![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 29, 2020, 6:39 PM IST
ಸಿಡ್ನಿ: ಭಾರತ ಆಸೀಸ್ ಎರಡನೇ ಏಕದಿನ ಪಂದ್ಯದ ವೇಳೆ, ಭಾರತೀಯ ಮೂಲದ ಯುವಕನೊಬ್ಬ, ಆಸ್ಟ್ರೇಲಿಯಾ ಮೂಲದ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪಂದ್ಯದ ನಡುವೆಯೇ ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತಿದ್ದ ಯುವತಿಯ ಬಳಿ ತೆರಳಿದ ಭಾರತೀಯ ಯುವಕ, ಮಂಡಿಯೂರಿ ಉಂಗುರ ಮುಂದಿಟ್ಟು ಪ್ರಪೋಸ್ ಮಾಡಿದ್ದಾನೆ. ಯುವತಿ ತಕ್ಷಣ ಒಪ್ಪಿಗೆ ನೀಡಿದ್ದು, ಪರಸ್ಪರ ಚುಂಬಿಸುವ ಮೂಲಕ ಪ್ರೀತಿಯ ಪಯಣ ಆರಂಭಿಸಿದ್ದಾರೆ. ಈ ಮಧುರ ಕ್ಷಣ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದು ನೂರಾರು ಮಂದಿ ಕ್ರೀಡಾಭಿಮಾನಿಗಳು ನವಜೋಡಿಗೆ ಶುಭಹಾರೈಸಿದ್ದಾರೆ.
ಈ ವೇಳೆ ಆಸ್ಟ್ರೇಲಿಯಾ ಆಟಗಾರ ಮ್ಯಾಕ್ಸ್ ವೆಲ್ ಕೂಡ ಸುಮಧುರ ಕ್ಷಣವನ್ನು ವೀಕ್ಷಿಸಿ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
Where dreams come true ? ❤️#LoveOurSCG #AUSvIND pic.twitter.com/MqS3XZMaig
— Sydney Cricket Ground (@scg) November 29, 2020
ಎರಡನೇ ಏಕದಿನ ಪಂದ್ಯದಲ್ಲಿ ಆಸೀಸ್ ನೀಡಿದ 390 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ತಲುಪಲಾಗದೆ ಭಾರತ 338 ರನ್ ಗಳಿಸಿ ಸೋಲಿಗೆ ಶರಣಾಯಿತು. ಆ ಮೂಲಕ 3 ಏಕದಿನ ಪಂದ್ಯಗಳಲ್ಲಿ 2ರಲ್ಲಿ ಸೋತು ಭಾರತ ಸರಣಿಯನ್ನು ಕೈಚೆಲ್ಲಿದೆ.
ಇಂದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಕೇವಲ 11 ರನ್ ಗಳ ಅಂತರದಿಂದ 71 ನೇ ಅಂತರಾಷ್ಟ್ರೀಯ ಶತಕವನ್ನು ಸಿಡಿಸುವಲ್ಲಿ ವಿಫಲರಾದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.