ಬಾಲಿವುಡ್ ‘ಅಂಧಾದುನ್ ‘ನ ಮಲಯಾಳಂ ರೀಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ?
Team Udayavani, Nov 28, 2020, 6:11 PM IST
ನವದೆಹಲಿ : 2018 ರಲ್ಲಿ ಬಾಲಿವುಡ್ ನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಅಂಧಾದುನ್ ಚಿತ್ರದ ಮಲಯಾಳಂ ರೀಮೇಕ್ ನಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.
ವರದಿಯ ಪ್ರಕಾರ ಪೃಥ್ವಿರಾಜ್, ಹಿಂದಿಯಲ್ಲಿ ಆಯುಷ್ಮಾನ್ ಖುರಾನಾ ಅಭಿನಯಿಸಿದ್ದ ಪ್ರಮುಖ ಪಾತ್ರವನ್ನು ಮಲೆಯಾಳಂನಲ್ಲಿ ಪೃಥ್ವಿರಾಜ್ ನಿಭಾಯಿಸಲಿದ್ದಾರೆ. ಚಿತ್ರವನ್ನು ರವಿ.ಕೆ.ಚಂದ್ರನ್ ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಅಂಧಾದುನ್ ಚಿತ್ರದ ಮೆಲಯಾಳಂ ರೀಮೇಕ್ ನಲ್ಲಿ ನಟಿಸಲು ಪೃಥ್ವಿರಾಜ್ ಸಹಿ ಹಾಕಿದ್ದಾರೆ ಎಂದು ಮಲಯಾಳಂ ದೈನಿಕವೊಂದು ವರದಿ ಮಾಡಿದೆ.
ಇನ್ನುಳಿದಂತೆ ಹಿಂದಿಯಲ್ಲಿ ನಟಿ ಟಬು ನಿಭಾಯಿಸಿದ್ದ ನೆಗೆಟಿವ್ ಪಾತ್ರವನ್ನು ಮಲಯಾಳಂನಲ್ಲಿ ಮಮತಾ ಮೋಹನದಾಸ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ರಾಧಿಕಾ ಅಪ್ಟೆ ನಟಿಸಿದ್ದ ಪಾತ್ರದಲ್ಲಿ, ಅಹನಾ ಕೃಷ್ಣ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ. ಈ ಎರಡು ಪಾತ್ರಗಳು ಚಿತ್ರದಲ್ಲಿ ಬಹಳ ಪ್ರಮುಖ ಪಾತ್ರಗಳಾಗಿವೆ. ವರದಿಯ ಪ್ರಕಾರ ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಚಟುವಟಿಕೆಗಳು ಆರಂಭವಾಗಿದೆ. ಚಿತ್ರದ ಪಾತ್ರ ವರ್ಗದ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ಬರಬೇಕಿದೆ.
ಇದನ್ನೂ ಓದಿ : ವಾಹನ ಸವಾರರ ಗಮನಕ್ಕೆ: ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ, BISಗೆ ಮಾತ್ರ ಮಾನ್ಯತೆ, ಏನಿದು?
ಮಲಯಾಳಂನಲ್ಲಿ ಅಂಧಾದುನ್ ರಿಮೇಕ್ ಆಗಿ ಬರಲಿದೆ ಎನ್ನುವುದರ ಕುರಿತು ಸುದ್ದಿಗಳು ಹರಿದಾಡುತ್ತಿವೆ.ಆದರೆ ಈ ಬಗ್ಗೆ ಸ್ವತಃ ಪೃಥ್ವಿರಾಜ್ ಆಗಲಿ, ನಿರ್ದೇಶಕ ರವಿ.ಕೆ.ಚಂದ್ರನ್ ಆಗಲಿ ಇದುವರೆಗೆ ಬಹಿರಂಗವಾಗಿ ವಿಷಯವನ್ನು ಹೊರಹಾಕಿಲ್ಲ. ತಮಿಳು ಹಾಗೂ ತೆಲುಗಿನಲ್ಲಿ ಅಂದಾಧುನ್ ರೀಮೇಕ್ ಆಗಲಿದೆ ಎಂಬ ಸುದ್ದಿಯೂ ಇದೆ.
ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದ ಅಂಧಾದುನ್ ಚಿತ್ರ ಬಾಲಿವುಡ್ ನಲ್ಲಿ ಗಮನ ಸೆಳೆದಿತ್ತು. ಚಿತ್ರದ ಯಶಸ್ಸಿಗೆ ರಾಷ್ಟ್ರಪ್ರಶಸ್ತಿ ಬಂದಿದೆ. ಆಯುಷ್ಮಾನ್ ಖುರಾನಾ ಉತ್ತಮ ನಟನೆಗಾಗಿ ನ್ಯಾಷನಲ್ ಆವಾರ್ಡ್ ತಂದುಕೊಟ್ಟ ಚಿತ್ರ ಅಂಧಾದುನ್. ಚಿತ್ರದಲ್ಲಿ ಆಯುಷ್ಮಾನ್ ಕುರುಡನ ಪಾತ್ರವನ್ನು ಮಾಡಿದ್ದಾರೆ. ಚಿತ್ರ ಭಾರತದಲ್ಲಿ ಮಾತ್ರವಲ್ಲದೆ, ಚೀನಾ, ದಕ್ಷಿಣ ಕೊರಿಯಾದಲ್ಲೂ ಬಿಡುಗಡೆಯಾಗಿ ಸದ್ದು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.