ಪ್ರತಿದಿನ ಗೊಬ್ಬರವಾಗುತ್ತಿದೆ 8 ಸಾವಿರ ಮನೆಗಳ ಹಸಿಕಸ
ನಗರದ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ
Team Udayavani, Nov 25, 2020, 4:09 AM IST
ಮಹಾನಗರ: ನಗರದಲ್ಲಿ ತ್ಯಾಜ್ಯ ನಿರ್ವಹಣೆಯು ಅತಿದೊಡ್ಡ ಸಮಸ್ಯೆ. ಈ ಹಿನ್ನೆಲೆಯಲ್ಲಿ ಶಾಶ್ವತ ಪರಿ ಹಾರ ಕಂಡುಕೊಳ್ಳುವ ಉದ್ದೇಶದಿಂದ ಪ್ರಾರಂಭಗೊಂಡಿರುವ ಹಸಿಕಸದಿಂದ ಗೊಬ್ಬರ ತಯಾರಿಸುವ ಯೋಜನೆಯೊಂದು ಇದೀಗ ಯಶಸ್ಸು ಕಾಣತೊಡಗಿದೆ.
ಪರಿಸರ ಪ್ರೇಮಿ ಜೀತ್ ಮಿಲನ್ ಅವರ ಮುಂದಾಳತ್ವದೊಂದಿಗೆ ಒಂದು ವರ್ಷದಿಂದ ಮಂಗಳೂರಿನ ವಸತಿ ಸಮುಚ್ಚಯಗಳಲ್ಲಿ ಸ್ವಯಂಚಾಲಿತ ಮತ್ತು ವಿದ್ಯುತ್ ಚಾಲಿತ ಕಸ ಸಂಸ್ಕರಣ ಬಿನ್‌ಗಳನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ 42 ಫ್ಲ್ಯಾಟ್‌ಗಳಲ್ಲಿ ಇದನ್ನು ಅಳವಡಿಸಲಾಗಿದ್ದು, 8 ಸಾವಿರ ಮನೆಗಳ ಅಡುಗೆ ಮನೆ ಹಸಿಕಸ ಗೊಬ್ಬರವಾಗಿ ಗಿಡ ಮರಗಳಿಗೆ ಆಹಾರವಾಗುತ್ತಿದೆ.
ಸುಮಾರು ಆರು ಫ್ಲ್ಯಾಟ್‌ಗಳಲ್ಲಿ ಎನ್‌ಜಿಟಿ ಅನುಮತಿಸಿದ ಎಲೆಕ್ಟ್ರಿಕಲ್ ಕಾಂಪೋ ಸ್ಟರ್ ಬಿನ್‌ಗಳನ್ನು ಹಾಕಲಾಗಿದೆ. ಇದಕ್ಕೆ ಪ್ರತಿದಿನ 2 ಎಚ್‌ಪಿ ಅಂದರೆ ಸುಮಾರು 4-5 ಯುನಿಟ್ ವಿದ್ಯುತ್ ಬೇಕಾಗುತ್ತದೆ. ಇದರಲ್ಲಿ ಪ್ರತಿದಿನ ಹಸಿ ಕಸ ಹಾಕಿದ ಆರು ಗಂಟೆಗಳಲ್ಲಿ ಗೊಬ್ಬರ ತಯಾರಾಗುತ್ತದೆ.
ದಿನಕ್ಕೆ 5 ಸಾವಿರ ಕೆಜಿ ಹಸಿಕಸ
ದಿನವೊಂದಕ್ಕೆ ಮಂಗಳೂರಿನ ಪ್ರತಿ ಮನೆಯಲ್ಲಿ ಕನಿಷ್ಠ 500 ಗ್ರಾಂ. ಹಸಿಕಸ ಉತ್ಪತ್ತಿಯಾಗುತ್ತದೆ. ಮಂಗಳೂರಿನಿಂದ ಪ್ರತಿದಿನ 350 ಟನ್ ತ್ಯಾಜ್ಯ ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ಗೆ ಹೋಗುತ್ತದೆ. ಇದರಿಂದ ಅಲ್ಲಿನ ನಿವಾಸಿಗಳೊಂದಿಗೆ ಪರಿಸರಕ್ಕೂ ಅಷ್ಟೇ ಹಾನಿ ಇದೆ. ಇದರ ಬದಲಾಗಿ ನಮ್ಮ ಮನೆಯ ಕಸವನ್ನು ನಾವೇ ಗೊಬ್ಬರವಾಗಿಸುವ ಪರ್ಯಾಯ ಕ್ರಮ ಇದು. ಈ ಬಿನ್ ಅಳವಡಿಸಿದ ಅನಂತರ ಪ್ರತಿದಿನ 5 ಸಾವಿರ ಕೆಜಿ ಹಸಿಕಸ ಗೊಬ್ಬರಕ್ಕಾಗಿ ಈ ಬಿನ್ ಸೇರುತ್ತದೆ. 100 ಕೆಜಿ ಹಸಿಕಸದಿಂದ 30 ಕೆಜಿಯಷ್ಟು ಗುಣಮಟ್ಟದ ಗೊಬ್ಬರ ಸಿಗುತ್ತದೆ. ಇದನ್ನು ಗಿಡ, ಮರಗಳಿಗೆ ಉಪಯೋಗಿಸಿದರೆ ಸಮೃದ್ಧವಾಗಿ ಬೆಳೆಯುತ್ತದೆ ಎನ್ನುತ್ತಾರೆ ಜೀತ್ ಮಿಲನ್.
ಏನಿದು ಕಸ ಸಂಸ್ಕರಣೆ ಬಿನ್?
ಹಸಿಕಸವನ್ನು ಗೊಬ್ಬರವನ್ನಾಗಿಸುವ ಹಸುರು ಬಣ್ಣದ ಜೈವಿಕ ಬಿನ್‌ಗಳಿದ್ದು, ಇದು ಸುಲಭ ಮಾದರಿಯ ಗೊಬ್ಬರ ತಯಾರಿಕೆ ಘಟಕ. ಟ್ವಿನ್ ಬಿನ್ ಪರಿಕಲ್ಪನೆಯಲ್ಲಿ ಇದನ್ನು ಅಳವಡಿಸಲಾಗಿದೆ. ಇಲ್ಲಿ ಎರಡು ಬಿನ್‌ಗಳಿದ್ದು, ಪ್ರತಿದಿನ ಒಂದು ಬಿನ್‌ಗೆ ಹಸಿ ಕಸ ಹಾಕಿ ಅದರ ಮೇಲೆ ಸ್ವಲ್ಪ ಮೈಕ್ರೋಸ್ಟ್ ಹಾಕಬೇಕು. ಮೊದಲ ಬಿನ್ ತುಂಬಿದ ಬಳಿಕ ಎರಡನೇ ಬಿನ್‌ಗೆ ಹಾಕಬೇಕು. ಮೊದಲ ಬಿನ್‌ನಲ್ಲಿ ತುಂಬಿದ ಹಸಿ ಕಸ 20 ದಿನಗಳಲ್ಲಿ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ.
ಅತ್ಯುತ್ತಮ ಗೊಬ್ಬರ
ನಗರದ ಪ್ರತಿಯೊಬ್ಬರೂ ತಮ್ಮ ಮನೆ, ಫ್ಲ್ಯಾಟ್, ಸಂಸ್ಥೆಗಳಲ್ಲಿ ಇದನ್ನು ಅಳವಡಿಸಿ ಕೊಂಡರೆ ಪಾಲಿಕೆಗೆ ಶೇ.80ರಷ್ಟು ಕಸದ ಹೊರೆ ಕಡಿಮೆಯಾಗುತ್ತದೆ. ಕೆಲವು ಫ್ಲ್ಯಾಟ್‌ಗಳಲ್ಲಿ ಅವರದೇ ಗಾರ್ಡನ್‌ಗಳಿಗೆ ಈ ಗೊಬ್ಬರವನ್ನು ಉಪಯೋಗಿಸುತ್ತಾರೆ. ಫ್ಲ್ಯಾಟ್ ಮಾಲಕರು ಗೊಬ್ಬರವನ್ನು ನನಗೆ ನೀಡಿದರೆ ಗಿಡಗಳಿಗೆ ಹಾಕುತ್ತೇನೆ. ಗಿಡಗಳು ಹುಲುಸಾಗಿ ಬೆಳೆಯುತ್ತವೆ.
-ಜೀತ್ ಮಿಲನ್, ಯೋಜನೆ ಮುಂದಾಳು
ಹಸಿ ಕಸದ ವಿಲೇವಾರಿ
ನಮ್ಮ ಫ್ಲ್ಯಾಟ್ನಲ್ಲಿ 16 ಮನೆಗಳಿವೆ. ಎಲ್ಲರೂ ಪ್ರತಿ ದಿನ ಹಸಿಕಸವನ್ನು ಪ್ರತ್ಯೇ ಕಿಸಿ ಇದಕ್ಕೆ ಹಾಕುತ್ತಾರೆ. ಸರಿಯಾಗಿ 21-24 ದಿನಗಳಲ್ಲಿ ಈ ಬಿನ್‌ನಲ್ಲಿದ್ದ ಕಸ ಗೊಬ್ಬರ ವಾಗಿ ಪರಿವರ್ತನೆಯಾಗುತ್ತದೆ. ಪ್ರತಿ ಶುಕ್ರವಾರ ಒಣಕಸವನ್ನು ಕಸ ವಿಲೇವಾರಿ ವಾಹನಕ್ಕೆ ನೀಡಲಾಗುತ್ತದೆ. ಈ ಬಿನ್ ಅಳವಡಿಸಿದ ಬಳಿಕ ಸಮಾಜಕ್ಕೆ ನಾವೂ ಕೊಡುಗೆ ನೀಡುತ್ತಿದ್ದೇವೆಂಬ ಖುಷಿ ಇದೆ.
-ಕವಿತಾ ಶೆಣೈ, ಸಾಯಿಪ್ರೇಮ್ ಅಪಾರ್ಟ್‌ಮೆಂಟ್ ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್‌ನಲ್ಲಿ ಅಪರಿಚಿತ ಶವ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.