![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 25, 2020, 7:43 PM IST
ಇಸ್ಲಾಮಾಬಾದ್: ಪಾಕಿಸ್ಥಾನದ ಇಸ್ಲಾಮಾಬಾದ್ ‘ಝೂ’ ನಲ್ಲಿದ್ದ ಏಕೈಕ ಏಷ್ಯನ್ ಆನೆಯನ್ನು ಕಾಂಬೋಡಿಯಕ್ಕೆ ಸ್ಥಳಾಂತರ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.
“ಕಾವನ್’ ಹೆಸರಿನ ಈ ಆನೆಗೆ ಇಸ್ಲಾಮಾಬಾದ್ ಝೂ ನಲ್ಲಿ ನ. 24ರ ಮಂಗಳವಾರ ಏರ್ಪಡಿಸಿದ್ದ ವಿದಾಯ ಸಮಾರಂಭದಲ್ಲಿ, ಶುಭ ಹಾರೈಸಲು ಪಾಕಿಸ್ತಾನದ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮಂತ್ರಿಗಳು ಸೇರಿದ್ದು ವಿಶೇಷ.
ಪ್ರಾಣಿ ಹಕ್ಕುಗಳ ನ್ಯಾಯವಾದಿ ಮತ್ತು ಪಾಪ್ ತಾರೆಯಾದ ‘ಚೆರ್’ ಅವರ ಹಲವು ವರ್ಷಗಳ ಪರಿಶ್ರಮ ಮತ್ತು ಅಭಿಯಾನದ ಫಲವಾಗಿ ಕಾವನ್‌ಗೆ ಏಕಾಂಗಿ ಜೀವನದಿಂದ ಬಿಡುಗಡೆ ದೊರೆತಿದೆ. ಇದೀಗ ಆನೆಯನ್ನು ಇಸ್ಲಾಮಾಬಾದ್ ಝೂ ನಿಂದ ಕಾಂಬೋಡಿಯದ ಅಭಯಾರಣ್ಯಕ್ಕೆ ಏರ್‌ಲಿಫ್ಟ್ ಮಾಡಲು ಅನುಮತಿ ದೊರೆತಿದೆ.
ಕಾವನ್‌ನ ವಿದಾಯ ಕೂಟದಲ್ಲಿ ಪಾಕಿಸ್ತಾನದ ವಿವಿಧ ಇಲಾಖೆಯ ಮಂತ್ರಿಗಳು, ಶಾಸಕರು ಹಾಜರಿದ್ದು, ಬಲೂನು ಮತ್ತು ಆಕಾಶ ಬುಟ್ಟಿಯಿಂದ ಶೃಂಗರಿಸಿ ವಿದಾಯಸಮಾರಂಭವನ್ನು ಮತ್ತಷ್ಟು ವಿಶೇಷವಾಗಿಸಿದ್ದಾರೆ.
ಕಾವನ್‌ಗೆ ಸಂಗೀತ ಮತ್ತು ಪ್ರಾಣಿ ಪಾರುಗಾಣಿಕಾ ಸಂಸ್ಥೆ ಫೋರ್ ಪಾವ್ಸ್‌ನ ಪಶುವೈದ್ಯ ಅಮೀರ್ ಖಲಿಲ್ ಎಂದರೆ ತುಂಬಾ ಇಷ್ಟ. ಕಾವನ್ ಆನೆ ಕೋಪಗೊಂಡಾಗೆಲ್ಲ ಫ್ರಾಂಕ್ ಸಿನಾತ್ರಾ ಅವರ ಸಂಗೀತ ಕೇಳಿಸುವ ಮೂಲಕ ಖಲೀಲ್ ಸಮಾಧಾನಪಡಿಸುತ್ತಿದ್ದರು.
ಆನೆಯನ್ನು ಏರ್‌ಲಿಫ್ಟ್ ಮಾಡುವುದಕ್ಕೂ ಮೊದಲು ಪಾಕಿಸ್ತಾನದ ಜನರಿಗೆ ಕಾವನ್‌ಗೆ ಶುಭ ವಿದಾಯ ಹೇಳಲು ಅವಕಾಶ ಮಾಡಿಕೊಡಲಾಗಿದೆ. 4.8 ಟನ್ ತೂಕದ ಆನೆಯನ್ನು ಏರ್‌ಲಿಫ್ಟ್ ಮಾಡುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಬೇಕಾದ ತರಭೇತಿಯನ್ನು ಕಾವನ್‌ಗೆ ನೀಡಲಾಗಿದೆ ಎನ್ನುತ್ತಾರೆ ಫೋರ್ ಪಾವ್ಸ್‌ನ ವಕ್ತಾರ ಮರಿಯನ್ ಲೊಂಬಾರ್ಡ್.
10 ಗಂಟೆಗಳ ಹಾರಾಟ, ಸಣ್ಣ ಮತ್ತು ಅಧಿಕ ಪ್ರಮಾಣ ಶಬ್ದಕ್ಕೆ ಒಗ್ಗಿಕೊಳ್ಳುವಂತೆ ಶಸ್ತ್ರಸಜ್ಜಿತ ತರಬೇತುದಾರರ ತಂಡ ಕಾವನ್‌ಗೆ ಒಂದು ವಾರ ಕಾಲ ತರಬೇತಿ ನೀಡುತ್ತಿದೆ. ತದನಂತರದಲ್ಲಿ ಅದನ್ನು ಕಾಂಬೋಡಿಯಕ್ಕೆ ಏರ್‌ಲಿಫ್ಟ್ ಮಾಡಲಾಗುವುದು ಎಂದು ವರದಿಯಾಗಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.