ಅವಕಾಶ ಸಿಕ್ಕರಷ್ಟೇ ಅಭಿನಯಿಸುತ್ತೇನೆ, ಆದ್ರೆಯಾರ ಬಳಿಯೂ ಅಂಗಲಾಚಲಾರೆ…
Team Udayavani, Nov 25, 2020, 4:58 PM IST
“ಲೇ ಕರಿಯಾ, ನೀನೂ ಹೀರೋ ಆಗೋ’ ಅಂದಿದ್ದರು ಅಂಬರೀಶ್ “ಅಲ್ಲಿ ಇಲ್ಲಿ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾರ್ಟ್
ಮಾಡಿಕೊಂಡಿದ್ದ ನನಗೆ ಹೀರೋ ಆಗು ಅಂದವರು ರೆಬಲ್‌ಸ್ಟಾರ್ ಅಂಬರೀಶ್. ಒಂದು ಸಲ “ರೌಡಿ ಎಂಎಲ್ಎ’ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಆ ವೇಳೆ ಅಂಬರೀಶ್ “ಲೇಕರಿಯಾ, ನೀನೂ ಹೀರೋ ಆಗೋ’ ಅಂಥ ಅವರದ್ದೇ ಸ್ಟೈಲ್‌ನಲ್ಲಿ ಅಂದಿದ್ದರು.
ಆಮೇಲೆ ನಾನು “ಭಂಡ ನನ್ನ ಗಂಡ’ ಸಿನಿಮಾದಲ್ಲಿ ಹೀರೋ ಆದೆ. ಆ ಸಿನಿಮಾವನ್ನ ನಾನೇ ನಿರ್ಮಿಸಿದೆ. ಅದೇ ಸಿನಿಮಾದಲ್ಲಿ
ಅಂಬರೀಶ್ ಅವರಿಂದಲೇ ಗೆಸ್ಟ್ ರೋಲ್ ಮಾಡಿಸಿದ್ದಾರೆ. ಆದರೆ ಸಿನಿಮಾ ಮಾಡಿದ್ರೂ ಅದನ್ನ ರಿಲೀಸ್ ಮಾಡೋಕೆ ಕಷ್ಟವಾಯ್ತು.
ಆಗ ಮತ್ತೆ ಸಹಾಯಕ್ಕೆ ಬಂದಿದ್ದು ಅಂಬರೀಶ್. ಸಿನಿಮಾ ರಿಲೀಸ್ ಮಾಡೋಕೆ ಆಗ್ತಿಲ್ಲ ಅಂಥ ಮಧ್ಯರಾತ್ರಿ2 ಗಂಟೆಗೆ ಅಂಬರೀಶ್
ಮನೆಗೆ ಹೋಗಿದ್ದೆ. ಸರಿಯಾಗಿ ಬೈದುಕಳಿಸಿದರು. ಮರುದಿನ ಮಾಣಿಕ್ ಚಂದ್ ಎಂಬವರುಕರೆ ಮಾಡಿದರು. ಅಂಬರೀಶ್
ಹೇಳಿದ್ರು ಸಿನಿಮಾ ಮಾಡಿದಿರಂತೆ ಎಂದರು. ಅವರೇ ಕೈಯಿಂದ 5 ಲಕ್ಷ ಹಾಕಿ ಸಿನಿಮಾ ರಿಲೀಸ್ ಮಾಡಿದರು. ಆ ಸಿನಿಮಾ ಇತಿಹಾಸ ಬರೆಯಿತು. ಅಂದಿನಕಾಲದಲ್ಲೇ ಸುಮಾರು 1ಕೋಟಿ ಕಲೆಕ್ಷನ್ ಮಾಡಿತ್ತು. ಅವತ್ತು ಅಂಬರೀಶ್ ಮಾಡಿದ ಸಹಾಯ
ಮರೆಯುವಂತಿಲ್ಲ’ ಇದು ನಟ ಜಗ್ಗೇಶ್ ಮಾತು.
ಇದನ್ನೂ ಓದಿ:ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ಗೆಳೆಯರು ಒತ್ತಡ ಹಾಕದ್ದಾರೆ: ರಮೇಶ್ ಜಾರಕಿಹೊಳಿ
ಕನ್ನಡ ಚಿತ್ರರಂಗಕ್ಕೆ ನಟನಾಗಿ ಕಾಲಿಟ್ಟ ಜಗ್ಗೇಶ್, ಚಿತ್ರರಂಗದಲ್ಲಿ ನಲವತ್ತು ವರ್ಷಗಳ ಸಿನಿ ಯಾನವನ್ನು ಯಶಸ್ವಿಯಾಗಿ
ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ತಮ್ಮ ಸಿನಿಮಾ ಜರ್ನಿಯಲ್ಲಿ ಸಹಾಯ ಮಾಡಿದವರನ್ನು ಸ್ಮರಿಸುವ ಸಲುವಾಗಿ,
ಚಿತ್ರರಂಗದಲ್ಲಿ ನಾಲ್ಕು ದಶಕಗಳ ಅನುಭವವನ್ನು ಮೆಲುಕು ಹಾಕುವ ಸಲುವಾಗಿ ಜಗ್ಗೇಶ್ ಮಂಗಳವಾರ ಮಾಧ್ಯಮಗಳ ಮುಂದೆ ಬಂದಿದ್ದರು. ಇದೇ ವೇಳೆ ಮಾತನಾಡಿದ ಜಗ್ಗೇಶ್, ಚಿತ್ರರಂಗದಲ್ಲಿ ತಾವುಕಂಡ ಅನೇಕ ಏಳು-ಬೀಳುಗಳನ್ನು ಮೆಲುಕು ಹಾಕಿದರು.
“ನನ್ನ ಸಿನಿಮಾ ಜೀವನದಲ್ಲಿ ದೊಡ್ಡ ತಿರುವುಕೊಟ್ಟ ಎರಡು ಪಾತ್ರಗಳು ಅಂದ್ರೆ, ಒಂದು “ರಣರಂಗ’ ಮತ್ತೂಂದು “ಕೃಷ್ಣ ನೀ
ಕುಣಿದಾಗ’ ಸಿನಿಮಾಗಳದ್ದು. “ರಣರಂಗ’ ಸಿನಿಮಾಕ್ಕೆ ಅವಕಾಶಕೊಡಿಸಿದವರು ಶಿವರಾಜಕುಮಾರ್. ನನ್ನ ಮೇಲಿನ ಪ್ರೀತಿಯಿಂದ, ಬೇರೆಯವರಿಗೆ ಫಿಕ್ಸ್ ಆಗಿದ್ದ ರೋಲ್ ಅನ್ನು ಬದಲಿಸಿ ನನಗೆಕೊಡಿಸಿದರು ಶಿವಣ್ಣ. ಮತ್ತೂಂದು “ಕೃಷ್ಣ ನೀಕುಣಿದಾಗ’ ಚಿತ್ರದಲ್ಲಿ
ದ್ವಾರಕೀಶ್ ನೀಡಿದ ಪಾತ್ರ. ಅದಾದ ನಂತರ ಅಂಬರೀಶ್ ಅವರ “ರೌಡಿ ಎಂಎಲ್‌ಎ’ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು.
ಆನಂತರ ನಿಧಾನವಾಗಿ ಒಂದರ ಹಿಂದೊಂದು ಸಿನಿಮಾಗಳು ಸಿಗುತ್ತ ಹೋದವು’ ಎಂದರು ಜಗ್ಗೇಶ್.
ಅವಕಾಶ ಸಿಕ್ಕರಷ್ಟೇ ಅಭಿನಯಿಸುತ್ತೇನೆ, ಆದ್ರೆಯಾರ ಬಳಿಯೂ ಅಂಗಲಾಚಲಾರೆ:
ಸದ್ಯ ಚಿತ್ರರಂಗದಲ್ಲಿ ಸಿಗುತ್ತಿರುವ ಅವಕಾಶಗಳ ಬಗ್ಗೆ ಮಾತನಾಡಿದ ಜಗ್ಗೇಶ್, “ಈ ನಲವತ್ತು ವರ್ಷದ ಸಿನಿಮಾ ಪ್ರಯಾಣ ಖುಷಿ
ಕೊಟ್ಟಿದೆ. ಸಿನಿಮಾ ರಂಗಕ್ಕೆ ಬಂದಿರುವುದಕ್ಕೆ ನನಗೆ ತೃಪ್ತಿ ಇದೆ. ಆದರೆ ಈಗ ಅಭಿನಯಿಸಬೇಕು ಎಂಬ ಹಂಬಲ ಮೊದಲಿನಷ್ಟು ಇಲ್ಲ. ಒಳ್ಳೆಯ ಸಿನಿಮಾಗಳು, ಅವಕಾಶಗಳು ಸಿಕ್ಕರಷ್ಟೇ ಸಿನಿಮಾಗಳಲ್ಲಿ ಅಭಿನಯಿಸುತ್ತೇನೆ.
ಅವಕಾಶಕ್ಕಾಗಿ ಇನ್ನು ಯಾರ ಬಳಿಯೂ ಅಂಗಲಾಚಲಾರೆ. ಸಿನಿಮಾದ ಜೊತೆಗೆ ಬೇರೆ ಏನಾದ್ರೂ ಮಾಡಬೇಕು. ದೇವರುಕೊಟ್ಟ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಅನ್ನೋ ಆಲೋಚನೆ ಗಟ್ಟಿಯಾಗುತ್ತಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.