿದ್ದಾರೆ. ಈ ಸೋಪ್‌ ಗಳು ಹೊನ್ನಾವರ, ಉತ್ತರಕನ್ನಡಮಾತ್ರವಲ್ಲದೇ ಬೆಂಗಳೂರು,ಕೇರಳ, ಆಂಧ್ರಪ್ರದೇಶ, ಗೋವಾ ಮತ್ತು ಮುಂಬೈಗಳಿಗೂ ರಫ್ತಾಗುತ್ತಿವೆ. “ಹೊನ್ನೆಕಾಂತಿ ಸೋಪ್‌ಗಳು ಆರೋಗ್ಯಕ್ಕೆ ಪೂರಕವಾಗಿವೆ.ಕೂದಲಿನ ರಕ್ಷಣೆಗೆ, ತುರಿಕೆಗೆ, ಚರ್ಮ ರಕ್ಷಣೆಗೆ ಇವನ್ನು ಬಳಸಬಹುದು. “ಕಲ್ಪಕಾಂತಿ’ಯನ್ನು ಹೊನ್ನೆಕಾಂತಿ ಉತ್ಪನ್ನಗಳ ಬದಲಾಗಿ ಕೂಡಾ ಬಳಸಬಹುದು. ಗ್ರಾಹಕರಿಂದಲೂ ಉತ್ತಮ ಬೇಡಿಕೆ ಬರುತ್ತಿದೆ. ಎನ್ನುತ್ತಾರೆ ಎಂ.ಪಿ. ಹೆಗಡೆ. ಈ ಸೋದರರು. ಸಂಪರ್ಕಕ್ಕೆ:9113992132, 9480039036.

ಎಂ.ಎಸ್‌.ಶೋಭಿತ್‌, ಮೂಡ್ಕಣಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.