ಕುಸಿದು ಬೀಳುತ್ತಿವೆ ಗ್ರಾಮ ಚಾವಡಿಗಳು: ಸ್ವಾತಂತ್ರ್ಯ ಬಂದು 70ವರ್ಷವಾದರೂ ಕಟ್ಟಡ ಬದಲಾಗಲಿಲ್ಲ
Team Udayavani, Nov 26, 2020, 3:57 PM IST
ಹೊನ್ನಾವರ: ಸ್ವಾತಂತ್ರ್ಯ ಬಂದು 70 ವರ್ಷವಾದರೂ ಈ ಹಿಂದಿನ ಕಟ್ಟಡದಲ್ಲೆ ಸರ್ಕಾರಿ ಕೆಲಸಗಳು ನಡೆಯುತ್ತಿರುವುದು
ಗ್ರಾಮ ಚಾವಡಿ ಅಂದರೆ ತಪ್ಪಾಗಲಾರದು. ಗ್ರಾಮ ಮಟ್ಟದಲ್ಲಿ ಸಾರ್ವಜನಿಕರಿಗೆ ಸಕಲ ಸೇವೆ ನೀಡುವ ಈ ಕಚೇರಿಗೆ ಯಾವುದೇ ಮೂಲ ಸೌಕರ್ಯಗಳಿಲ್ಲ. ತಾಲೂಕಿನಲ್ಲಿ 24 ಗ್ರಾಮ ಚಾವಡಿಗಳಲ್ಲಿ ಸಮಪರ್ಕ ಕುಡಿಯುವ ನೀರು, ಶೌಚಾಲಯ ಸೌಕರ್ಯವಿಲ್ಲದೇ ಇರುವ ಚಾವಡಿಗಳೆ ಅಧಿಕ. ಹಲವಡೆ ವಿದ್ಯುತ್ ಸಂಪರ್ಕವು ಇಲ್ಲದೇ ಪರದಾಡಬೇಕಾದ ಸ್ಥಿತಿ ಇದೆ.
ಹೊಸಾಕುಳಿ, ಕಡತೋಕಾ ಹಾಗೂ ಸಾಲ್ಕೋಡ್ ಗ್ರಾಮ ಚಾವಡಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಲು ಭಯಪಡಬೇಕಾದ ಸ್ಥಿತಿ ಇದೆ. ಕಟ್ಟಡ ಬಿರುಕು ಬಿಟ್ಟಿರುವುದು ಒಂದಡೆಯಾದರೆ ಮೇಲ್ಛಾವಣೆ ಈಗಲೋ ಆಗಲೋ ಬೀಳುವಂತಿದೆ. ಗ್ರಾಮ ಲೆಕ್ಕಿಗರು, ಗ್ರಾಮದ ಕುಟುಂಬಗಳು ಹಾಗೂ ಆಸ್ತಿ-ಪಾಸ್ತಿಗಳ ಬಗ್ಗೆ ಕಳೆದ ಮೂರ್‍ನಾಲ್ಕು ದಶಕಗಳಿಂದ ಗ್ರಾಮದಲ್ಲಿ ಹುಟ್ಟಿದವರು, ಸತ್ತವರ ಲೆಕ್ಕವನ್ನೆಲ್ಲಾ ಕಡತದ ಜೊತೆ ತಲೆಯಲ್ಲಿಯೂ ತುಂಬಿಕೊಂಡಿರುವ ಉಗ್ರಾಣರು ನಿತ್ಯ ಕರ್ತವ್ಯಕ್ಕೆ ಹಾಜರಾಗುವ ಕಚೇರಿಯ ಬಗ್ಗೆ ಈ ಪರಿಯ ನಿಷ್ಕಾಳಜಿ ಯಾಕೆ?
ಇದನ್ನೂ ಓದಿ: ದೆಹಲಿ ಸರ್ಕಾರದ ಪರಿಸರ ಖಾತೆ ಸಚಿವರಿಗೂ ಕೋವಿಡ್-19 ಸೋಂಕು ದೃಢ
ಜನನ ಮರಣ ದಾಖಲೆ, ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಅಂತ್ಯ ಸಂಸ್ಕಾರ, ಭೂ ಹಿಡುವಳಿ, ಆದಾಯ, ಜಾತಿ, ಹಿಂದುಳಿದವರ್ಗ ಸರ್ಟಿಫಿಕೇಟ್ ಸೇರಿದಂತೆ ನಾಡಕಚೇರಿಯಲ್ಲಿ ಸಲ್ಲಿಸುವ ಪ್ರತಿಯೊಂದು ಅರ್ಜಿಯೂ ಗ್ರಾಮ ಚಾವಡಿಗೆ ಬಂದು ಪರಿಶೀಲನೆಗೊಳಪಟ್ಟು ಮುಂದಿನ ಹಂತಕ್ಕೆ ಕಳುಹಿಸಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದರಲ್ಲಿ, ಜನಸಾಮಾನ್ಯರು ತಮ್ಮ
ದಾಖಲಾತಿಗಳನ್ನು ಅ ಧಿಕೃತವಾಗಿ ಯಾವುದೇ ಇಲಾಖೆಗೆ ಸಲ್ಲಿಸುವುದಿದ್ದರೂ ಗ್ರಾಮಲೆಕ್ಕಿಗರ ಪರಿಶೀಲನೆ ಅತೀ ಅಗತ್ಯ.
ಮೂರು ಗ್ರಾಮ ಚಾವಡಿಯ ಒಂದು ಭಾಗ ಮುರಿದು ಬಿಳುವಂತಿದ್ದರೆ, ಅಲ್ಲಲ್ಲಿ ಹಂಚು ಪಕಾಸುಗಳು ಆಗಲೋ ಈಗಲೋ ಬೀಳುವಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇವಿ ಬೈಕ್ ಶೋ ರೂಮ್‌ನಲ್ಲಿ ಬೆಂಕಿ: ಯುವತಿ ದಾರುಣ ಸಾ*ವು
CT Ravi: ಹುಚ್ಚು ನಾಯಿ ಕಡಿದವರಿಂದ ವಿಷ ಹೇಳಿಕೆ
Karnataka govt: ರಾಜ್ಯದ 3 ಕಡೆ ಜಿಸಿಸಿ ಪಾರ್ಕ್ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.