ತೆಲುಗಿನಲ್ಲೂ ಬಿಡುಗಡೆಯಾಗಲಿದೆ ಪವರ್ ಸ್ಟಾರ್ ‘ಯುವರತ್ನ’
Team Udayavani, Nov 24, 2020, 12:49 PM IST
“ಯುವರತ್ನ’ ಸಿನಿಮಾ ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆಯನ್ನು ಅಭಿಮಾನಿಗಳುಕೇಳುತ್ತಿದ್ದರೂ, ಈ ಬಗ್ಗೆ ಚಿತ್ರತಂಡ ಎಲ್ಲೂ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಈ ಬಗ್ಗೆ “ಕಾದು ನೋಡಿ’ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು. ಆದರೆ ಇದೀಗ, “ಯುವರತ್ನ’ ತೆಲುಗಿನಲ್ಲಿ ತೆರೆ ಕಾಣುವುದು ಬಹುತೇಕ ಖಚಿತವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ತೆಲುಗು ನಿರ್ದೇಶಕ ಪುರಿ ಜಗನ್ನಾಥ್, “ಕನ್ನಡ ಕಂಠೀರವ ಶ್ರೀರಾಜಕುಮಾರ್ ಅವರ ವಾರಸ್ದಾರ, ನನ್ನ ಹೀರೋ. ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಪ್ರೀತಿಸುತ್ತೇನೆ. ತೆಲುಗು ಚಿತ್ರರಂಗಕ್ಕೆ ಸ್ವಾಗತ’ಎಂದು “ಯುವರತ್ನ’ ಚಿತ್ರದ ತೆಲುಗು ಪೋಸ್ಟರ್‌ನ ಹಂಚಿಕೊಂಡಿದ್ದಾರೆ. “ಯುವರತ್ನ’ ಸಿನಿಮಾತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ “ಯುವರತ್ನ’ ಚಿತ್ರ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ನಟ ಪುನೀತ್ ರಾಜ್‌ಕುಮಾರ್ ಕೂಡಾ ಟ್ವೀಟ್ ಮೂಲಕ ಚಿತ್ರ ತೆಲುಗಿನಲ್ಲೂ ತೆರೆಕಾಣುತ್ತಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಡಿ.2ಕ್ಕೆ ಮೊದಲ ಹಾಡು :
ಪವರ್‌ಸ್ಟಾರ್ ಪುನೀತ್ ರಾಜುಕುಮಾರ್ ಅಭಿನಯದ ಹೊಸಚಿತ್ರ “ಯುವರತ್ನ’ ಚಿತ್ರದ ಚಿತ್ರದ ಮೊದಲ ಹಾಡು ಡಿ.2ರಂದು ಅಭಿಮಾನಿಗಳ ಮುಂದೆ ತರಲು ಯೋಜಿಸಿದೆ ಚಿತ್ರತಂಡ. ಈ ಬಗ್ಗೆ ಟ್ವಿಟ್ಟರ್ ಮೂಲಕ ಚಿತ್ರದ ಮಾಹಿತಿ ನೀಡಿರುವ ನಿರ್ದೇಶಕ ಸಂತೋಷ್ ಆನಂದರಾಮ್, ಚಿತ್ರದ ಹಾಡಿನ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ನಟ ಪುನೀತ್ ರಾಜುಕುಮಾರ್ ಕೂಡ ನಿರ್ದೇಶಕ ಸಂತೋಷ್ ಆನಂದರಾಮ್ ಮಾಡಿದ್ದ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿದ್ದು, “ಯುವರತ್ನ’ನಮೊದಲ ಹಾಡು ರಿಲೀಸ್‌ಗೆ ರೆಡಿ ಎಂದಿದ್ದಾರೆ.
ಅದ್ಧೂರಿ ತಾರಾಗಣ :”ಯುವರತ್ನ’ ಚಿತ್ರದ ಹಾಡುಗಳಿಗೆ ತಮನ್ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆ ಪುನೀತ್ ರಾಜಕುಮಾರ್ ಅಭಿನಯದ “ರಾಜಕುಮಾರ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದ ನಿರ್ದೇಶಕ ಸಂತೋಷ್ ಆನಂದ್‌ರಾಮ್ “ಯುವರತ್ನ’ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪುನೀತ್ ರಾಜಕುಮಾರ್‌ಗೆ ನಾಯಕಿಯಾಗಿ ತಮಿಳು ನಟಿ ಸಯೇಷಾ ಸೈಗಲ್‌ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.