ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಮೈಕ್ರೋಮ್ಯಾಕ್ಸ್: ನೋಟ್-1 Sold Out, 1B ಇಂದು ಬಿಡುಗಡೆ
Team Udayavani, Nov 26, 2020, 11:32 AM IST
ನವದೆಹಲಿ: ಕೆಲವರ್ಷಗಳ ಹಿಂದೆ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ರಾರಾಜಿಸಿ ಮರೆಯಾಗಿದ್ದ ‘ಮೈಕ್ರೋಮ್ಯಾಕ್ಸ್’ ಇದೀಗ ಮತ್ತೆ ಅಧಿಕೃತವಾಗಿ ಲಗ್ಗೆಯಿಟ್ಟಿದೆ. ಮಾತ್ರವಲ್ಲದೆ ಎರಡು ಹೊಸ ಸ್ಮಾರ್ಟ್ ಫೋನ್ ಗಳಿಂದ ಇತರೆ ಸಂಸ್ಥೆಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಈಗಾಗಲೇ ನವೆಂಬರ್ 24ರಂದು ಮೈಕ್ರೋಮ್ಯಾಕ್ಸ್ ಸಂಸ್ಥೆಯ ನೋಟ್ 1 ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಇದೀಗ ಮೈಕ್ರೋಮ್ಯಾಕ್ಸ್ 1B ನವೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಫ್ ಕಾರ್ಟ್ ನಲ್ಲಿ ಬಿಡುಗಡೆಯಾಗಲಿದ್ದು ಭಾರೀ ಕುತೂಹಲ ಕೆರಳಿಸಿದೆ.
ಮೈಕ್ರೋಮ್ಯಾಕ್ಸ್ ನೋಟ್ 1 ಬಿಡುಗಡೆಯಾದ ಕೆಲಕ್ಷಣಗಳಲ್ಲೆ ‘ಸೋಲ್ಡ್ ಔಟ್’ ಆಗಿ ಗ್ರಾಹಕರಿಂದ ಭಾರೀ ಪ್ರಶಂಶೆಗೆ ಒಳಗಾಗಿತ್ತು. ಮಾರುಕಟ್ಟೆಯಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.
ಇಂದು (ನ.26) ಮಧ್ಯಾಹ್ನ ಫ್ಲಿಫ್ ಕಾರ್ಟ್ ಮುಖಾಂತರ ಬಿಡುಗಡೆಯಾಗಲಿರುವ ಈ ಸ್ಮಾರ್ಟ್ ಪೋನ್ ಗೆ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಮೂಲಕ 5% ಕ್ಯಾಶ್ ಬ್ಯಾಕ್ ಮತ್ತು ಇಎಂಐ ಸೌಲಭ್ಯ ದೊರಕುತ್ತಿದೆ. ಮಾತ್ರವಲ್ಲದೆ ಫ್ಲಿಫ್ ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ 5% ಅನ್ ಲಿಮಿಟೆಡ್ ಕ್ಯಾಶ್ ಬ್ಯಾಕ್, ಆ್ಯಕ್ಸಿಸ್ ಬ್ಯಾಂಕ್ ಬಝ್ ಕಾರ್ಡ್ ಮುಖಾಂತರ 5% ಹೆಚ್ಚುವರಿ ನಗದು ರಿಯಾಯಿತಿ ದೊರಕುತ್ತಿದೆ.
ಇದನ್ನೂ ಓದಿ: ನಿವಾರ್ ಚಂಡಮಾರುತದ ಅಬ್ಬರ: ಚೆನ್ನೈ,ಪಾಂಡಿಚೇರಿಯಲ್ಲಿ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ
ಇದರ ಜೊತೆಗೆ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು ಎಕ್ಸ್ ಚೇಂಜ್ ಆಫರ್ ಮೂಲಕ ಹಿಂದಿರುಗಿಸಿ ಮೈಕ್ರೋಮ್ಯಾಕ್ಸ್ 1ಬಿ ಮೊಬೈಲ್ ಗೆ 6,850 ರೂ. ವರೆಗೂ ಡಿಸ್ಕೌಂಟ್ ಪಡೆಯಬಹುದು. ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 9 ತಿಂಗಳವರೆಗೂ ನೋ ಕಾಸ್ಟ್ ಇಎಂಐ ಸೌಲಭ್ಯ ಕೂಡ ದೊರಕುತ್ತಿದೆ.
ಮೈಕ್ರೋಮ್ಯಾಕ್ಸ್ 1B ವಿಶೇಷತೆಗಳು: ಮೈಕ್ರೋಮ್ಯಾಕ್ಸ್ ಇನ್ 1ಬಿ 6.52 ಇಂಚಿನ ಹೆಚ್ ಡಿ ಪ್ಲಸ್ ಮಿನಿ ಡ್ರಾಪ್ ಡಿಸ್ ಪ್ಲೇ ಹೊಂದಿದೆ. ಮಿಡಿಯಾ ಟೆಕ್ ಹೈಪರ್ ಇಂಜಿನ್ ಗೇಮಿಂಗ್ ಟೆಕ್ನಾಲಜಿ ಇದರಲಿದ್ದು, 4 ಜಿಬಿ RAM , ಮತ್ತು 64 ಜಿಬಿ ವರೆಗೂ ವಿಸ್ತರಿಸಬಹುದಾದದ ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ.
5,000 mAh ಬ್ಯಾಟರಿ ಸಾಮರ್ಥ್ಯವಿದ್ದು, 10W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದೆ. ಡ್ಯುಯೆಲ್ ಕ್ಯಾಮಾರ ಸೆಟಪ್ ಇದ್ದು, 13 ಎಂಪಿ ಪ್ರಾಥಮಿಕ ಮತ್ತು 2 ಎಂಪಿ ಸೆಕೆಂಡರಿ ಕ್ಯಾಮಾರವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್ ಸಾಮರ್ಥ್ಯವಿರುವ ಕ್ಯಾಮರಾವನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: ಕಾರ್ಮಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ; ಪಶ್ಚಿಮಬಂಗಾಳದಲ್ಲಿ ಬಂದ್ ಗೆ ವಿರೋಧ, ಘರ್ಷಣೆ
ಬೆಲೆ: 2ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ಸಾಮಾರ್ಥ್ಯ ಹೊಂದಿರುವ ಮೈಕ್ರೋಮ್ಯಾಕ್ಸ್ ಇನ್ 1ಬಿ ಸ್ಮಾರ್ಟ್ ಪೋನ್ ಗೆ 6,999 ರೂ.ಗಳು.
4ಜಿಬಿ RAM ಮತ್ತು 64ಜಿಬಿ ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಪೋನ್ ಗೆ 7,999 ರೂ. ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಭೀಕರ ಅಪಘಾತ: 41ಮಂದಿ ದಾರುಣ ಸಾವು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೃತದೇಹಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.