ತೆರಿಗೆ ವಂಚನೆ: ವಾಹನ ಮಾಲಿಕರ ವಿರುದ್ಧ ಕ್ರಮ
Team Udayavani, Nov 24, 2020, 2:55 PM IST
ನೆಲಮಂಗಲ: ಇಲಾಖೆಗೆ ಕೋಟ್ಯಂತರ ರೂ. ತೆರಿಗೆ ವಂಚನೆ ಮಾಡುತ್ತಿರುವ ಮಾಲಿಕರ ವಿರುದ್ಧ ಕ್ರಮಕೊಳ್ಳಲು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಸಾರಿಗೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದರು.
ನಗರ ಸಮೀಪದ ನೆಲಮಂಗಲ ಪ್ರಾದೇಶಿಕ ಸಾರಿಗೆಕಚೇರಿಯ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೆರಿಗೆ ಪಾವತಿ ಮಾಡಿದ ಬಸ್ ನೋಂದಣಿ ಫಲಕವನ್ನು ಮತ್ತೂಂದು ಬಸ್‌ಗೆ ಅಳವಡಿಸಿ ಎರಡು ಬಸ್‌ಗಳನ್ನುಇಲಾಖೆಅಧಿಕಾರಿಗಳಿಗೆ ತಿಳಿಯದಂತೆಕರ್ನಾಟಕ,ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು, ತೆರಿಗೆ ವಂಚನೆ ಮಾಡುತ್ತಿದ್ದ 7 ಬಸ್‌ಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಪ್ರಕರಣದ ಬಗ್ಗೆ ಇಲಾಖೆ ಗಂಭೀರವಾಗಿಪರಿಗಣಿಸಿದ್ದು, ವಾಹನ ನೋಂದಣಿಯನ್ನು ಡಿಜಿಟಲೀ ಕರಣ ಮಾಡಿದಂತೆ ಶೀಘ್ರದಲ್ಲಿ ವಾಹನಗಳ ತೆರಿಗೆಯ ಸಂಪೂರ್ಣ ಮಾಹಿತಿಯನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಇಲಾಖೆಅಧಿಕಾರಿಗಳಿಗೆ ಉಪಯೋಗವಾಗಲಿದೆ ಎಂದು ವಿವರಿಸಿದರು.
7 ಬಸ್ 41 ಲಕ್ಷ ರೂ.ವಂಚನೆ: ನಕಲು ನೋಂದಣಿ ಫಲಕ ಹಾಕಿಕೊಂಡು ಸಂಚರಿಸುತ್ತಿದ್ದ ನಾಲ್ಕು ಬಸ್‌ಗಳು ವರ್ಷಕ್ಕೆ25,60,000 ಹಾಗೂ 3 ಬಸ್‌ಗಳು14,80,000ತೆರಿಗೆ ಹಣ ಪಾವತಿ ಮಾಡಬೇಕಾಗಿದೆ. ಇಲಾಖೆಗೆ ವರ್ಷಕ್ಕೆ ಕೇವಲ 7 ಬಸ್‌ಗಳಿಂದ 41 ಲಕ್ಷ ರೂ. ತೆರಿಗೆ ವಂಚನೆ ಮಾಡಿದ್ದು, ಮಾಲಿಕರಿಂದ ವಸೂಲಿ ಮಾಡುವಂತೆ ಆಯುಕ್ತರು ಸೂಚನೆ ನೀಡಿದ್ದಾರೆ. 2 ಬಸ್‌ಗಳಲ್ಲಿ ಒಂದೇ ನೋಂದಣಿ ಫಲಕ: ಆನಂದ್
ಸಂಸ್ಥೆಯ ನಾಗಲ್ಯಾಂಡ್ ನೋಂದಣಿಯ ಎನ್‌ಎಲ್ 01, ಬಿ 1794 ನಂಬರ್‌ನ ಬಸ್ ಅನ್ನು ನ.17ರಂದು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆದರೆ, ಅದೇ ನಂಬರ್‌ಬಸ್ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ್ದನ್ನು ಗಮನಿಸಿದ ಅಧಿಕಾರಿಗಳು, ಹೊಸೂರು ರಸ್ತೆಯಲ್ಲಿ ಎನ್‌ಎಲ್ 1,ಬಿ1794 ನಂಬರ್‌ನಮತ್ತೂಂದು ಬಸ್ ವಶಕ್ಕೆ ಪಡೆದುಕೊಂಡು ತನಿಖೆ ಮಾಡಿದಾಗ ನಕಲಿ ದಾಖಲೆ ಸೃಷ್ಟಿಸಿಕೊಂಡಿರುವುದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಅಪರ ಸಾರಿಗೆ ಆಯುಕ್ತ ನರೇಶ್ ಹೊಳ್ಕರ್, ಜಂಟಿಸಾರಿಗೆ ಆಯುಕ್ತಕೆ.ಟಿ ಹಾಲಪ್ಪಸ್ವಾಮಿ,ಓಂಕಾರೇಶ್ವರಿ, ಸಾರಿಗೆ ಅಧಿಕಾರಿ ಗುರುಮೂರ್ತಿ, ಹಿರಿಯ ಮೋಟಾರ್ ವಾಹನ ನಿರೀಕ್ಷಕ ಎಚ್.ರಾಜಣ್ಣ, ಕೃಷ್ಣನಂದ್, ಧನ್ವಂತರಿ ಒಡೆಯರ್, ಶಿವಪ್ರಸಾದ್, ಇನ್‌ಸ್ಪೆಕ್ಟರ್ ಎಂ.ಎನ್. ಸುಧಾಕರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.