ಹುತಾತ್ಮ ಮೇಜರ್ ಪತ್ನಿ ಈಗ ಲೆಫ್ಟಿನೆಂಟ್! ಪತಿ ಕೌಸ್ತುಭ್ ಕನಸು ಈಡೇರಿಸಿದ ಕನ್ನಿಕಾ
49ವಾರ ಕಠಿಣ ತರಬೇತಿ ಮುಗಿಸಿ ಸೇನೆ ಸೇರಿದ ದಿಟ್ಟೆ
Team Udayavani, Nov 24, 2020, 8:25 PM IST
ಚೆನ್ನೈ: “ನಾನು ನನ್ನ ಜೀವಮಾನದಲ್ಲಿ 100 ಮೀಟರ್ ದೂರ ಓಡಿದವಳೇ ಅಲ್ಲ. ಆದರೆ, ಸೇನೆಗೆ ಸೇರಿದ ಮೇಲೆ ಈಗ 40 ಕಿ.ಮೀ. ಓಡುತ್ತಿದ್ದೇನೆ!’
ಕಾಶ್ಮೀರದಲ್ಲಿ ಉಗ್ರರ ಗುಂಡುಗಳಿಗೆ ಎದೆಗೊಟ್ಟು ವೀರಮರಣ ಅಪ್ಪಿದ ಮೇಜರ್ ಕೌಸ್ತುಭ್ ಪತ್ನಿ ಕನ್ನಿಕಾ ರಾಣೆ ಅವರ ಸ್ಫೂರ್ತಿದಾಯಕ ಮಾತುಗಳಿವು! ಅಂದಹಾಗೆ, 30 ವರ್ಷದ ಈಕೆ ಈಗ ಸೈನ್ಯದಲ್ಲಿ ಲೆಫ್ಟಿನೆಂಟ್! ಈ ಹುದ್ದೆಗೆ ಆಯ್ಕೆಯಾಗುವ ಮೂಲಕ ಕನ್ನಿಕಾ, ಪತಿಯ ಆಸೆ ಈಡೇರಿಸಿದ್ದಾರೆ.
ಸಾಹಸಗಾಥೆ: ಮೇಜರ್ ಕೌಸ್ತುಭ್ ಕಾಶ್ಮೀರದಲ್ಲಿ ಹುತಾತ್ಮರಾದಾಗ ಮಹಾರಾಷ್ಟ್ರದ ಭಯಾಂಡರ್ ಪಾಲಿಕೆ ಕನ್ನಿಕಾ ಅವರಿಗೆ ಕೈತುಂಬಾ ಸಂಬಳವುಳ್ಳ ಉದ್ಯೋಗದ ಆಫರ್ ನೀಡಿತ್ತು. ಆದರೆ, ಅದನ್ನು ನಿರಾಕರಿಸಿದ ಕನ್ನಿಕಾ ಛಲಬಿಡದ ತ್ರಿವಿಕ್ರಮನಂತೆ ದೈಹಿಕವಾಗಿ ಫಿಟ್ ಆಗುವತ್ತ ಗಮನ ನೆಟ್ಟರು. “ಹುತಾತ್ಮ ಯೋಧರ ಪತ್ನಿಯರ ಶ್ರೇಣಿ’ಯಲ್ಲಿ ಸರ್ವೀಸ್ ಸೆಲೆಕ್ಷನ್ ಬೋರ್ಡ್ (ಎಸ್‌ಎಸ್‌ಬಿ) ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಪಾಸ್ ಮಾಡಿ, ಸೇನೆಗೆ ಪ್ರವೇಶ ಪಡೆದರು.
ಇದನ್ನೂ ಓದಿ: ಮೂಡುಬಿದ್ರೆ ಶಾಂಭವಿ ನದಿಯಲ್ಲಿ ನಾಲ್ವರು ಮುಳುಗಿದ ಪ್ರಕರಣ : ಇಬ್ಬರ ಮೃತದೇಹ ಪತ್ತೆ
“49 ವಾರಗಳ ಕಠೊರ ತರಬೇತಿ ಮುಗಿಸಿ ಈ ಹುದ್ದೆಗೆ ಏರಿದ್ದೇನೆ. ದೈಹಿಕ ಸಹಿಷ್ಣುತೆಯನ್ನು ಜೀವನಸ್ಫೂರ್ತಿ, ದೃಢ ನಿಶ್ಚಯ, ಸ್ಥಿತಿಸ್ಥಾಪಕತ್ವ ಮಾರ್ಗದಿಂದ ಮಾತ್ರ ಮೈಗೂಡಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಕನ್ನಿಕಾ.
ಅತ್ತೆ ಮೆಚ್ಚುಗೆ: ಚೆನ್ನೈನ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ (ಒಟಿಎ) 230 ಕೇಡೇಟ್‌ಗಳೊಂದಿಗೆ ಕನ್ನಿಕಾ ಪದಗ್ರಹಣ ಸ್ವೀಕರಿಸಿದ್ದಾರೆ. ಸೊಸೆಯನ್ನು ಸೇನೆಯ ಯೂನಿಫಾರಂನಲ್ಲಿ ನೋಡಲು ಹಂಬಲಿಸುತ್ತಿದ್ದ ಅತ್ತೆ ಜ್ಯೋತಿ, “ಕನ್ನಿಕಾಳ ಪದಗ್ರಹಣ ನನ್ನ ಪುತ್ರ ಕೌಸ್ತುಭ್‌ನ 2011ರ ಸಮಾರಂಭವನ್ನು ನೆನಪಿಸಿತು’ ಎಂದು ಹೆಮ್ಮೆಪಟ್ಟಿದ್ದಾರೆ.
An inspiration to all!!
She had collected the gallantry award on behalf of her husband, who had made the supreme sacrifice in the line of duty in 2018, in an investiture ceremony at Udhampur earlier this year.@adgpi @IaSouthern @CMOMaharashtra @airnewsalerts @DDNewsHindi pic.twitter.com/6u4RN3SFJc— PRO Defence Mumbai (@DefPROMumbai) November 21, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.