ಒಂದೇ ರಾಷ್ಟ್ರ,ಒಂದೇ ಮತಪಟ್ಟಿ
Team Udayavani, Nov 27, 2020, 6:00 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಮತ್ತೂಮ್ಮೆ “ಒಂದು ರಾಷ್ಟ್ರ, ಒಂದು ಚುನಾ ವಣೆ’ ಪರಿಕ ಲ್ಪನೆಯ ಪರ ಧ್ವನಿಯೆತ್ತಿದ್ದು, ಭಾರತದಲ್ಲಿ ಇದರ ಜಾರಿ ಅತ್ಯಗತ್ಯ ಎಂದು ಒತ್ತಿ ಹೇಳಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ಕೆವಾಡಿಯಾದಲ್ಲಿ ನಡೆದ 80ನೇ ಅಖೀಲ ಭಾರತ ಚುನಾವಣ ಅಧಿಕಾರಿಗಳ ಸಮ್ಮೇಳನದ ಸಮಾರೋಪದಲ್ಲಿ ಮಾತನಾ ಡಿದ ಅವರು, “ಒಂದು ದೇಶ- ಒಂದು ಚುನಾವಣೆಯು ಕೇವಲ ಚರ್ಚೆ ಮಾಡಬೇಕಾದ ವಿಷಯವಲ್ಲ, ಬದಲಿಗೆ ದೇಶಕ್ಕೆ ಅಗತ್ಯವಿರುವ ವಿಚಾರ. ಬೇರೆ ಬೇರೆ ಸ್ಥಳಗಳಲ್ಲಿ ಆಗಾಗ ಚುನಾವಣೆ ನಡೆಯುತ್ತಿದ್ದರೆ, ಅದು ದೇಶದ ಅಭಿವೃದ್ಧಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ದೇಶ- ಒಂದು ಚುನಾವಣೆ ಕುರಿತು ಆಳವಾದ ಅಧ್ಯಯನ ಹಾಗೂ ಸಮಾಲೋಚನೆ ನಡೆಯಬೇಕಿದೆ’ ಎಂದು ಹೇಳಿದ್ದಾರೆ.
ಇದೇ ವೇಳೆ, ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗೆ ಒಂದೇ “ಮತದಾರರ ಪಟ್ಟಿ’ ರಚಿಸುವಂತೆಯೂ ಚುನಾವಣ ಆಯೋಗಕ್ಕೆ ಸಲಹೆ ನೀಡಿರುವ ಅವರು, ಪ್ರತ್ಯೇಕ ಪಟ್ಟಿ ರಚಿಸುವುದರಿಂದ ಸಂಪನ್ಮೂಲ ಗಳೂ ವ್ಯರ್ಥವಾಗುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಜತೆಗೆ, “ಯಾವಾಗ ಜನರು ಹಾಗೂ ದೇಶವೇ ಮೊದಲು ಎಂಬ ನೀತಿಗಿಂತಲೂ ರಾಜಕೀಯವೇ ಮೇಲಾಗುತ್ತದೋ, ಅಂಥ ಸಂದರ್ಭದಲ್ಲಿ ದೇಶ ಅದಕ್ಕೆ ಬೆಲೆ ತೆರಬೇಕಾಗುತ್ತದೆ’ ಎಂದೂ ಮೋದಿ ಹೇಳಿದ್ದಾರೆ.
ಹಿಂದೆಯೇ ಪ್ರಸ್ತಾವ
ಪ್ರಸಕ್ತ ವರ್ಷದ ಸ್ವಾತಂತ್ರೊéàತ್ಸವ ಭಾಷಣದಲ್ಲೂ ಈ ಕುರಿತು ಪ್ರಸ್ತಾವಿಸಿದ್ದ ಮೋದಿ, “ಒಂದು ದೇಶ- ಒಂದು ತೆರಿಗೆ, ಒಂದು ದೇಶ-ಒಂದು ಗ್ರಿಡ್, ಒಂದು ದೇಶ- ಒಂದು ಪಡಿತರ ಕಾರ್ಡ್ ಅನ್ನು ಯಶಸ್ವಿಯಾಗಿ ಜಾರಿ ಮಾಡಿದ್ದು, ಒಂದು ದೇಶ- ಒಂದು ಚುನಾವಣೆ ವ್ಯವಸ್ಥೆ ಕುರಿತೂ ಚರ್ಚೆ ಆರಂಭಿಸಿದ್ದೇವೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಆ ಪ್ರಕ್ರಿಯೆ ನಡೆಯಲಿದೆ’ ಎಂದು ಹೇಳಿದ್ದರು.
ಉಗ್ರರ ವಿರುದ್ಧ ಹೋರಾಟಕ್ಕೆ ಹೊಸ ನೀತಿ: 26/11ರ ದಾಳಿಯ ನೋವನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗ ದೇಶವು ಹೊಸ ನೀತಿ ಮತ್ತು ಹೊಸ ಪ್ರಕ್ರಿಯೆಯ ಮೂಲಕ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮುಂಬಯಿ ದಾಳಿ ನಡೆದು 12 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ವಿಚಾರ ಪ್ರಸ್ತಾವಿಸಿ ಮಾತನಾಡಿದ ಅವರು, ಅಂದಿನ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನೂ ಸ್ಮರಿಸಿದ್ದಾರೆ. ಭಾರತೀಯ ಭದ್ರತಾ ಪಡೆಗಳು ಈಗಲೂ ಉಗ್ರರ ವಿಧ್ವಂಸಕ ಯೋಜನೆಗಳನ್ನು ವಿಫಲಗೊಳಿಸುತ್ತಿವೆ. ಅವರೆಲ್ಲರಿಗೂ ನಾನು ತಲೆಬಾಗಿ ನಮಸ್ಕರಿಸುತ್ತೇನೆ ಎಂದಿದ್ದಾರೆ.
ನವೆಂಬರ್ 26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ನಿರ್ಧಾರವನ್ನು ನಾವು 2015ರಲ್ಲಿ ಕೈಗೊಂಡೆವು. ಸಂವಿಧಾನದ ದಿನವು ಸಂವಿಧಾನ ರಚನೆಕಾರರಿಗೆ ಗೌರವ ಸಲ್ಲಿಸುವ ದಿನವಾಗಿದ್ದು, ಅವರ ಕನಸಿನ ಭಾರತ ನಿರ್ಮಿಸುವಲ್ಲಿ ನಾವೆಲ್ಲರೂ ಪಣ ತೊಡಬೇಕು.
ನರೇಂದ್ರ ಮೋದಿ, ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
MUST WATCH
ಹೊಸ ಸೇರ್ಪಡೆ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.