ಶಿರ್ವ: ಸ್ಕೂಟಿಗೆ ಕಂಟೈನರ್ ಢಿಕ್ಕಿ; ಸವಾರ ಗಂಭೀರ
Team Udayavani, Nov 24, 2020, 10:47 AM IST
ಶಿರ್ವ: ಇಲ್ಲಿನ ಮುಖ್ಯ ರಸ್ತೆಯ ನ್ಯಾರ್ಮ ಸೇತುವೆಯ ಬಳಿ ಶಿರ್ವದಿಂದ ಉಡುಪಿ ಕಡೆ ಹೋಗುತ್ತಿದ್ದ ಕಂಟೈನರ್ ಎದುರಿನಿಂದ ಬರುತ್ತಿದ್ದ ಸ್ಕೂಟಿಗೆ ಢಿಕ್ಕಿ ಹೊಡೆದು ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ನ. 23ರ ರಾತ್ರಿ ನಡೆದಿದೆ.
ಶಿರ್ವದಿಂದ ಉಡುಪಿ ಕಡೆ ಹೋಗುತ್ತಿದ್ದ ಕಂಟೈನರ್ ನ್ಯಾರ್ಮ ಇಳಿಜಾರಿನಲ್ಲಿ ಹೋಗುವಾಗ ಓವರ್‌ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಶಿರ್ವ ಮಸೀದಿ ಕಡೆ ಹೋಗುವ ಸ್ಕೂಟಿಗೆ ಢಿಕ್ಕಿ ಹೊಡೆದು ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದರು. ಚಾಲಕ ಬ್ರೇಕ್ ಹಾಕಿದರೂ ಕಂಟೈನರ್‌ನ ಬಂಪರ್‌ಗೆ ಸಿಲುಕಿಕೊಂಡ ಸ್ಕೂಟಿಯನ್ನು ಸುಮಾರು 50 ಮೀ. ದೂರ ಎಳೆದುಕೊಂಡು ಹೋಗಿದೆ.
ಸ್ಕೂಟಿ ಸವಾರ ಶಿರ್ವ ಮಸೀದಿ ಬಳಿಯ ನಿವಾಸಿ ಜಾನ್ಸನ್ ಡಿಸೋಜಾ (34) ರಿಗೆ ತಲೆಗೆ ಗಂಭೀರ ಗಾಯವಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹಸವಾರ ರೋಹನ್ ಡಿಸೋಜಾ (14) ಕೂಡಾ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ:ಮಂಗಳೂರು: ಫಳ್ನೀರ್ ಬಳಿ ಯುವಕನ ಮೇಲೆ ತಲವಾರು ದಾಳಿ
ಸವಾರ ಮತ್ತು ಸಹಸವಾರ ಅಣ್ಣ ತಮ್ಮಂದಿರ ಮಕ್ಕಳಾಗಿದ್ದು, ಜಾನ್ಸನ್ ಡಿಸೋಜಾ 2-3 ದಿನಗಳ ಹಿಂದೆ ವಿದೇಶದಿಂದ ಬಂದಿದ್ದರು ಎನ್ನಲಾಗಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಘಾತ ವಲಯ
ಆತ್ರಾಡಿ-ಶಿರ್ವ-ಬಜ್ಪೆ ರಸ್ತೆ ವಿಸ್ತರಣೆ ವೇಳೆ ಶಿರ್ವ ನ್ಯಾರ್ಮ ಸೇತುವೆ ಪುನರ್‌ನಿರ್ಮಾಣಗೊಂಡಿದ್ದು, ತಿರುವಿನಿಂದ ಕೂಡಿದ ರಸ್ತೆ ಕಾಮಗಾರಿಯಿಂದಾಗಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಸರಿಯಾಗಿ ಕಾಣದೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಕಳೆದ 25 ದಿನಗಳ ಹಿಂದೆ ಇದೇ ಜಾಗದಲ್ಲಿ ಕಲ್ಲು ಸಾಗಾಟದ ಟೆಂಪೋವೊಂದು ಪಲ್ಟಿಯಾಗಿ ಬಿದ್ದಿದ್ದು, ಚಾಲಕ ಪವಾಡ ಸದೃಶವಾಗಿ ಬದುಕುಳಿದಿದ್ದರು. ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಶಿರ್ವದ ನಾಗರಿಕರು ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.