ಥೈಲ್ಯಾಂಡ್ ಜಗತ್ತಿನ ಸ್ವರ್ಗ
Team Udayavani, Nov 28, 2020, 7:00 AM IST
ಪ್ರವಾಸೋದ್ಯಮದಿಂದಲೇ ಮುನ್ನಡೆಯುತ್ತಿರುವ ದೇಶ ಥಾçಲ್ಯಾಂಡ್‌ನಲ್ಲಿ ಅನೇಕ ಪ್ರಕೃತಿ ದತ್ತವಾದ ಪ್ರವಾಸಿ ತಾಣಗಳಿವೆ. ಇದರೊಂದಿಗೆ ಮಾನವನ ಕೈಚಳಕವೂ ಸಾಕಷ್ಟು ಕೆಲಸ ಮಾಡಿದೆ.
ಗಾರವೆಂಬ ಸೀರೆಯನ್ನುಟ್ಟು, ಬಂಗಾರವೆಂಬ ಬಳೆಯನ್ನು ತೊಟ್ಟು, ನರ್ತಕಿಯೆಂಬ ನತ್ತನ್ನಿಟ್ಟು, ಚೆಲುವೆ ಚೆಂದುಳ್ಳಿ ಯಾಗಿ ಕೈಬೀಸಿ ಕರೆಯುವ ದೇಶ ಥಾçಲ್ಯಾಂಡ್…
ಜಗತ್ತಿನ ಪುಟ್ಟ ದ್ವೀಪ ರಾಷ್ಟ್ರ ಥೈಲ್ಯಾಂಡ್ ಪ್ರಕೃತಿದತ್ತವಾದ ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ದೇಶ ಮುನ್ನಡೆಯುತ್ತಿರುವುದು, ಇಲ್ಲಿನ ಜನರು ಜೀವನ ನಡೆಸುತ್ತಿರುವುದು ಪ್ರವಾಸೋದ್ಯಮದಿಂದಲೇ ಎಂಬುದು ಇಲ್ಲಿನ ಅಚ್ಚರಿಯ ವಿಚಾರ. ಹೀಗಾಗಿ ಇಲ್ಲಿ ಪ್ರವಾಸಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವಿಮಾನ ನಿಲ್ದಾಣ, ಅಂಗಡಿ ಮಳಿಗೆಗಳಲ್ಲಿ ಪ್ರವಾಸಿಗರಿಗೆ ಕೈಮುಗಿದು ಸ್ವಾಗತಿಸಲಾಗುತ್ತದೆ ಮತ್ತು ಅದೇ ರೀತಿ ಬೀಳ್ಕೊಡಲಾಗುತ್ತದೆ.
ವಿಶ್ವದ ಮೂಲೆಮೂಲೆಯಿಂದಲೂ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಥೈಲ್ಯಾಂಡ್‌ನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಜತೆಗೆ ಉದ್ಯೋಗ, ಜೀವನವನ್ನು ರೂಪಿಸಲು ಯೋಗ್ಯ ದೇಶವಾಗಿದೆ.
ಸ್ವತ್ಛತೆ ಇಲ್ಲಿ ಎದ್ದು ಕಾಣುವ ವಿಚಾರ. ರಸ್ತೆ, ಹೆದ್ದಾರಿ ಸ್ವತ್ಛತೆ ಕಾರ್ಯ ಮೆಚ್ಚುವಂತಿದೆ. ಟ್ರಾಫಿಕ್ ಜಾಮ್ ಕಾಣ ಸಿಗುವುದೇ ಇಲ್ಲ. ಇಲ್ಲಿ ಹೆದ್ದಾರಿಯನ್ನೂ ಅದೇ ರೀತಿ ನಿರ್ಮಾಣಮಾಡಲಾಗಿದೆ. ಇಲ್ಲಿ ಎಂಜಿನಿಯರಿಂಗ್ ಪರಿಣತಿ ಎದ್ದು ಕಾಣುತ್ತದೆ.
ದೇಶದ ಕೇಂದ್ರಬಿಂದು ಬ್ಯಾಂಕಾಕ್ ಅತ್ಯಂತ ಸಮೃದ್ಧಿಯನ್ನು ಹೊಂದಿದ ನಗರ. ಇಲ್ಲಿ ಭಾರತೀಯ ಆಚಾರ, ವಿಚಾರಗಳಿಗೆ ಮನ್ನಣೆ ನೀಡುವುದರ ಜತೆಗೆ ಧರ್ಮ, ಸಂಪ್ರದಾಯ, ಹಬ್ಬಹರಿದಿನಗಳ ಆಚರಣೆಗೂ ಹೆಚ್ಚಿನ ಅವಕಾಶವಿದೆ.
ಕನ್ನಡಿಗರ ಹೃದಯ ಶ್ರೀಮಂತಿಕೆಗೆ ಇಲ್ಲಿನ ಜನ ಗೌರವ ನೀಡುತ್ತಾರೆ. ಕನ್ನಡ ನಾಡುನುಡಿ, ನಿತ್ಯಹರಿದ್ವರ್ಣ ಕಾಡುಗಳು, ಗಂಧದ ಮರ, ರಾಜಮಹಾರಾಜರ ಇತಿಹಾಸ, ಶಿಲ್ಪಕಲೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕ ರಾಜ್ಯದ ಬಗ್ಗೆ ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ವಿಶೇಷ.
ಅತ್ಯಂತ ಸುಸಂಸ್ಕೃತ, ಸರಳ ಜೀವನ ನಡೆಸುವ ಇಲ್ಲಿನ ಜನರು, ಕನ್ನಡಿಗರೊಂದಿಗೆ ಸಹೋದರತ್ವ ಭಾವನೆಯಿಂದ ಬೆರೆತುಕೊಳ್ಳುತ್ತಾರೆ. ಹಬ್ಬಗಳಲ್ಲಿಯೂ ಸಹಭಾಗಿಯಾಗುತ್ತಾರೆ. ದೇವರು, ಪೂಜೆ, ಪುನಸ್ಕಾರಗಳನ್ನು ಗೌರವಿಸುತ್ತಾರೆ.
- ಲಕ್ಷ್ಮೀ, ಅಂಕಲಗಿಮಠ , ಥೈಲ್ಯಾಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.