ಆರ್ಥಿಕ ಹೊರೆ ತಪ್ಪಿಸಲು ತಂತ್ರ : ಸದ್ದಿಲ್ಲದೆ ಹುದ್ದೆ ಕಡಿತ
Team Udayavani, Nov 30, 2020, 6:57 AM IST
ಬೆಂಗಳೂರು: ಸರಕಾರವು ಆರ್ಥಿಕ ಹೊರೆಯಿಂದ ಪಾರಾಗಲು ವೆಚ್ಚ ನಿಯಂತ್ರಣಕ್ಕೆ ಮುಂದಾಗಿದ್ದು, ಸದ್ದಿಲ್ಲದೆ ಸರಕಾರಿ ಇಲಾಖೆಗಳಲ್ಲಿ ಹುದ್ದೆಗಳ ಕಡಿತ ಆರಂಭಿಸಿದೆ.
ಮೊದಲ ಹಂತದಲ್ಲಿ ಸಚಿವಾಲಯದ ಅನಗತ್ಯ ಹುದ್ದೆಗಳ ಕಡಿತ ಆರಂಭಿಸಿದ್ದು, ವಿವಿಧ ಇಲಾಖೆ ಗಳಲ್ಲಿ ಅಧೀನ ಕಾರ್ಯದರ್ಶಿ ಹುದ್ದೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ ಸುಮಾರು 542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಇಲಾಖೆಗಳ ವಿಲೀನ ಮತ್ತು ಅನಗತ್ಯ ಹುದ್ದೆ ರದ್ದುಗೊಳಿಸುವ ಉದ್ದೇಶದಿಂದ ಸಂಪುಟ ಉಪ ಸಮಿತಿ ರಚನೆ ಮಾಡಿದೆ. ಈ ಸಮಿತಿ ಇನ್ನೂ ಅಂತಿಮ ವರದಿ ನೀಡಿಲ್ಲ. ಆದರೆ ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಅನಗತ್ಯ ಹುದ್ದೆಗಳನ್ನು ಕಡಿತಗೊಳಿಸುವ ಕಾರ್ಯ ಆರಂಭಿಸಿದೆ.
ಎಲ್ಲೆಲ್ಲಿ ಹುದ್ದೆ ರದ್ದು?
ಮೊದಲ ಹಂತದಲ್ಲಿ ವಿವಿಧ ಇಲಾಖೆಗಳಲ್ಲಿ ರಚನೆಯಾಗಿದ್ದ ಕಾನೂನು ಕೋಶದ ಮುಖ್ಯಸ್ಥರು, ಅಧೀನ ಕಾರ್ಯದರ್ಶಿ, ಶೀಘ್ರ ಲಿಪಿಕಾರರು, ಕಿರಿಯ ಸಹಾಯಕರು ಮತ್ತು ದಲಾಯತ್ ಹುದ್ದೆಗಳನ್ನು ರದ್ದು ಮಾಡಿ ಆದೇಶ ನೀಡಲಾಗಿದೆ.
ಗುತ್ತಿಗೆ ನೌಕರರ ಹೆಚ್ಚಳ ಆರೋಪ
ಆಡಳಿತ ಸುಧಾರಣೆ ಹೆಸರಲ್ಲಿ ಹುದ್ದೆ ಕಡಿತ ಮಾಡಿ ಹೊರ ಗುತ್ತಿಗೆ ಆಧಾರದಲ್ಲಿ ಸಿಬಂದಿ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡ ಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇಲಾಖೆ ಗಳಲ್ಲಿ ಗುಮಾಸ್ತರಿಂದ ಹಿಡಿದು ಸಚಿವರು ಮತ್ತು ಮುಖ್ಯ ಮಂತ್ರಿ ಅವರ ವಿಶೇಷ ಕರ್ತವ್ಯ ಅಧಿಕಾರಿ ಹುದ್ದೆ ಯವರೆಗೂ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಕೊಳ್ಳುವ ಪ್ರಕ್ರಿಯೆ ಹೆಚ್ಚಾ ಗಿದೆ. ಇಂಥ ಸಂದರ್ಭದಲ್ಲಿ ಸರಕಾರವು ಏಜೆನ್ಸಿಗೆ ಹೆಚ್ಚಿನ ಸಂಬಳ ನೀಡಿದರೂ ಅವು ನೌಕರರಿಗೆ ಕಡಿಮೆ ಸಂಬಳ ನೀಡುತ್ತವೆ. ಆಗ ದಕ್ಷತೆಯ ಕೆಲಸ ನಿರೀಕ್ಷಿಸುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ.
ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತೆಗೆದು ಹಾಕಲು ಯಾವಾಗಲೂ ಅವಕಾಶ ಇರುತ್ತದೆ. ಇದು ಆಡಳಿತದ ನಿರಂತರ ಪ್ರಕ್ರಿಯೆ ಅಷ್ಟೆ.
-ಮನೀಶ್ ಮೌದ್ಗಿಲ್, ಡಿಪಿಎಆರ್, (ಆಡಳಿತ ಸುಧಾರಣೆ) ಕಾರ್ಯದರ್ಶಿ
ಖಾಲಿ ಹುದ್ದೆ ಭರ್ತಿ
ಮಾಡುವ ಬದಲು ಹೊರ ಗುತ್ತಿಗೆ ಮತ್ತು ನಿವೃತ್ತರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಸರಕಾರ ಹುದ್ದೆ ಕಡಿತ ಮಾಡಿರುವುದನ್ನು ವಾಪಸ್ ಪಡೆಯ ದಿದ್ದರೆ ಹೋರಾಟ ಮಾಡಬೇಕಾಗುತ್ತದೆ.
-ಗುರುಸ್ವಾಮಿ, ಕರ್ನಾಟಕ ರಾಜ್ಯ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ
ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.