ಬಾದಾಮಿ ಬನಶಂಕರಿ ಜಾತ್ರೆ ರದ್ದು
Team Udayavani, Nov 28, 2020, 2:39 PM IST
ಬಾದಾಮಿ: ಉತ್ತರ ಕರ್ನಾಟಕದ ಪ್ರಸಿದ್ಧ ಬಾದಾಮಿ-ಬನಶಂಕರಿ ಜಾತ್ರೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ರದ್ದುಗೊಳಿಸಿ ಬಾಗಲಕೋಟೆ ಜಿಲ್ಲಾಡಳಿತ ನಿರ್ಣಯ ಕೈಗೊಂಡಿದೆ.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಚಂದ್ರಕಾಂತ ಅವರು ಈ ವಿಷಯ ತಿಳಿಸಿದರು. ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮೀಟಿಯವರಿಗೆ ತಮ್ಮ ಪರಿವಾರದವರೊಂದಿಗೆ ಕೇವಲ ಶ್ರೀದೇವಿಯ ಪೂಜೆ ಮಾಡಲು ಸೂಚಿಸಿ ಜನಸಂದಣಿಗೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕು. ಬನಶಂಕರಿ ಜಾತ್ರಾ ಮಹೋತ್ಸವ ರದ್ದುಪಡಿಸಿರುವ ಬಗ್ಗೆ ಗ್ರಾಪಂ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು
ತಹಶೀಲ್ದಾರ್ ಸುಹಾಸ ಇಂಗಳೆ,ಪಿಎಸ್‌ಐ ಪ್ರಕಾಶ ಬಣಕಾರ, ತಾಪಂ ಇಒ ಡಾ| ಪುನೀತ್,ತಾಲೂಕಾ ಆರೋಗ್ಯಾ ಧಿಕಾರಿ ಡಾ|ಎಂ.ಬಿ.ಪಾಟೀಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶಅಥಣಿ, ಸದಾಶಿವ ಮರಡಿ, ಚೊಳಚಗುಡ್ಡ ಪಿಡಿಒ ದೊಡ್ಡಪತ್ತಾರ ಹಾಜರಿದ್ದರು.
ದೇವಲ ಮಹರ್ಷಿ ಜಯಂತಿ :
ಕೆರೂರ: ಪಟ್ಟಣದಲ್ಲಿ ದೇವಲ ಮಹರ್ಷಿಗಳ ಜಯಂತಿ ಆಚರಿಸಲಾಯಿತು. ಈ ಪ್ರಯುಕ್ತ ಭಾವಚಿತ್ರದ ಮೆರವಣಿಗೆ ಸಂಭ್ರಮದಿಂದ ನೆರವೇರಿತು. ಇಲ್ಲಿನ ಹೊಸಪೇಟೆ ಓಣಿಯ ಬನಶಂಕರಿ ದೇವಾಲಯ ಆವರಣದಲ್ಲಿ ದೇವಾಂಗ ಸಮಾಜದ ಪ್ರಮುಖರು, ವೇದಮೂರ್ತಿ ದೇವಾಂಗಮಠದ ರುದ್ರಮುನಿ ಸ್ವಾಮೀಜಿ ಮನುಕುಲ ವನ್ನು ಸನ್ಮಾರ್ಗದತ್ತ ಮುನ್ನಡೆಸಿ, ಮಾನ ಮುಚ್ಚುವ ಕಾಯಕ ಧಾರೆ ಎರೆದ ದೇವಲ ಮಹರ್ಷಿ ಗಳ ತತ್ವ, ಆದರ್ಶಗಳನ್ನು ಸಮಾಜ ಬಾಂಧವರು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತೆ ಸಲಹೆ ಮಾಡಿದರು.
ದೇವಲ ಮಹರ್ಷಿ ಜಯಂತಿ ಉತ್ಸವದ ಮೆರವಣಿಗೆಗೆ ಬನಶಂಕರಿ ದೇಗುಲದ ಆವರಣದಲ್ಲಿ ರುದ್ರಮುನಿ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ದೇವಾಂಗಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ವಿಠ್ಠಲಗೌಡ್ರ ಗೌಡರ, ಲಕ್ಷ್ಮಣ ಮುಗಳಿ, ಬಿಜೆಪಿ ಧುರೀಣ ಪಿತಾಂಬ್ರೆಪ್ಪ ಹವೇಲಿ, ಆನಂದ ಪರದೇಶಿ, ವಿಷ್ಣು ಅಂಕದ, ಪಾಂಡಪ್ಪ ಹುಚಪರಣ್ಣವರ, ಎಸ್.ಸಿ. ಕರಿಮರಿ, ಕುಮಾರ ಹೂವಣ್ಣವರ,ಮನೋಹರ ಕುದರಿ, ಗುಂಡಣ್ಣ ಬೋರಣ್ಣವರ, ಮಲ್ಲಿಕಾರ್ಜುನ ಗೌಡರ, ಶಂಕ್ರಪ್ಪ ಗದುಗಿನ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.