ಮುಂಬಯಿ: ಸ್ಥಳೀಯ ರೈಲು ಸಂಚಾರ : ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಳ!


Team Udayavani, Nov 29, 2020, 6:53 PM IST

mumbai-tdy-1

Representative Image

ಮುಂಬಯಿ, ನ. 28: ಮುಂಬಯಿ ಸ್ಥಳೀಯ ರೈಲು ಗಳಲ್ಲಿ ಸಾರ್ವಜನಿಕರನ್ನು ಹೊರತುಪಡಿಸಿ ಇತರ ಸೇವಾ ಸಿಬಂದಿಗೆ ಅವಕಾಶ ನೀಡುವುದರ ಜತೆಗೆ ಮಧ್ಯ ಮತ್ತು ಪಶ್ಚಿಮ ಮಾರ್ಗಗಳಲ್ಲಿಯ ರೈಲಿ ನಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗ ತೊಡಗಿದೆ. ರೈಲ್ವೇ ಆಡಳಿತ 2020ರ ಜೂನ್‌ನಿಂದ ಇಲ್ಲಿಯ ತನಕ ಮುಂಬಯಿ ಉಪನಗರಗಳ ರೈಲು ನಿಲ್ದಾಣಗಳಲ್ಲಿ ಹಾಗೂ ಮೇಲ್ ಎಕ್ಸ್‌ಪ್ರೆಸ್‌ ಗಳ ಟರ್ಮಿನಸ್‌ಗಳಲ್ಲಿ ಕಾರ್ಯಾಚರಣೆ ನಡೆಸಿ ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿರುವ 43,526 ಪ್ರಯಾಣಿಕರನ್ನು ಪತ್ತೆ ಹಚ್ಚಿವೆ.

ಇದರಲ್ಲಿ ಉಪನಗರಗಳ ಸ್ಥಳೀಯ ರೈಲು ಮಾರ್ಗ ಗಳಲ್ಲಿ ಪ್ರಯಾಣಿಸಿದ 39,516 ಪ್ರಯಾಣಿ ಕರನ್ನು ಒಳಗೊಂಡಿದೆ ಎಂದು ರೈಲ್ವೆ ಆಡಳಿತ ತಿಳಿಸಿದೆ. ಅಲ್ಲದೆ, ಅಗತ್ಯ ಸೇವೆಗಳಿಗಾಗಿ ನಕಲಿ ಗುರುತಿನ ಚೀಟಿಗಳೊಂದಿಗೆ ಸ್ಥಳೀಯವಾಗಿ ಪ್ರಯಾಣಿ ಸಲು ಅನುಮತಿ ಸುವ ಜನರ ಸಂಖ್ಯೆಯೂ ಹೆಚ್ಚಾಗತೊಡ ಗಿದೆ. ತುರ್ತು ಸೇವೆಗಳಲ್ಲಿ ತೊಡಗಿರುವ ಬ್ಯಾಂಕ್‌ ನೌಕ ರರು, ವಕೀಲರು, ಡಬ್ಟಾವಾಲಾಗಳು, ಶಿಕ್ಷಕರು ಮತ್ತು ಮಹಿಳೆ ಯರಿಗೆ ಮಾತ್ರ ಸ್ಥಳೀಯ ರೈಲಿನಲ್ಲಿ ಪ್ರಯಾಣಿ ಸಲು ಅವಕಾಶ ನೀಡಲಾಗಿದೆ. ಈ ವೇಳೆ ಅಗತ್ಯ ಸೇವಾ ಸಿಬಂದಿಗೆ ಗುರುತಿನ ಚೀಟಿ ಮತ್ತು ಕ್ಯೂಆರ್‌ ಕೋಡ್‌ ಇ-ಪಾಸ್‌ ಹೊಂದಿರು ವವ ರಿಗೆ ಮಾತ್ರ ಟಿಕೆಟ್‌ ಲಭ್ಯವಿದ್ದರೆ, ಅಗತ್ಯ ಸೇವಾ ಸಿಬಂದಿ ಯನ್ನು ಹೊರತುಪಡಿಸಿ ಇತರ ಮಹಿಳೆಯರಿಗೆ ಪ್ರಯಾಣದ ಸಮಯವನ್ನು ನಿಗದಿ ಪಡಿಸಲಾಗಿದೆ. ಈ ವೇಳೆ ಕೆಲವು ಪ್ರಯಾಣಿಕರು ಟಿಕೆಟ್‌ ಪಡೆ ಯದೆ ಪ್ರಯಾಣಿಸುವವರ ಸಂಖ್ಯೆಯು ಹೆಚ್ಚಾಗಲಾರಂಭಿ ಸಿದ್ದು, ಇದರ ವಿರುದ್ಧ ಟಿಕೆಟ್‌ ಇನ್‌ ಸ್ಪೆಕ್ಟರ್‌ಗಳು ಕ್ರಮ ಕೈಗೊಳ್ಳಲಾರಂಭಿಸಿದ್ದಾರೆ ಎಂದು ಮಧ್ಯ ರೈಲ್ವೆ ತಿಳಿಸಿದೆ.

200 ನಕಲಿ ಗುರುತಿನ ಚೀಟಿ ವಶಕ್ಕೆ : ಸಾಮಾನ್ಯ ಪ್ರಯಾಣಿಕರಿಗೆ ಸ್ಥಳೀಯವಾಗಿ ಪ್ರಯಾಣಿ ಸಲು ಅವಕಾಶ ವಿಲ್ಲದ ಕಾರಣ, ಅನೇಕ ಜನರು ಅಗತ್ಯ ಸೇವೆ ಗಳ ನಕಲಿ ಗುರುತಿನ ಚೀಟಿಗಳನ್ನು ತಯಾರಿಸಿ ಕೊಳ್ಳುವುದರ ಜತೆಗೆ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವುದು ಕಂಡುಬಂದಿದೆ. ಅಂತವರ ವಿರುದ್ಧ ಕಾರ್ಯಾ ಚರಣೆ ನಡೆಸಿದ ರೈಲ್ವೇ ಆಡಳಿತ ಸಿಬಂದಿ ಈವರೆಗೆ 200 ನಕಲಿ ಗುರುತಿನ ಚೀಟಿಗಳನ್ನು ವಶ ಪಡಿಸಿ ಕೊಂಡಿದ್ದಾರೆ. ಜತೆಗೆ ಗುರುತಿನ ಚೀಟಿ ತಯಾಸಿ ದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣ ದಲ್ಲಿ 7 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ನಕಲಿ ಟಿಕೆಟ್‌ ಮಾರಾಟ: ಗ್ಯಾಂಗ್‌ ಪತ್ತೆ ನಕಲಿ ಟಿಕೆಟ್‌ ಮಾರಾಟ ಮಾಡುವ ಜಾಲವನ್ನು ಭೇದಿಸುವಲ್ಲಿ ಥಾಣೆ ಆರ್‌ಪಿಎಫ್‌ ತಂಡ ಯಶಸ್ವಿಯಾಗಿದೆ. ರೈಲ್ವೆ ನೌಕರರ ಸಹಾಯದಿಂದ ಟಿಕೆಟ್‌ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ನೌಕರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಇಲ್ಲಿಯ ತನಕ ಸುಮಾರು 1,000 ಪ್ರಯಾಣಿಕರಿಗೆ ನಕಲಿ ಟಿಕೆಟ್‌ ನೀಡಿ ವಂಚಿಸಿರುವುದು ಕಂಡುಬಂದಿದೆ. ಆರೋಪಿಗಳ ಬಳಿಯಿಂದ 1.90 ಲಕ್ಷ ಮೌಲ್ಯದ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಎಜೆಂಟ್‌ಗಳ ಬಳಿಯಿಂದ ನಕಲಿ ಟಿಕೆಟ್‌ಗಳನ್ನು ನೀಡಲಾಗುತ್ತಿದೆ ಎಂದು ಸಂದೀಪ್‌ ಗುಪ್ತಾ ಎಂಬ ವ್ಯಕ್ತಿಯು ಥಾಣೆ ಆರ್‌ಪಿಎಫ್‌ಗೆ ದೂರು ನೀಡಿದ್ದರು. ಗುಪ್ತಾ ಜಸ್ಟ್ ಡಯಲ್ ಆಧಾರಿತ ಬ್ರೋಕರ್‌ನಿಂದ ಇ-ಟಿಕೆಟ್‌ ಖರೀದಿಸಿದ್ದು, ಅದು ನಕಲಿ ಎಂದು ತಿಳಿದು  ಬಂದಿದೆ. ಈ ಪ್ರಕರಣವು ಥಾಣೆ ರೈಲ್ವೆ ಭದ್ರತಾ ಪಡೆಗೆ ಹಸ್ತಾಂತರಿ ಸಲಾಯಿತು. ಇದರ ವಿರುದ್ಧ ತನಿಖೆ ನಡೆಸಿದಾಗ ಜಸ್ಟ್ ಡಾಯಲ್‌ನಲ್ಲಿ ವ್ಯಕ್ತಿಯೊಬ್ಬ ರೈಲ್ವೆ ಟಿಕೆಟ್‌ ಎಜೆಂಟ್‌ ಎಂದು ಹೇಳಿಕೊಂಡು ನಕಲಿ ಟಿಕೆಟ್‌ ಗಳನ್ನು ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ.

ಪಶ್ಚಿಮ ರೈಲ್ವೆಯ ದಾದರ್‌ನಲ್ಲಿ ಪಿಆರ್‌ಎಸ್‌ನಲ್ಲಿ ಕೆಲಸ ಮಾಡುವ ನೀರಜ್‌ ತಿವಾರಿ ಅವರಿಂದ ಕಾಯ್ದಿರಿಸಿದ ಟಿಕೆಟ್‌ಗಳ ಪಿಎನ್‌ಆರ್‌ ಸಂಖ್ಯೆಯನ್ನು ತೆಗೆದುಕೊಂಡು ಎಚ್‌ಒ ಕೋಟಾದಿಂದ ಟಿಕೆಟ್‌ ನೀಡಲಾಗುತ್ತದೆ ಎಂದು ತಿಳಿಸಿ ಪ್ರಯಾಣಿಕರನ್ನು ವಂಚಿಸುತ್ತಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಲಾತೂರ್‌ ನಿಂದ ಶಶಿ ಭೀಮರಾವ್‌ ಸಲೋನ್‌ ಮತ್ತು ರೈಲ್ವೆ ಉದ್ಯೋಗಿ ಕೃಷ್ಣ ಅವರನ್ನು ಸಹ ಬಂಧಿಸಲಾಗಿದೆ ಎಂದು ಮಧ್ಯ ರೈಲ್ವೆ ತಿಳಿಸಿದೆ.

ಟಾಪ್ ನ್ಯೂಸ್

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

KLE Technological University: Awarded Honorary Doctorate to Murugesh Nirani

KLE Technological University: ಮುರುಗೇಶ್‌ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

Kiran Raj will be a superhero in next film

Kiran Raj: ಸೂಪರ್‌ ಹೀರೋ ಆಗಲಿದ್ದಾರೆ ಕಿರಣ್‌ ರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.