ಸಂತಾನ ಹರಣ ಚಿಕಿತ್ಸೆಗೆ ಪುರುಷರ ಹಿಂದೇಟು
Team Udayavani, Nov 24, 2020, 3:56 PM IST
ಮೈಸೂರು: ಜನಸಂಖ್ಯಾ ಸ್ಫೋಟ ತಡೆಯುವ ಸಂತಾನ ಹರಣ ಚಿಕಿತ್ಸೆ (ಎನ್‌ಎಸ್‌ವಿ)ಗೆ ಒಳಪಡುತ್ತಿರುವ ಪುರುಷರ ಸಂಖ್ಯೆ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು,ಈ ವರ್ಷ ಕೋವಿಡ್ ಆರ್ಭಟದಿಂದಾಗಿ ಕೇವಲ ಇಬ್ಬರು ಮಾತ್ರ ಎನ್‌ಎಸ್‌ವಿಗೆ ಒಳಪಟ್ಟಿದ್ದಾರೆ.
ಎನ್‌ಎಸ್‌ವಿ ಚಿಕಿತ್ಸೆ ಮಾಡಿಸಿಕೊಂಡರೆ ಲೈಂಗಿಕ ಹಾಗೂ ದುಡಿಯುವ ಶಕ್ತಿ ಕುಂದುತ್ತದೆ ಎಂಬ ಅಪನಂಬಿಕೆಗೆ ಕಟ್ಟು ಬಿದ್ದಿರುವ ಪುರುಷರು ಎನ್‌ಎಸ್‌ವಿಗೆ ಹಿಂದೇಟು ಹಾಕುತ್ತಿದ್ದಾರೆ. ಎನ್‌ಎಸ್‌ವಿ ವಿಚಾರ ಎತ್ತಿದರೆ ಪುರುಷರು ಮಾರು ದೂರ ಓಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಂತಾನ ಹರಣ ಚಿಕಿತ್ಸೆಗೆ ಒಳಪಡುತ್ತಾರೆ. ಮಹಿಳೆಯರಲ್ಲಿ ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿದೆ. ಆದರೆ, ಪುರುಷರು ಇನ್ನೂ ಮೂಢನಂಬಿಕೆಗೆ ಜೋತು ಬಿದ್ದಿದ್ದು,ಕುಟುಂಬ ಯೋಜನೆಯಲ್ಲಿ ಪುರುಷರು ಮಹಿಳೆಯರಷ್ಟೇ ಪ್ರಧಾನ ಪಾತ್ರ ವಹಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಎನ್‌ಎಸ್‌ವಿ (ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ) ಅನುಷ್ಠಾನದಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿ ತುಂಬಾ ಹಿಂದಿದೆ. ಪ್ರತಿ ತಿಂಗಳು ಜಿಲ್ಲೆಯಲ್ಲಿ ಒಂದರಿಂದ ಒಂದೂ ವರೆ ಸಾವಿರದಷ್ಟು ಮಹಿಳೆಯರು ಸಂತಾನ ಹರಣ ಚಿಕಿತ್ಸೆಗೆ ಒಳಪಡುತ್ತಿ ದ್ದಾರೆ. ಆದರೆ, ಈ ಪೈಕಿ ಪುರುಷರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ.
ಜಿಲ್ಲೆಯಲ್ಲಿ 2015-14 ನೇ ಸಾಲಿನಲ್ಲಿ 30 ಮಂದಿ,2016-17ನೇ ಸಾಲಿನಲ್ಲಿ20,2017- 18ನೇ ಸಾಲಿನಲ್ಲಿ 20 ಮಂದಿ, 2018-19ರಲ್ಲಿ4 ಮಂದಿ, 2019-20ರಲ್ಲಿ 16 ಮಂದಿ ಪುರುಷರು ಮಾತ್ರ ಸಂತಾನ ಹರಣ ಚಿಕಿತ್ಸೆ ಒಳಪಟ್ಟಿದ್ದಾರೆ. ಈ ಬಾರಿ ಕೇವಲ ಇಬ್ಬರು ಮಾತ್ರ ಈ ಚಿಕಿತ್ಸೆಗೆ ಒಳಗಾಗಿದ್ದಾರೆ.
ಇಂದಿನಿಂದ ಸಪ್ತಾಹ: ಜನರಲ್ಲಿ ಪುರುಷರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆ ಯಾದ್ಯಂತ ನ.24 (ಇಂದಿನಿಂದ) ಏಳು ದಿನದ ವರೆಗೆ ಪುರುಷರ ಸಂತಾನಹರಣ ಶಸ್ತ್ರ ಚಿಕಿತ್ಸೆ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಬಳಿಕ ಸೇವಾ ಸಪ್ತಾಹ ನಡೆಯಲಿದೆ.
ಎನ್‌ಎಸ್‌ವಿ ಅಂದರೇನು? : ನೋ ಸ್ಕಾಲ್‌ಪೆಲ್ ವ್ಯಾಸೆಕ್ಟಮಿ ಚಿಕಿತ್ಸೆಯು ಅತ್ಯಂತ ಸರಳ ಚಿಕಿತ್ಸೆ. ಈ ಚಿಕಿತ್ಸಾ ಪದ್ಧತಿಯಿಂದ ವೃಷಣದಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ಸಂಭೋಗಕ್ರಿಯೆಯಲ್ಲಿ ಮಹಿಳೆಯ ಗರ್ಭಾಶಯ ತಲುಪದಂತೆ ಮಾಡುತ್ತದೆ. ಈ ಚಿಕಿತ್ಸೆಯಲ್ಲಿ ವೃಷಣದಿಂದ ವೀರ್ಯಾಣು ಸಾಗಿಸುವ ನಾಳ ಕತ್ತರಿಸಿ ಅದರ ಎರಡೂ ಕೊನೆಯ ಭಾಗಗಳನ್ನು ಗಂಟು ಹಾಕಲಾಗುವುದು. ಇದರಿಂದ ವೀರ್ಯಾಣುಗಳು ವೃಷಣದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಇದು ಗಾಯ ಮತ್ತು ಹೊಲಿಗೆ ಇಲ್ಲದ ಚಿಕಿತ್ಸೆಯಾಗಿದ್ದು,ಕೇವಲ 5 ರಿಂದ10 ನಿಮಿಷದಲ್ಲಿ ಚಿಕಿತ್ಸೆ ಮುಗಿದು ಕೇವಲ ಅರ್ಧಗಂಟೆಯಲ್ಲಿ ಮನೆಗೆ ಹೋಗಬಹುದು. ಎನ್‌ಎಸ್‌ವಿ ಚಿಕಿತ್ಸೆಯಿಂದ ಲೈಂಗಿಕ ಹಾಗೂ ದೈಹಿಕ ಶಕ್ತಿಕುಂದುವುದಿಲ್ಲ. ಸುಲಭದ ಕೆಲಸವಾಗಿದ್ದರೆ 48 ಗಂಟೆಗಳ ನಂತರ ಆರಂಭಿಸಬಹುದು. ಸೈಕಲ್ ತುಳಿಯುವುದು ಅಥವಾ ಇಂತಹದೇ ಬೇರೆಕೆಲಸಗಳಾಗಿದ್ದಲ್ಲಿ 7 ದಿನಗಳ ನಂತರ ಮಾಡಬಹುದುಎಂದು ವೈದ್ಯರು ಹೇಳುತ್ತಾರೆ.
ಹಿಂದೇಟು ಹಾಕಲು ಕಾರಣವೇನು ? : ಎನ್‌ಎಸ್‌ವಿಯಿಂದಲೈಂಗಿಕ ಹಾಗೂದುಡಿಯುವ ಶಕ್ತಿ ಕುಂದುತ್ತದೆ ಎಂಬತಪ್ಪು ತಿಳಿವಳಿಕೆ ಸಾಕಷ್ಟು ಮಂದಿಯಲ್ಲಿದೆ. ಚಿಕಿತ್ಸೆ ಮಾಡಿಸಿಕೊಂಡ ನೂರಾರು ಮಂದಿಯಲ್ಲಿ ಈ ರೀತಿಯ ಯಾವುದೇ ಲಕ್ಷಣಗಳು ಇದುವರೆಗೆ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಿದರೂಸಾಕಷ್ಟು ಮಂದಿ ನಿರಾಸಕ್ತಿ ತೋರಲು ಮತ್ತೂಂದು ಪ್ರಮುಖ ಕಾರಣ, ಅದೆಲ್ಲ ಮಹಿಳೆಯರಿಗೆ ಬಿಟ್ಟವಿಚಾರ ಎಂಬತಾತ್ಸರ ಭಾವನೆಯೂ ಇದೆ. ಈ ಭಾವನೆ ದೂರವಾಗಬೇಕಾಗಿದೆ.
ಎನ್‌ಎಸ್‌ವಿ ಚಿಕಿತ್ಸೆಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಜನರಿಗೆ ಚಿಕಿತ್ಸಾ ಪದ್ಧತಿ ಕುರಿತು ಸಂಪೂರ್ಣ ಮಾಹಿತಿ ಇದ್ದರೂ ಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ವರ್ಷ ಇಲ್ಲಿಯವರೆಗೆ ಇಬ್ಬರು ಮಾತ್ರ ಚಿಕಿತ್ಸೆಗೆ ಒಳಪಟ್ಟಿದ್ದಾರೆ. ಇಂದಿನಿಂದ ಈ ಬಗ್ಗೆ ಜಾಗೃತಿ ಮೂಡಿಸಲು ಸಪ್ತಾಹ ಹಮ್ಮಿಕೊಳ್ಳಲಾಗಿದೆ. –ಡಾ.ಪಿ.ರವಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ.
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.