ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ
Team Udayavani, Nov 27, 2020, 6:58 PM IST
ಮುಂಬಯಿ, ನ. 26: ಮುಂಬಯಿಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ರಸ್ತೆ ಅಪಘಾತ ಗಳಿಂದ ಸಾವನ್ನಪ್ಪುವವರ ಸಂಖ್ಯೆ ಕಡಿಮೆ ಯಾಗುತ್ತಿದ್ದು, ಇದು ಮುಂಬಯಿ ನಗರ ಟ್ರಾಫಿಕ್ ಇಲಾಖೆಯ ಪೊಲೀಸರ ಕಠಿನ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.
ಜಾಗತಿಕ ರಸ್ತೆ ಸುರಕ್ಷತೆಗಾಗಿ ಬ್ಲೂಮ್ಬರ್ಗ್ ಲೋಕೋಪಕಾರ ಉಪಕ್ರಮ ಮತ್ತು ಮುಂಬಯಿ ಟ್ರಾಫಿಕ್ ಪೊಲೀಸರು ಸಹಿತ ಅದರ ಪಾಲುದಾರರು ಮುಂಬಯಿಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸಾವಿನ ಸಂಖ್ಯೆ ಮತ್ತು ಗಾಯದ ಅಂಕಿಂಶವನ್ನು ವಿಶ್ಲೇಷಿಸಿ ವರದಿ ಬಿಡುಗಡೆ ಮಾಡಿದ್ದಾರೆ. ಮುಂಬಯಿಯಲ್ಲಿ 184 ಕಿ.ಮೀ. ರಸ್ತೆ ವಿಶ್ಲೇಷಿಸಿದ ಅನಂತರ, ಕ್ರ್ಯಾಶ್ ಅನಾಲಿಸಿಸ್ ತಂಡವು 2015 ಮತ್ತು 2019ರ ನಡುವೆ ರಸ್ತೆ ಅಪಘಾತಗಳ ಸಾವುಗಳಲ್ಲಿ ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ.
ಕಳೆದ ಸಾಲಿನಲ್ಲಿ 447 ಮಂದಿ ಸಾವು :
2019ರಲ್ಲಿ ಮುಂಬಯಿ ರಸ್ತೆ ಅಪ ಘಾತದಲ್ಲಿ 447 ಜನರು ಪ್ರಾಣ ಕಳೆದು ಕೊಂಡಿದ್ದು, 2018ಕ್ಕೆ ಹೋಲಿಸಿದರೆ ಶೇ.3 ರಷ್ಟು ಕುಸಿತ ಕಂಡುಬಂದಿದೆ. 2015ರ ಅಂಕಿಅಂಶಗಳಿಗೆ ಹೋಲಿಸಿದರೆ ಶೇ. 47ರಷ್ಟು ಕುಸಿತ ಕಂಡು ಬಂದಿದ್ದು, ಸಾವನ್ನಪ್ಪಿದವರಲ್ಲಿ ಶೇ. 80ರಷ್ಟು ಪುರುಷರು ಮತ್ತು ಮಾರಣಾಂತಿಕ ಗಾಯಗೊಂಡವರಲ್ಲೂ ಶೇ. 99ರಷ್ಟು ಪುರುಷರು ಎಂದು ವರದಿ ತಿಳಿಸಿದೆ. 2019ರಲ್ಲಿ ಗಾಯಗೊಂಡ ಹೆಚ್ಚಿನ ಚಾಲಕರು 20ರಿಂದ 24 ವರ್ಷದೊಳಗಿನ ವಯಸ್ಸಿನವರು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು 30ರಿಂದ 59 ವರ್ಷ ವಯಸ್ಸಿನವರಾಗಿದ್ದಾರೆ. 2019ರಲ್ಲಿ ನಗರದ ಒಟ್ಟು ಸಾವುಗಳಲ್ಲಿ ಶೇ. 90ರಷ್ಟು ಪಾದಚಾರಿಗಳು, ಸೈಕ್ಲಿಸ್ಟ್‌ಗಳು ಮತ್ತು ಮೋಟಾರ್ ಸೈಕಲ್ ಸವಾರರು ಎಂದು ವರದಿ ಹೇಳಿದೆ.
ಘಾಟ್‌ಕೋಪರ್ ಫ್ಲೈಓವರ್ ಹಾಟ್‌ಸ್ಪಾಟ್ :
ಘಾಟ್‌ಕೋಪರ್‌ನ ಮಾಹುಲ್ ರಸ್ತೆ ಮತ್ತು ಬಾಳಾಸಾಹೇಬ್ ಠಾಕ್ರೆ ಫ್ಲೈ ಓವರ್‌ನಲ್ಲಿ ಗರಿಷ್ಠ ಸಾವುನೋವುಗಳು ದಾಖಲಾಗಿವೆ. ಅಮರ್ ಮಹಲ್ ಮತ್ತು ಗೋದ್ರೇಜ್ ಜಂಕ್ಷನ್‌ಗಳು ಅಪಘಾತ ವಲಯಗಳಾಗಿವೆ. 2017 ಮತ್ತು 2019ರ ನಡುವೆ ಅಮರ್ ಮಹಲ್ ಜಂಕ್ಷನ್‌ನಲ್ಲಿ 25 ಮಂದಿ ಮತ್ತು ಗೋದ್ರೇಜ್ ಜಂಕ್ಷನ್‌ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ವಾರದ ದಿನಗಳಲ್ಲಿ ರಾತ್ರಿ 7ರಿಂದ 9ರ ಅವಧಿಯಲ್ಲಿ ಸಂಭವಿಸಿದ ಅಪಘಾತಗಳು ಸಂಭವಿಸಿ ಹೆಚ್ಚಿನ ಸಾವುನೋವುಗಳಾಗಿವೆ. ವಾರಾಂತ್ಯದಲ್ಲಿ ರಾತ್ರಿ 10ರಿಂದ 11ರ ವರೆಗೆ ಹೆಚ್ಚಿನ ಅಪಘಾತಗಳು ಸಂಭವಿಸಿವೆ.
ಪ್ರಸ್ತುತ ವರ್ಷ 172 ಮಂದಿ ಸಾವು :
ಮುಂಬಯಿ ಟ್ರಾಫಿಕ್ ಕಂಟ್ರೋಲ್ ಬ್ರಾಂಚ್ ಈ ವರ್ಷ ಜನವರಿಯಿಂದ ಆಗಸ್ಟ್‌ವರೆಗೆ ನಗರದಲ್ಲಿ ರಸ್ತೆ ಅಪಘಾತ ಸಾವುಗಳ ಬಗ್ಗೆ ತನ್ನ ವರದಿಯನ್ನು ಬಿಡುಗಡೆ ಮಾಡಿದೆ. ಈ ಅವಧಿಯಲ್ಲಿ ಒಟ್ಟು 172 ಸಾವುನೋವುಗಳನ್ನು ದಾಖಲಿಸಿದೆ, ಅದರಲ್ಲಿ ಶೇ. 47ರಷ್ಟು ಪಾದಚಾರಿಗಳು ಎಂದು ತಿಳಿಸಲಾಗಿದೆ. ಕಳೆದ ಆರೇಳು ತಿಂಗಳುಗಳಿಂದ ಕೋವಿಡ್ ಲಾಕ್‌ಡೌನ್‌ನಿಂದಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸುರಕ್ಷಿತ ವೇಗದಲ್ಲಿ ಓಡಿಸಲು, ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸಲು ಮುಂಬಯಿ ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಪಾನಮತ್ತರಾಗಿ ವಾಹನ ಚಲಾಯಿಸಬಾರದು ಎಂದು ಒತ್ತಾಯಿಸುತ್ತೇವೆ. ಸಂಚಾರವನ್ನು ನಿಯಂತ್ರಿಸಲು ಮತ್ತು ಮುಂದಿನ ದಿನಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ವಿವಿಧ ಯೋಜನೆಗಳನ್ನು ತರುವ ಯೋಚನೆಯಿದೆ. –ಯಶಸ್ವಿ ಯಾದವ್, ಜಂಟಿ ಪೊಲೀಸ್ ಆಯುಕ್ತರು, ಸಂಚಾರ ವಿಭಾಗ, ಮುಂಬಯಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.