ದಶಕದ ನಂತರ ಶೆಟ್ಟಿಕೆರೆ ಭರ್ತಿ: ರೈತರ ಮೊಗದಲ್ಲಿ ಸಂತಸ
ತಾಲೂಕಿನ ಶೆಟ್ಟಿಕೆರೆ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿ
Team Udayavani, Nov 26, 2020, 4:05 PM IST
ಚಿಕ್ಕನಾಯಕನಹಳ್ಳಿ: ಸಾವಿರಾರು ಅಡಿ ಕೊಳವೆ ಬಾವಿ ತೆಗೆಸಿದರೂ ನೀರು ಸಿಗದ ತಾಲೂಕಿನಲ್ಲಿ ಮೊದಲ ಬಾರಿಗೆ ಹೇಮಾವತಿ ನೀರು ಹರಿದು ಎರಡು ಕೆರೆಗಳು ತುಂಬಿರುವುದರಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ.
ತಾಲೂಕಿನ ಶೆಟ್ಟಿಕೆರೆಕೆರೆ ಕೋಡಿಬಿದ್ದಿದ್ದು,150ಕ್ಕೂ ಹೆಚ್ಚು ಎಂಸಿಎಫ್ಟಿಗೂ ಅಧಿಕ ನೀರು ಕೆರೆಯಲ್ಲಿ ಶೇಖರಣೆಯಾಗಿದ್ದು ಇದರಿಂದ ಅಂತರ್ಜಲ ಹೆಚ್ಚಾಗಿ ಗ್ರಾಮದಲ್ಲಿ ಬತ್ತಿದ್ದ ಬೋರ್‌ವೆàಲ್‌ಗಳಲ್ಲಿ ನೀರು ಬರುತ್ತಿದ್ದು, ರೈತರು ಸ್ವಾವಲಂಬನೆ ಬದುಕು ನಡೆಸುವಂತಾಗಿದೆ.
ಶೆಟ್ಟಿಕೆರೆ ಕೆರೆ ಕೋಡಿ ಬಿದ್ದಿದ್ದರಿಂದ ಜೋಡಿತಿಮ್ಮಲಾಪುರ, ಹೆಸರಹಳ್ಳಿ ಕಡೆ ಹೇಮೆ ಸ್ವಾಭಾವಿಕವಾಗಿ ಹರಿಯಲಿದೆ. ಅಧಿಕಾರಿಗಳ ಪ್ರಕಾರ72 ಎಂಸಿಎಫ್ಟಿ ಸಾಮಥ್ಯವಿದ್ದ ಶೆಟ್ಟಿಕೆರೆ ಕೆರೆ ಇಂದು 150ಕ್ಕೂ ಅಧಿಕ ಎಂಸಿಎಫ್ಟಿ ಸಾಮರ್ಥ್ಯದಷ್ಟು ನೀರನ್ನು ಹಿಡಿದಿದ್ದೆ. ಶೆಟ್ಟಿಕೆರೆ ಸಮೀಪದ ನವಿಲೆ, ಅಣೆಕಟ್ಟೆ, ಅರಳಿಕೆರೆ ಗ್ರಾಮದಲ್ಲಿ ಬತ್ತಿ ಹೋಗಿದ್ದಕೊಳವೆ ಭಾವಿಗಳಲ್ಲಿ ನೀರು ಬರುತ್ತಿದೆ. ಬರಪೀಡಿತತಾಲೂಕು ಎಂಬ ಕುಖ್ಯಾತಿಗೆ ಗುರಿಯಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತಿದೆ. ದಶಕಗಳಿಂದ ನೀರು ಕಾಣದ ಜನರು ಮೈದುಂಬಿ ಹರಿಯುತ್ತಿರುವ ಶೆಟ್ಟಿಕೆರೆ ವೀಕ್ಷಣೆ ಮಾಡಲು ಜನರು ಗುಂಪು ಗುಂಪಾಗಿ ಬರುತ್ತಿದ್ದಾರೆ. ಹಲವು ಜಾತಿಯ ಪಕ್ಷಿಗಳು ವಲಸೆ ಬಂದಿದ್ದು ಶೆಟ್ಟಿಕೆರೆ ಕೆರೆ ಪ್ರವಾಸಿ ಸ್ಥಳವಾಗಿ ಮಾರ್ಪಾಟಾಗಿದೆ.
ಶ್ರಮಿಸಿದವರಿಗೆ ಶರಣಾಗಬೇಕು: ನೂರಾರು ಹೋರಾಟಗಳು, ರಸ್ತೆ ತಡೆಗಳು, ಬಂದ್‌ಗಳು ನಿಯೋಗಗಳು, ಟೀಕೆ, ಪ್ರತಿಟೀಕೆಗಳು, ಆರೋಪ, ಪ್ರತ್ಯಾರೋಪಗಳ ಫಲವೇ ಇಂದು ಹೇಮೆ ತಾಲೂಕಿನಲ್ಲಿ ಹರಿದಿರುವುದು. ಜನರ ಮುಖದಲ್ಲಿ ನಗು ತಂದಿರುವುದು. ಹಲವು ಸಂಘ ಸಂಸ್ಥೆಗಳ ಹೋರಾಟಗಳು, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸಿಎಂ ಬಿ.ಎಸ್ .ಯಡಿಯೂರಪ್ಪನವರ ಬಳಿ 26 ಕೆರೆಗಳಿಗೆ ಹಣ ಬಿಡುಗಡೆ ಮಾಡಿಸಿದ್ದು, ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ಹೇಮಾವತಿ ಕಾಮಗಾರಿ ನಡೆಯಬೇಕು ಎಂದು ಪಾದಯಾತ್ರೆ ನಡೆಸಿದ್ದು, ತಾಲೂಕಿನ ಸ್ವಾಮಿಜೀಗಳು ಸ್ವಯಂ ಪೇರಣೆಯಿಂದ ಸಂಘಟನೆ ಮಾಡಿ ನೀರಿಗಾಗಿ ಹೋರಾಟಮಾಡಿದ್ದು, ಸಚಿವ ಜೆ.ಸಿ.ಮಾಧುಸ್ವಾಮಿ ಹತ್ತು ವರ್ಷಗಳಿಂದ ಪ್ರಗತಿ ಕಾಣದ ಕಾಮಗಾರಿಗೆ ಹಾಗೂ ಗುತ್ತಿಗೆದಾರರ ವ್ಯಾಜ್ಯ ಬಗೆಹರಿಸಿ ಅಧಿಕಾರಿಗಳಿಗೆ ತಾಕಿತ್ತು ಮಾಡಿ ತಾಲೂಕಿಗೆ ನೀರು ಹರಿಸಿದ್ದಾರೆ.
ಶೆಟ್ಟಿಕೆರೆ ಬರದ ಹೋಬಳಿಯಾಗಿತ್ತು ಇಂದು ಕೆರೆ ತುಂಬಿದೆ. ಮಾಜಿ ಶಾಸಕಕೆ.ಎಸ್.ಕಿರಣ್‌ಕುಮಾರ್ ಅವರಕನಸಿನ ಯೋಜನೆಯನ್ನು, ಬಿಜೆಪಿ ಸರ್ಕಾರದ ಸಹಕಾರದಲ್ಲಿ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿಕಾಮಗಾರಿ ವೇಗ ಹೆಚ್ಚಿಸಿ ನಮ್ಮ ತಾಲೂಕಿನಕೆರೆ ತುಂಬಿಸಿದ್ದಾರೆ. –ಗೌತಮ್ ಶೆಟ್ಟಿಕೆರೆ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.