ಭಾರತ್ ಬ್ಯಾಂಕ್ ಗ್ರಾಹಕರ ಆಶಾಕಿರಣ: ಉಪೂರು ಶಿವಾಜಿ ಪೂಜಾರಿ
Team Udayavani, Nov 26, 2020, 7:35 PM IST
ಪುಣೆ, ನ. 25: ಭಾರತ್ ಬ್ಯಾಂಕ್‌ನ ಸಾಧನೆಯಲ್ಲಿ ಗ್ರಾಹಕರ ಪಾಲು ಅಪಾರವಿದೆ. ಗ್ರಾಹಕರು, ಶೇರುದಾರರು, ಹಿತೈಷಿಗಳು ಬ್ಯಾಂಕ್‌ನ ಮೇಲೆ ತೋರಿದ ಪ್ರೀತಿ, ವಿಶ್ವಾಸದಿಂದ ಬ್ಯಾಂಕ್ ಉತ್ತರೋತ್ತರ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಶತ ಶಾಖೆಗಳ ಸರದಾರ ಎಂದೇ ಬಿಂಬಿತಗೊಂಡಿರುವ ಭಾರತ್ ಬ್ಯಾಂಕ್ ಗ್ರಾಹಕರ ಆಶಾಕಿರಣವಾಗಿದೆ. ಗ್ರಾಹಕರ ಆಶೋತ್ತರಗಳಿಗೆ ಬ್ಯಾಂಕ್ ಸದಾ ಸ್ಪಂದಿಸುತ್ತಿದ್ದು, ದಿನದ 24 ಗಂಟೆಗಳ ಕಾಲವೂ ಡಿಜಿಟಲ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ ತಿಳಿಸಿದರು.
ನ. 23ರಂದು ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಸಂಚಾಲಿತ ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ನ ಪುಣೆಯ ಸ್ಥಳಾಂತರಿತ ಶಿವಾಜಿ ನಗರದ ಶಾಖೆಯನ್ನು ಡಿಗೋಲ್ಡ್ ಹೌಸ್, ಯುನಿಟ್ ನಂ. 1ಎ, 1ಬಿ ಹಾಗೂ 1ಸಿ, ಅಪ್ಪರ್ ಗ್ರೌಂಡ್ ಫ್ಲೋರ್, ಫೈನಲ್ ಪ್ಲಾಟ್ ನಂ. 558, ಜ್ಞಾನೇಶ್ವರ್ ಪಾದುಕಾ ಚೌಕ್ ಹತ್ತಿರ ಭಾರತ್ ಪೆಟ್ರೋಲ್ ಪಂಪ್ ಹಿಂಬದಿಯ ನೂತನ ಕಟ್ಟಡದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಗ್ರಾಹಕರ ಪ್ರೀತಿ, ವಿಶ್ವಾಸ, ಗೌರವ ಇದೇ ರೀತಿಯಲ್ಲಿ ಬ್ಯಾಂಕ್‌ನ ಮೇಲಿರಲಿ. ಗ್ರಾಹಕರ ಸಂತೃಪ್ತಿಯೇ ಬ್ಯಾಂಕ್‌ನ ಧ್ಯೇಯವಾಗಿದೆ ಎಂದರು.
ಸುಸಜ್ಜಿತ ನೂತನ ಸ್ಥಳಾಂತರಿತ ಶಾಖೆಯನ್ನು ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಶಿವಾಜಿ ಪೂಜಾರಿ ರಿಬ್ಬನ್ ಬಿಡಿಸುವ ಮೂಲಕ ಲೋಕಾರ್ಪಣೆಗೊಳಿಸಿದರು. ನಿರ್ದೇಶಕರಾದ ಭಾಸ್ಕರ್ ಎಂ. ಸಾಲ್ಯಾನ್ ಅವರು ಎಟಿಎಂ ಸೆಂಟರನ್ನು ಹಾಗೂ ಎನ್. ಟಿ. ಪೂಜಾರಿ ಅವರು ಲಾಕರ್ ಸೇವೆಯನ್ನು ಉದ್ಘಾಟಿಸಿದರು.
ಪುಣೆಯ ಹೊಟೇಲ್ ಉದ್ಯಮಿ ಸುವರ್ಣ ಕಟಾರಿಯಾ ಮಾತನಾಡಿ, ಭಾರತ್ ಬ್ಯಾಂಕ್ ನಮ್ಮ ಪರಿವಾರದ ಬ್ಯಾಂಕ್ ಎಂಬಂತೆ ಭಾಸವಾಗುತ್ತದೆ. ಬ್ಯಾಂಕಿನ ಎಲ್ಲ ಸಿಬಂದಿಗಳು ಗ್ರಾಹಕರೊಂದಿಗೆ ಪ್ರೀತಿ ತೋರಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಇದರಿಂದ ಭಾರತ್ ಬ್ಯಾಂಕ್ ನಮ್ಮ ಅಚ್ಚುಮೆಚ್ಚಿನ ಬ್ಯಾಂಕ್ ಆಗಿದೆ ಎಂದು ಶುಭ ಹಾರೈಸಿದರು.
ಸಮಾಜ ಸೇವಕ ಶ್ಯಾಮ್ ಸುವರ್ಣ ಮಾತನಾಡಿ, ಒಳ್ಳೆಯ ಪರಿಸರಕ್ಕೆ ಭಾರತ್ ಬ್ಯಾಂಕ್ ಸ್ಥಳಾಂತರಗೊಂಡಿದೆ. ಇದರಿಂದ ಬ್ಯಾಂಕ್‌ನ ವ್ಯವಹಾರ ಅಭಿವೃದ್ಧಿ ಹೊಂದಲು ಇನ್ನಷ್ಟು ಅನುಕೂಲವಾಗಲಿದೆ ಎಂದರು.
ನೂತನ ಶಾಖೆಯ ಕಟ್ಟಡದ ಮಾಲಕ ವಿನೋದ್ ಶಾØ ಮಾತನಾಡಿ, ಭಾರತ್ ಬ್ಯಾಂಕ್‌ನಲ್ಲಿ ಕೆಳಹಂತದ ಸಿಬಂದಿಯಿಂದ ಉನ್ನತ ಹಂತದ ಅಧಿಕಾರಿಗಳವರೆಗೆ ಎಲ್ಲರೂ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಒದಗಿಸುತ್ತಿದ್ದಾರೆ. ಬ್ಯಾಂಕ್ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಲಿ ಎಂದು ಹಾರೈಸಿದರು.
ಹೊಟೇಲ್ ಉದ್ಯಮಿ ರೌನಕ್ ಶೆಟ್ಟಿ ಮಾತನಾಡಿ, ಭಾರತ್ ಬ್ಯಾಂಕ್‌ನಲ್ಲಿ ಸಿಬಂದಿಯಿಂದ ಗ್ರಾಹಕ ಸ್ನೇಹಿಯಾಗಿ ಉತ್ತಮ ಗುಣಮಟ್ಟದ ಸೇವೆಯು ಲಭಿಸುವುದರಿಂದ ನಾನು ಮತ್ತು ನನ್ನ ತಂದೆಯವರು ಭಾರತ್ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಲು ಇಷ್ಟಪಟ್ಟಿದ್ದೇವೆ ಎಂದರು.
ಉದ್ಯಮಿ ಧನಂಜಯ್ ಭಾರ್ಗ್ ಮಾತನಾಡಿ, ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಬ್ಯಾಂಕ್ ಎಂದರೆ ಅದು ಭಾರತ್ ಬ್ಯಾಂಕ್ ಎಂದರು.
ಸ್ಥಳಾಂತರಿತ ನೂತನ ಶಾಖೆಯ ಉದ್ಘಾಟನ ಸಮಾರಂಭದಲ್ಲಿ ನಿರ್ದೇಶಕ ರಾದ ಸೂರ್ಯಕಾಂತ್ ಜೆ. ಸುವರ್ಣ, ಬಿಲ್ಲವ ಸಮಾಜ ಸೇವಾ ಸಂಘದ ಪುಣೆ ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಸಮಾಜ ಸೇವಕಿ ನೂತನ್ ಸುವರ್ಣ, ಪುಣೆಯ ಹೊಟೇಲ್ ಉದ್ಯಮಿಗಳಾದ ಪಾಂಡುರಂಗ ಪೂಜಾರಿ, ಸದಾಶಿವ ಸಾಲ್ಯಾನ್, ಭಾರತ್ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಆಡಳಿತ ನಿರ್ದೇಶಕ ವಿದ್ಯಾನಂದ ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್, ಡಿಜಿಎಂ ಪ್ರಭಾಕರ ಜಿ. ಪೂಜಾರಿ, ಘನ್ಸೋಲಿ ಶಾಖೆಯ ಮುಖ್ಯ ಪ್ರಬಂಧಕ ಸಂತೋಷ್ ಬಿ. ಕೋಟ್ಯಾನ್, ಪುಣೆ ಧನ್ಕವಾಡಿ ಶಾಖೆಯ ಮುಖ್ಯ ಪ್ರಬಂಧಕ ಪ್ರತಾಪ್ ಕರ್ಕೇರ, ಪುಣೆ ಚಿಂಚ್ವಾಡ್ ಶಾಖೆಯ ಮುಖ್ಯ ಪ್ರಬಂಧಕ ಮಹೇಂದ್ರನಾಥ ಸುವರ್ಣ, ಧನ್ಕವಾಡಿ ಶಾಖೆಯ ಉಪಪ್ರಬಂಧಕ ತಾರಾನಾಥ ಅಮೀನ್, ಶಿವಾಜಿನಗರ ಶಾಖೆಯ ಸಿಬಂದಿ ಆನಂದ ಎಂ. ಪೂಜಾರಿ, ರಕ್ಷಿತ್ ಡಿ. ಸನಿಲ್, ನವೀನ್ ಕೆ. ಪೂಜಾರಿ, ಸಂಕೇತ್ ಪೂಜಾರಿ, ಮಹೇಶ್ ಎಚ್. ನಲವಡೆ ಮೊದಲಾದವರು ಉಪಸ್ಥಿತರಿದ್ದರು.
ಶಿವಾಜಿ ನಗರ ಶಾಖೆಯ ಮುಖ್ಯ ಪ್ರಬಂಧಕ ಸುಧೀರ್ ಎಸ್. ಪೂಜಾರಿ ಸ್ವಾಗತಿಸಿದರು. ಉಪ ಪ್ರಬಂಧಕ ಶಶಿ ಎನ್. ಬಂಗೇರ ವಂದಿಸಿದರು.
ನೂತನ ಶಾಖೆಯಲ್ಲಿ ಉಳ್ಳೂರು ಶೇಖರ್ ಶಾಂತಿಯವರ ಪೌರೋಹಿತ್ಯದಲ್ಲಿ ವಾಸ್ತುಪೂಜೆ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಸಿಬಂದಿ ಸಂಕೇತ್ ಪೂಜಾರಿ, ಲಿಖೀತಾ ಗುಜರ್, ಅದಿತ್ಯಾ ಗುಜರ್ ಅವರು ನೇತೃತ್ವ ವಹಿಸಿದ್ದರು. ಅಪಾರ ಸಂಖ್ಯೆಯಲ್ಲಿ ಗ್ರಾಹಕರು, ಶೇರುದಾರರು, ಹಿತೈಷಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.