ನಾಳೆ ಬಾಳೆ ಮುಹೂರ್ತ: ಐದನೇ ಶತಮಾನದತ್ತ ಉಡುಪಿ ಪರ್ಯಾಯ
Team Udayavani, Nov 29, 2020, 5:32 AM IST
ಸಾಂದರ್ಭಿಕ ಚಿತ್ರ
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತವು ನ. 30ರಂದು ನಡೆಯಲಿದ್ದು, ದ್ವೆವಾರ್ಷಿಕ ಪರ್ಯಾಯ ಪೂಜಾ ಪದ್ಧತಿಯಲ್ಲಿ ಇದು 4ನೇ ಶತ ಮಾನದ ಕೊನೆಯ ಘಟ್ಟ ಮತ್ತು 5ನೇ ಶತಮಾನದ ಆದಿ ಭಾಗದ ತಿರುವಿನ ಸಂಕ್ರಮಣ ಕಾಲದ್ದು ಎನಿಸಲಿದೆ.
ಮಧ್ವಾಚಾರ್ಯ ಪ್ರತಿಷ್ಠಾಪಿತ ಶ್ರೀಕೃಷ್ಣನನ್ನು ಪೂಜಿಸಲು ವಾದಿರಾಜ ಸ್ವಾಮಿಗಳು ಹಾಕಿಕೊಟ್ಟ ಪರಂಪರೆ ಈಗ ಅತಿ ಮಹತ್ವದ ಘಟ್ಟದಲ್ಲಿದೆ. ಮಧ್ವಾಚಾರ್ಯರು (1238 - 1317) ಜೀವಿತದ ಕೊನೆಯ ಭಾಗ ದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರೆಂಬ ನಂಬಿಕೆ ಇದೆ. ಇದರ ಪ್ರಕಾರ 1300ರ ಬಳಿಕ ಪ್ರತಿಷ್ಠಾಪನೆ ನಡೆದಿದೆ. ಅವರು ಎರಡು ತಿಂಗಳ ಪರ್ಯಾಯ ಕ್ರಮ ವನ್ನು ಸೂಚಿಸಿದ್ದರು. 200 ವರ್ಷಗಳ ಬಳಿಕ ಜನ್ಮತಾಳಿದ ವಾದಿರಾಜರು (1481-1601) ಎರಡು ವರ್ಷಗಳ ಪರ್ಯಾಯ ಆರಂಭಿಸಿದರು. ವಾದಿರಾಜರಿಗೆ 8 ವರ್ಷವಾಗುವಾಗ 1489ರಲ್ಲಿ ಸೋದೆ ಮಠದ ಉತ್ತರಾಧಿಕಾರಿಯಾಗಿ ಸನ್ಯಾಸಾಶ್ರಮವಾಯಿತು. 1518ರಲ್ಲಿ ಗುರು ಶ್ರೀ ವಾಗೀಶತೀರ್ಥರು ನಿರ್ಯಾಣ ಹೊಂದಿದರು. 37ನೇ ವಯಸ್ಸಿನಲ್ಲಿ ಮಠಾಧಿಪತಿಯಾದರು. 1518ರಿಂದ 1522ರ ವರೆಗೆ ಎರಡು ತಿಂಗಳ ಮೂರು ಪರ್ಯಾಯ ಪೂಜೆಯನ್ನು ನಡೆಸಿದ ವಾದಿರಾಜರು 1522ರಲ್ಲಿ ದ್ವೆ„ವಾರ್ಷಿಕ ಪರ್ಯಾಯ ಪೂಜೆ ಕ್ರಮ ಆರಂಭಿಸಿದರು. ಇದು ಆರಂಭವಾಗುವುದು ಪಲಿಮಾರು ಮಠದಿಂದ. ಅನಂತರ ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಕಾಣಿಯೂರು, ಪೇಜಾವರ ಮಠದಲ್ಲಿ ಪರ್ಯಾಯ ಚಕ್ರ ಕೊನೆಗೊಳ್ಳುವುದು.
ಮುಂದಿನದು 251ನೇ ಪರ್ಯಾಯ
1522ರಿಂದ ಆರಂಭಗೊಂಡ ಈ ಪರ್ಯಾಯ ಪೂಜಾ ಪದ್ಧತಿಗೆ 16 ವರ್ಷಗಳ 31 ಚಕ್ರಗಳು ಉರುಳಿವೆ. ಈಗ ನಡೆಯುತ್ತಿರುವುದು 250ನೇ ಪರ್ಯಾಯವಾಗಿದ್ದು, 32ನೇ ಪರ್ಯಾಯ ಚಕ್ರದಲ್ಲಿ 2ನೇಯದು. ಇದು ಅದಮಾರು ಮಠದಿಂದ ನಡೆಯುತ್ತಿದೆ. ಹೀಗೆ ಈಗ ನಡೆಯು
ತ್ತಿ ರುವುದು 499ನೇ ವರ್ಷ. 2021ರ ಜನವರಿ 18ರಂದು 500ನೇ ವರ್ಷ ಆರಂಭವಾಗುತ್ತದೆ. 2022ರ ಜನವರಿ 18ರಂದು ಪರ್ಯಾಯ ಪೂಜಾ ಸರದಿಯನ್ನು ನಿರ್ವಹಿಸುವವರು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು. ಅಂದು ಐತಿಹಾಸಿಕವಾದ 501ನೇ ವರ್ಷ ಆರಂಭಗೊಳ್ಳುತ್ತದೆ ಮತ್ತು 251ನೇ ಪರ್ಯಾಯೋತ್ಸವವಾಗಿದೆ. ಹೀಗೆ ಒಂದು ಶತಮಾನದ ಚಕ್ರ ಕೊನೆ ಗೊಂಡು ಇನ್ನೊಂದು ಶತಮಾನದ ಆರಂಭಕ್ಕೆ ನಾಂದಿ ಯಾಗುವ ಅಪೂರ್ವ ಘಳಿಗೆ.
ಅಪೂರ್ವ ಅವಕಾಶವೆಂಬ ಹರ್ಷ
5ನೇ ಶತಮಾನದ ಪೂಜೆ ಆರಂಭವಾಗುವ ಕುರಿತು ಶ್ರೀ ವಿದ್ಯಾಸಾಗರ ತೀರ್ಥರಲ್ಲಿ ಕೇಳಿದಾಗ, ಸದಾ ಗಂಭೀರ ಮುಖಮುದ್ರೆಯ ಮುಖದಲ್ಲಿ ಒಂದು ಕಿರುನಗೆ ಬೀರಿ ಹೀಗೆಂದರು: “ಇದೊಂದು ಅಪೂರ್ವ ಅವಕಾಶ, ಹೊಣೆಗಾರಿಕೆಯೂ ಸಹ. ಪ್ರಾಚೀನ ಸಂಪ್ರದಾಯ ಎಂಬುದು ಸಿದ್ಧವಾಗುತ್ತದೆ. ಈ ಅಪೂರ್ವ ಘಳಿಗೆಯನ್ನು ಸ್ಮರಣೀಯವಾಗಿಸಲು ಕಾರ್ಯಕ್ರಮವನ್ನು ಆಯೋಜಿಸಲು ಯತ್ನಿಸುತ್ತೇವೆ’.
ಕೃಷ್ಣಾಪುರ ಶ್ರೀಗಳಿಗೆ ಒಲಿದ ಯೋಗ
ಶ್ರೀ ವಿದ್ಯಾಸಾಗರತೀರ್ಥರು 4ನೇ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡುತ್ತಿದ್ದಾರೆ. 1974-75, 1990-91, 2006-07ರಲ್ಲಿ 3 ಬಾರಿ ಪರ್ಯಾಯ ಪೂಜೆ ನಿರ್ವಹಿಸಿದ್ದು 2022-23ರ ಅವಧಿಗೆ ಪೂಜಾ ಕೈಂಕರ್ಯ ನಿರ್ವಹಿಸಲಿದ್ದಾರೆ. ಆಶ್ರಮ ಜ್ಯೇಷ್ಠರಾಗಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥರು 2019ರ ಡಿ. 29ರಂದು ನಿರ್ಯಾಣರಾದ ಬಳಿಕ, 501ನೆಯ ವರ್ಷದ ಐತಿಹಾಸಿಕ ಕಾಲಘಟ್ಟ ಬರುವಾಗ
ಶ್ರೀ ವಿದ್ಯಾಸಾಗರತೀರ್ಥರೇ ಆಶ್ರಮ ಜ್ಯೇಷ್ಠರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.