ರಾವಬಹಾದ್ದೂರರ ಜೀವನಸ್ಪರ್ಶಿ ಕೃತಿ “ಗ್ರಾಮಾಯಣ’


Team Udayavani, Nov 26, 2020, 5:30 AM IST

ರಾವಬಹಾದ್ದೂರರ ಜೀವನಸ್ಪರ್ಶಿ ಕೃತಿ “ಗ್ರಾಮಾಯಣ’

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

1957ರಲ್ಲಿ ಪ್ರಕಟವಾದ ರಾವಬಹಾದ್ದೂರ (ರಾಮಚಂದ್ರ ಭೀಮರಾವ್‌ ಕುಲಕರ್ಣಿ)ರ ಚೊಚ್ಚಲ ಕೃತಿ “ಗ್ರಾಮಾಯಣ’ ನಿರೀಕ್ಷೆಗೂ ಮೀರಿ ಮನ್ನಣೆ ಪಡೆದ ಕಾದಂಬರಿಯಾಗಿದೆ. ಒಂದು ಊರಿನ ಬದುಕನ್ನು ಕೇಂದ್ರವಾಗಿರಿಸಿ ಓದುಗರ ಮನಸ್ಸಿಗೆ ನಾಟುವಂತೆ ನಿರೂಪಿಸಿ ರುವುದು ಕೃತಿಯ ವೈಶಿಷ್ಟ್ಯ. ಈ ಕಾದಂಬರಿಗೆ ನಾಯಕ ಯಾ ನಾಯಕಿ ಇಲ್ಲ. ಹಲವು ಜಾತಿ ಗಳು, ಅವುಗಳ ಆಚಾರ- ವಿಚಾರ, ಸಾಮುದಾಯಿಕ ಮನೋಭಾವ, ಸಂಘರ್ಷ ಮೊದಲಾದವುಗಳ ಅಭಿವ್ಯ ಕ್ತಿಯೇ ಇದರ ಮೂಲ.

ಕೃಷ್ಣಾ ನದಿ ದಂಡೆಯ ಮೇಲೆ ಇರುವ ಊರು ವಾದಳ್ಳಿ. ಈ ಹಳ್ಳಿಯ ಸ್ಥಿತಿಗತಿ, ಅವನತಿ ಯೇ ಕಾದಂಬರಿಯ ಜೀವ. ದ್ವೇಷ, ಮೋಹ, ಅಭಿಮಾನ, ಸ್ವಾರ್ಥ ಸಾಧನೆ, ಕಪಟ, ಕಾರಸ್ಥಾನಗಳ ಬಲೆ ಯಲ್ಲಿ ಸಿಕ್ಕು ಒದ್ದಾಡುವ ಒಂದು ಜೀವಂತ ಸಮಾಜ ಈ ಕತೆಯ ನಾಯಕ. ಎರಡನೇ ಹಂತದಲ್ಲಿ ಮಹತ್ವದ ಪಾತ್ರವಾದ ಶಂಕರಪ್ಪ ಗೌಡರ ತೀವ್ರ ಅಭಿಮಾನ ಮತ್ತು ಉದಾತ್ತತೆ, ಬದುಕಿನ ಅವಿಶ್ರಾಂತ ಗಡಿಬಿಡಿಯಲ್ಲೂ ನಿಶ್ಚಲ ತೆಯನ್ನು ಕಾಯ್ದುಕೊಂಡ ಬಾಳಾಚಾರ್ಯ, ಉರುಳು ಹಾಕಿಕೊಂಡು ಜೀವನದ ಪರಮ ರಹಸ್ಯವನ್ನೇ ಹಿಚುಕಿಕೊಂಡ ಪುತಳಾಬಾಯಿ ಪಾತ್ರ ಸ್ಪುರಿಸುವ ಭಾವ ಅನನ್ಯವಾದುದು.

ಬಾಳಾಚಾರ್ಯರ ಪ್ರತಿಯೊಂದು ಕೆಲಸದ ಹಿಂದಿರುವ ವಿಚಾರ ಮಂಥನ, ತನ್ನ ಒಂದು ಪಾಪ ಅನರ್ಥ ಪರಂಪರೆಯನ್ನೇ ಸೃಷ್ಟಿಸಿದಾಗ ಅದನ್ನು ನೋಡಲಾರದೇ ಉರುಳು ಹಾಕಿ ಕೊಂಡು ಪ್ರಾಣಬಿಟ್ಟ ಪುತಳಾಬಾಯಿಯ ಪಾಪಪ್ರಜ್ಞೆೆ, ತಮಗೆ ತಿಳಿದೋ ತಿಳಿಯದೆಯೋ ಅಸಮಂಜಸಗಳ ಬಿರುಗಾಳಿಯನ್ನು ಎಬ್ಬಿಸುವ ಶೇಷಪ್ಪ ಹಾಗೂ ಪಡದಯ್ಯನಂಥವರ ಪಾತ್ರ ಗಳು ಕಥೆಯ ನಡೆಗೆ ವೇಗ ನೀಡಿ ಓದನ್ನು ಪರಿಣಾಮಕಾರಿಯಾಗಿಸುತ್ತದೆ.

ಒಂದು ಘಟನೆಯ ಗರ್ಭದಲ್ಲೇ ಇನ್ನೊಂದು ಘಟನೆಯನ್ನು ನೇಯ್ದು ನಿರೂಪಿಸುವ ಲೇಖ ಕರ ತಂತ್ರ ಕಾದಂಬರಿಯ ಗಮನ ಸೆಳೆಯುವ ಅಂಶ. ಒಂದೇ ಸಮಯದಲ್ಲಿ ಹಲವಾರು ಘಟನೆಗಳು ನಡೆಯುವುದು ಮತ್ತು ಅವು ಭಿನ್ನವಾಗಿ ಓದುಗರಿಗೆ ದಕ್ಕುವ ಬಗೆ ಅದ್ಭುತ. ಜೀವನದ ಮರೆಯಲ್ಲಿ ನಿಂತು ಆಟವಾಡುವ ಅದೃಷ್ಟವನ್ನು ಸರಳ ಮತ್ತು ವಸ್ತುನಿಷ್ಠವಾಗಿ ವಿವರಿಸಿರುವುದು ಇದರ ಶ್ರೇಷ್ಠ ಸಂಗತಿ.

ಜತೆಗೆ ಸ್ವಾಭಾವಿಕವಾಗಿ ಬರಗಾಲ, ಪ್ಲೇಗ್‌ ಹಾವಳಿಗಳು ಸಮುದಾಯದಲ್ಲಿ ಭೀತಿ ಹುಟ್ಟಿಸಿ ಕಾಡುವ ಬಗೆಯ ಚಿತ್ರಣವೂ ಈ ಕೃತಿಯಲ್ಲಿದೆ. ಆ ಕಾಲದ ಸಮಾಜದಲ್ಲಿ ಪ್ರಸ್ತುತ ವಾಗಿದ್ದ ಸಾಂಕ್ರಾಮಿ ಕಗಳ ಭೀತಿ, ಜತೆಗೆ ಅವುಗಳೊಂದಿಗೆ ಬೆಸೆದಿರುವ ಮೂಢನಂಬಿ ಕೆಗಳು, ಒಂದು ಊರಿನಲ್ಲಿ ಇರಬಹುದಾದ ಇತರ ಸಮಸ್ಯೆಗಳನ್ನು ಕಣ್ಣಿಗೆ ಕಟ್ಟು ವಂತೆ ತೆರೆದಿಟ್ಟಿದ್ದಾರೆ. ಇದು ಇಂದಿನ ಕೊರೊನಾ ಯುಗಕ್ಕೂ ಪ್ರಸ್ತುತ. ಬಡ್ಡಿ ವ್ಯವಹಾರ, ಅದರಲ್ಲಿನ ವಸೂ ಲಿಯ ದಾರ್ಷ್ಟ್ಯ, ಅಕ್ರಮ ಸಂಬಂಧಗಳ ಮೆಲು ನೋಟಗಳು ಕೃತಿಯಲ್ಲಿವೆ.

ಕೃತಿಯ ಉದ್ದಕ್ಕೂ ಢಾಳಾಗಿ ಕಾಣುವುದು ಮಾನವೀಯ ಅನುಕಂಪದ ಸೆಲೆ. ಇದು ಲೇಖಕರಿಗೆ ಸಹಜವಾದ ಮತ್ತು ಮಾನವ ಜನಾಂಗಕ್ಕೆ ಅಪೇಕ್ಷಣೀಯ ಗುಣ. ರಾವಬ ಹದ್ದೂರರು ಸ್ವಾತಂತ್ರ್ಯ ಹೋರಾಟಗಾರರು. ಗಾಂಧಿ ಅನುಯಾಯಿಯಾಗಿ ವರ್ಷಕ್ಕೂ ಹೆಚ್ಚುಕಾಲ “ಖಾದಿ ಗ್ರಾಮೋದ್ಯೋಗ ವ್ಯವ ಹಾರ’ ನೋಡಿಕೊಂಡಿದ್ದರು. ಆ ಕಾಲದ ಸಮಾಜದ ಸ್ವಾನುಭವ ‘ಗ್ರಾಮಾಯಣ’ವಾಗಿ ಪಡಿಮೂಡಿರಬಹುದು. ನಿತ್ಯ ಜೀವನದಲ್ಲಿ ದಕ್ಕುವ ಸಣ್ಣ ಸಣ್ಣ ಕೊರತೆಗಳೂ, ಅಸೂಯೆ, ದ್ವೇಷ ಇತ್ಯಾದಿ ಅನರ್ಥಕಾರಿ ವಿಚಾರಗಳೂ ಹೇಗೆ ವ್ಯವಸ್ಥಿತವಾಗಿ ಒಂದು ದುರಂತಕ್ಕೆ ಮುನ್ನುಡಿಯಾಗಬಹುದು ಎಂದು ವಿವರಿ ಸುತ್ತಾ ಈ ಕಾದಂಬರಿ ಜೀವನಸ್ಪರ್ಶಿ ಕೃತಿ ಯಾಗಿ ನೆಲೆಯಾಗಿದೆ. ಅತಿರಂಜನೀಯ ಉತ್ಪ್ರೇಕ್ಷೆಗಳ ಹಾದಿ ತುಳಿಯದೆ ಈ ಕೃತಿ ಜೀವ ಸ್ವಾಭಾವಿಕ ವಿಚಾರಗಳಿಗೆ ಮಣೆ ಹಾಕಿದೆ.

ಐಶ್ವರ್ಯಾ, ಕುಂದಾಪುರ

ಟಾಪ್ ನ್ಯೂಸ್

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

1-dharma

Dharmasthala;ಇಂದಿನಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.