ನಿವಾರ್ ಸೈಕ್ಲೋನ್ ಎಫೆಕ್ಟ್ : ಕಾಕಿನಾಡ ಬೀಚಲ್ಲಿ “ಚಿನ್ನದ ಶೋಧನೆ’
ಸಮುದ್ರ ಪಾಲಾಗಿರುವ ದೇಗುಲ ಚಿನ್ನ ಪಡೆಯಲು ಜನವೋ ಜನ
Team Udayavani, Nov 28, 2020, 9:25 PM IST
ಹೈದರಾಬಾದ್: ಆಂಧ್ರಪ್ರದೇಶದ ಕಾಕಿನಾಡ ಕರಾವಳಿ ಪ್ರದೇಶದಲ್ಲಿ “ಚಿನ್ನದ ಶೋಧನೆ’ ಶುರುವಾಗಿದೆ. ಅಂದ ಹಾಗೆ ಇದು ಕೇಂದ್ರ ಸರ್ಕಾರದ ವತಿಯಿಂದ ಕೈಗೊಳ್ಳಲಾಗಿರುವ ಶೋಧನೆ ಅಲ್ಲ. ವಿಚಾರವೇನೆಂದರೆ ನಿವಾರ್ ಸೈಕ್ಲೋನ್‌ನಿಂದಾಗಿ ಧಾರಾಕಾರ ಮಳೆಯಿಂದಾಗಿ ಉಪ್ಪಡ ಮತ್ತು ಸುರದಪೇಟ ಗ್ರಾಮದ ವ್ಯಾಪ್ತಿಯಲ್ಲಿನ ಕೆಲವು ದೇಗುಲಗಳು ಸಮುದ್ರ ಪಾಲಾಗಿದ್ದವು. ಹೀಗಾಗಿ, ದೇವರಿಗೆ ಹಾಕಲಾಗಿರುವ ಚಿನ್ನವೇನಾದರೂ ಸಿಗುತ್ತದೆಯೋ ಎಂದು ನೂರಾರು ಮಂದಿ ಮರಳನ್ನು ಬಗೆದು ನೋಡುತ್ತಿದ್ದಾರೆ. ಎರಡು ದಿನಗಳಿಂದ ಈ ಶೋಧನೆ ನಡೆಯುತ್ತಿದೆ. ಅದೂ ಬಿರು ಚಳಿಯನ್ನು ಲೆಕ್ಕಿಸದೆ.
“ನಾಲ್ಕರಿಂದ ಐದು ಮಂದಿ ಮೀನುಗಾರರಿಗೆ ಶುಕ್ರವಾರ ಸಮುದ್ರ ಕಿನಾರೆಯಲ್ಲಿ ಚಿನ್ನದ ತುಂಡುಗಳು ಸಿಕ್ಕಿದವು. ಅದನ್ನು ಮಾರಿ ಅವರು ಹಣ ಪಡೆದುಕೊಂಡಿದ್ದಾರೆ. ಈ ಸುದ್ದಿ ಎಲ್ಲರಿಗೂ ಗೊತ್ತಾಗಿ ನೂರಾರು ಮಂದಿ ಬಂದು ಚಿನ್ನಕ್ಕಾಗಿ ಶೋಧಿಸುತ್ತಿದ್ದಾರೆ’ ಎಂದು ಯು ಕೋಥಪಲ್ಲಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಿ. ಲೋವ ರಾಜು “ಹಿಂದುಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
ಮೀನು ಹಿಡಿಯುವ ಬಲೆ, ಬಟ್ಟೆ ಸೇರಿದಂತೆ ಹಲವು ಸಾಧನಗಳ ಮೂಲಕ ಜನರು ಚಿನ್ನಕ್ಕಾಗಿ ಮುಗಿ ಬಿದ್ದಿದ್ದಾರೆ. ಕೆಲವರಿಗೆ ಮಾತ್ರ ಚಿನ್ನದ ತುಂಡುಗಳು ಸಿಕ್ಕಿದ್ದರೂ, ಹುಡುಕಾಡುವವರು ಇನ್ನೂ ಆಶಾಭಾವನೆ ಹೊಂದಿದ್ದಾರೆ. ಇದರ ಜತೆಗೆ ದೇಗುಲಗಳಿಗೆ ಬಂದಿದ್ದ ಭಕ್ತರು ಸಮುದ್ರ ಸ್ನಾನ ಮಾಡುವಾಗ ಅವರು ಧರಿಸಿದ್ದ ಆಭರಣಗಳೂ ಕಳೆದು ಹೋಗಿರುವುದು ಕೆಲವರಿಗೆ ಸಿಕ್ಕಿರುವ ಸಾಧ್ಯತೆಗಳೂ ಇವೆ ಎನ್ನುತ್ತಾರೆ ಆ ಪೊಲೀಸ್ ಅಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.