![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 29, 2020, 11:34 AM IST
ರಾಮನಗರ: 20 ದಿನಗಳಿಂದ 3 ಸಾವಿರಕ್ಕೂ ಅಧಿಕ ಕಾರ್ಮಿಕರು ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಸಂಪುಟ ವಿಸ್ತರಣೆ, ಜಾತಿ ಆಧಾರದಲ್ಲಿ ನಿಗಮ, ಮಂಡಳಿ ಸ್ಥಾಪನೆಯಲ್ಲೇ ಮುಳುಗಿದೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ಶಾಸಕ ಸುರೇಶ್ ಗೌಡ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ನೌಕರರು ನಡೆಸುತ್ತಿರುವ ಬೆಂಬಲ ವ್ಯಕ್ತಪ ಡಿಸಿ ಅವರು ಮುಷ್ಕರ ಸ್ಥಳಕ್ಕೆ ಭೇಟಿ ಕೊಟ್ಟು ಮಾತನಾಡಿದರು. ಬಿಜೆಪಿ ಸರ್ಕಾರ ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದರು.
ರಾಜ್ಯ ಕಾರ್ಮಿಕ ಮತ್ತು ಕೈಗಾರಿಕಾ ಸಚಿವರು ಮೌನಕ್ಕೆ ಜಾರಿದ್ದಾರೆ. ಡಿಸಿಎಂ ಅಶ್ವಥ್‌ನಾರಾಯಣ ಅವರು ಕಾಟಾಚಾರಕ್ಕೆ ಸಂಧಾನ ಸಭೆ ನಡೆಸಿ ಕೈತೊಳೆದುಕೊಂಡಿದ್ದಾರೆ. ಕಾರ್ಮಿಕರು ಮತ್ತು ಕಂಪೆನಿಯ ಆಡಳಿತ ವರ್ಗದ ನಡುವೆ ಸಾಮರಸ್ಯ ಮೂಡುತ್ತಿಲ್ಲ. ತಾವು ಸಚಿವರಾಗಲು ಬಿಜೆಪಿ ಶಾಸಕರು ದುಂಬಾಲು ಬಿದ್ದು ಲಾಬಿ ನಡೆಸುತ್ತಿರುವುದರಿಂದ ಬಿಎಸ್‌ವೈ ಸರ್ಕಾರ ಗೊಂದಲದಲ್ಲಿ ಮುಳು ಗಿದೆ. ಇನ್ನು ಕಾರ್ಮಿಕರು ಇವರಿಗೆ ನೆನೆಪು ಹೇಗೆ ಬರಬೇಕು ಎಂದರು.
ಇದನ್ನೂ ಓದಿ : ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು
ಟೊಯೋಟಾ ತನ್ನ ಕಾರ್ಮಿಕರನ್ನು ಅಮಾನತ್ತಿಲ್ಲಿಟ್ಟಿರುವುದು ಸರಿಯಲ್ಲ. ಕಾರ್ಮಿಕ ಸಂಘದಒಗ್ಗಟ್ಟನ್ನುಮುರಿಯಲುಆಡಳಿತ ಮಂಡಳಿಗೆ ಸಾಧ್ಯವಾಗಿಲ್ಲ. ಟೊಯೋಟಾಗೆ ಕಾರ್ಮಿಕರ ಶಕ್ತಿ ಏನೆಂದು ಅರಿವಾಗಿದೆ ಎಂದರು. ಇನ್ನಾದರೂ ಆಡಳಿತ ವರ್ಗ ಹಠಮಾರಿ ಧೋರಣೆಯನ್ನು ಬಿಟ್ಟು ಕಾರ್ಮಿಕರ ಕನಿಷ್ಠಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು.
ಮಂಡ್ಯ ಕಾರ್ಮಿಕರೂ ಇದ್ದಾರೆ: ಕಾರ್ಮಿಕರ ಹೋರಾಟದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸಭೆ ನಡೆದಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಹೋರಾಟಕ್ಕೆ ನಮ್ಮ ಪಕ್ಷ ಕೈಜೋಡಿಸಲಿದೆ. ಕಾರ್ಖಾನೆಯಲ್ಲಿ ಮಂಡ್ಯ ಜಿಲ್ಲೆಯ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅನ್ಯಾಯವಾದರೆ ಮಂಡ್ಯದ ಜನ ಕ್ಷಮಿಸುವುದಿಲ್ಲ. ಕಾರ್ಮಿಕರ ಕುಟುಂಬಗಳ ಜತೆಗೆ ಜನರು ಬೀದಿಗಿಳಿದರೆ ಮುಂದಾಗುವ ಸಮಸ್ಯೆಗೆ ಆಡಳಿತ ಮಂಡಳಿ ಹೊಣೆಯಾಗಲಿದೆ ಎಂದು ಎಚ್ಚರಿಸಿದರು. ಟಿಕೆಎಂ ಕಾರ್ಮಿಕ ಸಂಘದ ಅಧ್ಯಕ್ಷ
ಪ್ರಸನ್ನ ಕುಮಾರ್ ಚಕ್ಕೆರೆ ಮಾತನಾಡಿ, ನವ ಜೀವನ ಎಂಬ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆತಂದಿರುವ ಕಂಪೆನಿ ಈಗಾಗಲೇ 1 ಸಾವಿರಕ್ಕೂ ಅಧಿಕನೌಕರರನ್ನು ಮನೆಗೆ ಕಳುಹಿಸಿದೆ. ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡಿ ನಂತರ ಬೀದಿಗೆ ತಳ್ಳುವ ಹೊಸ ಪದ್ದತಿಯನ್ನು ಹುಟ್ಟುಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆ: ಮುಷ್ಕರ ನಿರತ ಕಾರ್ಮಿಕರು ಕನ್ನಡ ರಾಜ್ಯೋತ್ಸವ ಆಚರಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಸುರೇಶ್‌ಗೌಡ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಎಚ್ ಎಎಲ್ ಕಾರ್ಮಿಕ ಸಂಘದ ಪದಾಧಿಕಾರಿಗಳು, ಕರವೇ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಇದ್ದರು.
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
DK Shivakumar: ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ?- ಡಿಕೆಶಿ
Ramanagara: ಬೆಂ.-ಮೈ. ಎಕ್ಸ್ ಪ್ರೆಸ್‌ವೇ ಬಿಡದಿ ಎಕ್ಸಿಟ್ ಬಂದ್
Ramanagara: ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಡಿಕೆಸು ಕಣ್ಣು ?
Kudur: ಬಿಡಿಸಿಸಿ ಬ್ಯಾಂಕ್‌ನಲ್ಲಿರುವ ಚಿನ್ನದ ಅವ್ಯವಹಾರದ ಆರೋಪ
You seem to have an Ad Blocker on.
To continue reading, please turn it off or whitelist Udayavani.